'ಕನ್ನಡ ಮಾಧ್ಯಮ ಶಾಲೆ ಪ್ರೋತ್ಸಾಹಿಸಿ'
ಹೊಸಕೋಟೆ: ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಅನುದಾನಿತ, ಖಾಸಗಿ ಶಾಲೆಗಳಿಗೆ
ಸರಕಾರ್ಟ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಪಟ್ಟಣದ ಶ್ರೀ ಜಗದ್ಗುರು ರೇವಣ್ಣಸಿದ್ದೇಶ್ವರ ಪ್ರೌಢಶಾಲೆಯ ಅಧ್ಯಕ್ಷ ಶಿವಗಂಗೆಯ ಮೇಲಣಗವಿ ವೀರಸಿಂಹಾಸನ ಮಠಾಧ್ಯಕ್ಷ ಶ್ರೀ ಪಟ್ಟದ ಮಲಯ ಶಾಂತಮುನಿ ದೇಶಿಕೇಂದ್ರ ಶಿವಚಾರ್ಯ ಸ್ವಾಮೀಜಿ ಹೇಳಿದರು.
ಶಾಲೆಯ ವಾರ್ಷಿಕೋತ್ಸವದ ಹಾಗೂ ಕಟ್ಟಡದ ಮೊದಲನೇ ಮಹಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಡಿನ ಭಾಷೆ, ಸಂಸ್ಕೃತಿ ಉಳಿಸಿ ಆಂಗ್ಲ ಭಾಷಾ ಶಾಲೆಗಳ ತೀವ್ರ ಸ್ಪರ್ಧೆಯ ನಡುವೆಯು ಗ್ರಾಮೀಣ ಪ್ರದೇಶದ ಹೆಣ್ಣ ಮಕ್ಕಳಿಗೆ ಕಳೆದ 33 ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ದಾನಿಗಳ ಸಹಕಾರದೊಂದಿಗೆ 30ವರ್ಷಗಳ ನಂತರವಷ್ಟೇ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಸಾಧ್ಯವಾಗಿದೆ. ಸಮಾಜದಲ್ಲಿ ಒಂದು ಶಾಲೆ ನಿರ್ಮಾಣಗೊಂಡಲ್ಲಿ ನೂರು ದೇವಾಲಯಗಳಿಗೆ ಸಮವಾಗಲಿದೆ ಎಂಬುದನ್ನು ಜನರು ಅರಿತುಕೊಳ್ಳಲಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕರು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾಗಿದೆ ಎಂದರು. ವಿಧಾನ್ ಪರಿಷತ್ ಸದಸ್ಯ ಪುಟ್ಟಣ ಮಾತನಾಡಿ, ತಮ್ಮ 10 ವರ್ಷಗಳ ಅಧಿಕಾರವದಿಯಲ್ಲಿ ಶೇ. 90ರಷ್ಟು ಅನುದಾನವನ್ನು ಶಾಲಾ ಕೊಠಡಿಗಳಿಗೆ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಲಾಗಿದೆ. ಸರಕಾರ ಪ್ರಾಥಮಿಕ 1ನೇ ತರಗತಿಯಿಂದ ಆಂಗ್ಲ ಭಾಷೆ ಬೋಧನೆಗೆ ಅವಕಾಶ ಕಲ್ಪಿಸಿದರು ಸಮರ್ಪಕವಾಗಿ ಜಾರಿಗೊಂಡಿಲ್ಲ. ಶಿಕ್ಷಕರನ್ನು ಕೇವಲ ಬೋಧನೆಗೆ ಮಾತ್ರ ಸೀಮಿತಗೊಳಿಸಿ ಬಿಸಿ-ಊಟ ತಯಾರಿಕೆ ಇತರೆ ಇಲಾಖೆಗಳ ಗಣತಿ ಮತದಾರರ ಪಟ್ಟಿ ಪರಿಷ್ಕರಣೆಯಂತಹ ಕಾರ್ಯಗಳಿಂದ ಮುಕ್ತರನ್ನಾಗಿಸಿದಲ್ಲಿ ಮಾತ್ರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಅವರು ಹೇಳಿದರು.
ದಾಖಲಾತಿ ಕುಂಠಿತ: ಶಾಸಕ ಎನ್. ನಾಗರಾಜ್ ಮಾತನಾಡಿ, ನಗರಕ್ಕೆ ಸಮೀಪವಿರುವ ಪಟ್ಟಣಗಳಲ್ಲಿ ಪೋಷಕರ ಆಂಗ್ಲ ಭಾಷೆಯ ಬಗ್ಗೆ ಹೆಚ್ಚುತ್ತಿರುವ ವ್ಯಾಮೋಹದ ಪರಿಣಾಮವಾಗಿ ಸರಕಾರಿ ಶಾಲೆಗಳಲ್ಲೂ ದಾಖಲಾತಿ ಕುಂಠಿತಗೊಳ್ಳುತ್ತಿದೆ. ಹೀಗೆಯೆ ಮುಂದುವರೆದಲ್ಲಿ ಬಹಳಷ್ಟು ಸರಕಾರಿ ಶಾಲೆಗಳು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳುವ ಸಂಭವವಿದೆ. ಸರಕಾರಿ ಶಾಲೆಗಳಲ್ಲಿ ಕೊರತೆ ಇರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ದಾನಿಗಳು ಸಹಕರಿಸಬೇಕು. ಶಾಲೆಗೆ 3.5ಲಕ್ಷ ರು.ಗಳ ವೆಚ್ಚದಲ್ಲಿ 1ಕೊಠಡೆ ನಿರ್ಮಿಸಲು ಆರ್ಥಿಕ ನೆರವು ನೀಡುವುದಾಗಿಯು ಪ್ರಥಮ ಕಂತಾಗಿ 1ಲಕ್ಷ ರು.ಗಳನ್ನು ದೇಣಿಗೆಯಾಗಿ ನೀಡುತ್ತಿರುವುದಾಗಿ ತಿಳಿಸಿದರು. ಬಿಇಓ
ಬೈಲಾಂಜಿನಪ್ಪ ಮಾತನಾಡಿ, ಗ್ರಾಮಾಂತರ ಜಿಲ್ಲೆ ಎಸ್ಸೆಸ್ಸೆಲ್ಸಿ ಪರಿಕ್ಷೆಯಲ್ಲಿ ಪ್ರಸ್ತುತ 12ನೇ ಸ್ಥಾನದಲ್ಲಿದ್ದು ಪ್ರಸಕ್ತ ಸಾಲಿನಲ್ಲಿ ಕನಿಷ್ಠ 5ರೊಳಗೆ ಸ್ಥಾನಗಳಿಸಿಕೊಳ್ಳಲು ಯೋಜನೆ ಅನುಷ್ಠಾನ ಗೊಳಿಸಲಾಗಿದೆ. ತಾಲೂಕಿನ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನಿವಾರಿಸಲಾಗಿದೆ ಎಂದರು. ಗುರುಭವನ ನಿರ್ಮಾಣಕ್ಕೆ ಸಹಾಯಧನ ನೀಡುವಂತೆ ವಿಧಾನಪರಿಷತ್ ಸದಸ್ಯ ಪುಟ್ಟಣ್ಣನವರಿಗೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

