ಬೆಂಗಳೂರು ಗ್ರಾಮಾಂತರ

ಎಲ್ಲೆಂದರಲ್ಲಿ ತ್ಯಾಜ್ಯ, ಕಸ ಹಾಕಿದರೆ ದಂಡ

Published On :

ಸೂಲಿಬೆಲೆ: ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿರುವ ಸೂಲಿಬೆಲೆ ಗ್ರಾಪಂ 8 ವಾರ್ಡ್ಗಳಲ್ಲಿ ಕದ್ದು, ಮುಚ್ಚಿ ಗ್ರಾಪಂ ಪೈಪ್ಲೈನ್ನಿಂದ ಅಕ್ರವಾಗಿ ನೀರಿನ ಸಂಪರ್ಕ(ಸಂಪು) ಗಳಿಗೆ ಸದ್ಯದಲ್ಲಿ ಬೀಳಲಿದೆ ಕತ್ತರಿ. ಹಾಗಂತ ಶುಕ್ರವಾರ ನಡೆದ ಗ್ರಾಪಂ ಮಾಸಿಕ ಸಭೆಯಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ. ಇಷ್ಟು ದಿನ ತಮ್ಮಗಿಷ್ಟ ಬಂದಂತೆ ನೀರನ್ನು ಕದಿಯುತ್ತಿದವರಿಗೆ ಕೊನೆಗೂ ಗ್ರಾಪಂ ಮೂಗುದಾರ ಹಾಕಲು ಮುಂದಾಗಿರುವುದು ಸೌಲಭ್ಯಗಳ ಸಮಾನತೆಗೆ ಕಾರಣವಾಗಲಿದೆ.
ಗ್ರಾಪಂ ಕಚೇರಿ ಆವರಣದಲ್ಲಿ ನಾನಾ ವಿಷಯಗಳಿಗೆ ಸಂಬಂಧಪಟ್ಟಂತೆ ಗ್ರಾಪಂ ಅಧ್ಯಕ್ಷ ಕೆ.ನಾರಾಯಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವ್ಯಾಪಕ ಚರ್ಚೆಯಾಯಿತು. ಮುಂಬರುವ ದಿನಗಳಲ್ಲಿ ಬೇಸಿಗೆಯ ಕಾವು ಹೆಚ್ಚಾಗಲಿದ್ದು, ಈಗಲೇ ನೀರಿನ ಅಭಾವ ಸೃಷ್ಟಿಯಾಗಿ ಜನಕ್ಕೆ ಸಕಾಲಕ್ಕೆ ನೀರು ಸಿಗದಾಗಿ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಲಭ್ಯ ನೀರನ್ನು ಪ್ರತಿವಾರ್ಡ್ಗೆ 2-3 ದಿನಕ್ಕೊಮ್ಮೆ ನೀಡಬೇಕಾದರೇ ಅಕ್ರಮ ಸಂಪುಗಳಿಗೆ ಕತ್ತರಿ ಹಾಕಬೇಕಾಗುತ್ತದೆ.ಕೆಲವರು ಅಧಿಕಾರವನ್ನು ದುರ್ಬಳಕೆ ಮಾಡಿ ತಮ್ಮ ಮನೆಗಳಿಗೆ ಸಂಪು ಸಂಪರ್ಕಪಡೆದುಕೊಂಡಿದ್ದಾರೆ.
 ಉಳ್ಳವರು, ಬಲಾಢ್ಯರು ನೀರು ಕದಿಯುತ್ತಿದರೆ, ಸಾಮಾನ್ಯ ಜನ,ಬಡವರು ನೀರಿಗಾಗಿ ಪರದಾಡುವಂತಾಗಿದೆ. ಕೂಡಲೇ ಅಕ್ರಮ ಸಂಪುಗಳಿಗೆ ಕತ್ತರಿ ಹಾಕಿ. ಇದಕ್ಕೆ ಅಧಿಕಾರಿಗಳ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.