ಬೆಂಗಳೂರು ಗ್ರಾಮಾಂತರ

ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಗೆ ವಡವಾಟಿ ಶಾರದಾ ಭರತ್ ನೇಮಕ

Published On :

ರಾಮನಗರ: ಜಿಲ್ಲೆಯವರಾದ ಹಿಂದುಸ್ಥಾನಿ, ಶಾಸ್ತ್ರೀಯ ಸಂಗೀತ, ಖ್ಯಾತ ವಚನ ಸಂಗೀತ ಗಾಯಕಿ ವಡವಾಟಿ ಶಾರದಾ ಭರತ್ ಅವರನ್ನು ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಸದಸ್ಯರನ್ನಾಗಿ ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
ವಡವಾಟಿ ಶಾರದಾ ಭರತ್ ವಿಶ್ವ ವಿಖ್ಯಾತ ಕ್ಲಾರಿಯೋನೆಟ್ ವಾದಕರಾ ಡಾ. ಪಂ. ನರಸಿಂಹಲು ವಡವಾಟಿ ಅವರ ಪುತ್ರಿ. ವಚನದಲ್ಲಿ ಆಕಾಶವಾಣಿಯ ಎ ಗ್ರೇಡ್ ಕಲಾವಿದರು. ಅನೇಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಕಾರ್ಯಕ್ರಮ  ನೀಡಿದ್ದಾರೆ. ಮಾನ್ಸೂನ್, ಬಸವೇಶ್ವರ ವಚನಾಮೃತ, ಸಂಗನ ಬಸವ ಮುಂತಾದ ಧ್ವನಿ ಸುರುಳಿ ಜನಪ್ರಿಯವಾಗಿವೆ.ಇವರು ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷರು ಹೌದು.
ಮೂಲತಃ ರಾಯಚೂರಿನವರಾದ ವಡವಾಟಿ ಶಾರದಾ ಭರತ್ ಕನಕಪುರದ ಲೇಖಕ, ಕವಿ, ನಿರೂಪಕ ಕೆ. ಯೋಗ ರವೀಶ್ ಭಾರತ್ ಅವರನ್ನು ವರಿಸುವುದರ ಮೂಲಕ ರಾಮನಗ ಜಿಲ್ಲೆಯ ಸೊಸೆಯಾಗಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.