ಬೆಂಗಳೂರು ಗ್ರಾಮಾಂತರ

ಇಂದು-ನಾಳೆ ಸಾಧನ ಕುಟೀರ ನೂತನ ಕಟ್ಟಡ ಉದ್ಘಾಟನೆ

Published On :

ಮಾಗಡಿ: ತಾಲೂಕಿನ ಪೋಲೋಹಳ್ಳಿ ಭವತಾರಿಣಿ ಆಶ್ರಮದಲ್ಲಿ ಫೆ.22 ಮತ್ತು 23 ರಂದು ಸಾಧನ ಕುಟೀರ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿರುವುದಾಗಿ ಆಶ್ರಮದ ಮಾತಾ ವಿವೇಕಮಯಿ ತಿಳಿಸಿದರು.
ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಹರ್ಷಾನಂದಜೀ ಸಾನ್ನಿಧ್ಯ ವಹಿಸಿ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಜಗದಾತ್ಮಕನಂದಜೀ ಮಹಾರಾಜ್, ಊಟಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ರಾಘವೇಶಾನಂದಜೀ ಮಹಾರಾಜ್, ಬೆಂಗಳೂರಿನ ಹಲಸೂರು ರಾಮಕೃಷ್ಣ ಮಠದ ತತ್ವ್ತರೂಪಾನಂದಜೀ ಮಹಾರಾಜ್, ಮಂಗಳೂರು ರಾಮಕೃಷ್ಣ ಮಠ ಮತ್ತು ಮಿಷನ್ ಅಧ್ಯಕ್ಷ ಜಿತಕಾಮನಂದಜೀ ಮಹಾರಾಜ್, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸಂನ್ಯಾಸಿ-ಸಂನ್ಯಾಸಿನಿಯರು ಭಾಗವಹಿಸಲಿದ್ದಾರೆ.  
ಕುಟೀರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಫೆ.22 ರಂದು ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಭವತಾರಿಣಿ ಸ್ಮರಣೋತ್ಸವ, ಶತಚಂಡಿಕಾ ಹೋಮ, ಸಾಧು ಸೇವೆ ಮತ್ತು ಆಶೀರ್ವಚನ. ಮಧ್ಯಾಹ್ನ 2 ರಿಂದ 5 ಗಂಟೆಯವರೆಗೆ ರಾಮಕೃಷ್ಣ ಸ್ಮರಣೋತ್ಸವ, ಸಾಧುಭಕ್ತ ಸಮಾವೇಶ ಸಹ ನಡೆಯಲಿದೆ. ಫೆ.23 ರಂದು ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಶಾರದ ಸ್ಮರಣೋತ್ಸವ, ಭಕ್ತ ಸಮ್ಮೇಳನ, ಮಧ್ಯಾಹ್ನ 2 ಗಂಟೆಯಿಂದ 4.30 ರವೆರೆಗೆ ಸ್ವಾಮಿ ವಿವೇಕಾನಂದಸ್ವಾಮಿ ಸ್ಮರಣೋತ್ಸವ ಹಾಗು ಭಕ್ತ ಸಮ್ಮೇಳನ ನಡೆಯಲಿದೆ. ಮಾಹಿತಿಗಾಗಿ ಮೊ.97311-97247 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.