ಬೆಂಗಳೂರು ಗ್ರಾಮಾಂತರ

ಹೇಮಾವತಿ ಯೋಜನೆಗೆ ಶೀಘ್ರದಲ್ಲೇ ಗುದ್ದಲಿಪೂಜೆ: ಮಂಜು

Published On :

ಮಾಗಡಿ: ಕಳೆದ 20 ವರ್ಷಗಳ ಜನತೆಯ ಹೇಮಾವತಿ ನೀರಿನ ಯೋಜನೆಯ ಕನಸು ಈಡೇರುವ  ಸಂದರ್ಭ ಒದಗಿ ಬಂದ ಹಿನ್ನೆಲೆಯಲ್ಲಿ  ಕೆಪಿಸಿಸಿ ಸದಸ್ಯ ಎ.ಮಂಜು ನೇತೃತ್ವದಲ್ಲಿ ಇಲ್ಲಿನ ಕಲ್ಯಾಗೇಟ್ ಸಾರ್ವಜನಿಕ ಶ್ರೀವರಸಿದ್ದಿವಿನಾಯಕಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
 ಇದೇ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಎ.ಮಂಜು ಮಾಗಡಿಗೆ ಹೇಮಾವತಿ ನೀರಿನ ಯೋಜನೆಯ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 277.50 ಕೋಟಿ ರು. ವೆಚ್ಚದ ಯೋಜನೆ ಕಾಮಗಾರಿಗೆ ಒಪ್ಪಿಗೆ ನೀಡಿದ್ದು, ಅತಿ ಶೀಘ್ರದಲ್ಲಿಯೇ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಬಹುದಿನಗಳ ಜನರ
ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು.
ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಕನಸಿನ ಕೂಸು ಹೇಮಾವತಿ. ಹೇಮಾವತಿ ನೀರಾವರಿ ಯೋಜನೆ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದು, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಉಸ್ತವಾರಿ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್,  ಕ್ಷೇತ್ರದ ಜನತೆಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
   ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಚಿಗಳೂರು ಗಂಗಾಧರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಿರಿಯಣ್ಣ,ಪುರಸಭಾ ಸದಸ್ಯರಾದ ಮಂಜುನಾಥ್, ಕೆ.ವಿ. ಬಾಲು, ಶಿವಕುಮಾರ್, ಮಹೇಶ್, ಮಹದೇವ್, ನಿರ್ಮಲಾ ಸೀತಾರಾಂ, ಸುಶೀಲಮ್ಮ ರಂಗಹನುಮಯ್ಯ, ಮಾಜಿ ಅಧ್ಯಕ್ಷರಾದ ಪಿ.ವಿ.ಸೀತಾರಾಂ, ಟಿ.ಭೋಗೇಶ್, ರಂಗಹನುಮಯ್ಯ, ಬಿ.ವಿ.ಜಯರಾಮು, ಬಿ.ಎಸ್. ಸುಹೇಲ್, ಮಂಜುನಾಥ್, ಪುರುಷೋತ್ತಮ್, ಗಾಣಕಲ್ ನಟರಾಜು, ಮೂರ್ತಿ, ಕೆ.ಸಿ. ಚಿಕ್ಕಣ್ಣ,ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ರೇವಣ್ಣ, ಉಪಾಧ್ಯಕ್ಷ ಕಾರ್ತೀಕ್, ಜಯರಾಮು, ಕುಮಾರ್, ರಂಗನಾಥ್, ನಾಗರಾಜು, ಶಂಕರ್, ಜಯಣ್ಣ ಸೇರಿ ನೂರಾರು ಕಾಂಗ್ರೆಸ್  ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.