ದೇವನಹಳ್ಳಿ ಕೋಟೆಗೆ ಧ್ವನಿ-ಬೆಳಕು ವ್ಯವಸ್ಥೆ
ದೇವನಹಳ್ಳಿ: ದೇವನಹಳ್ಳಿ ಕೋಟೆ ಮತ್ತು ಮೈಸೂರು ಹುಲಿ ಟಿಪ್ಪೂಸುಲ್ತಾನರ ಜನ್ಮಸ್ಥಳದ ಸ್ಮಾರಕ ಅಭಿವೃದ್ಧಿ ಅಲ್ಲದೆ ಕೋಟೆಯ ಪಕ್ಕದಲ್ಲೇ ಇರುವ ಶ್ರೀ ವೇಣುಗೋಪಾಲಸ್ವಾಮಿ ಕೆರೆಯಲ್ಲಿ ಉದ್ಯಾನವನ ಮತ್ತು ವಾಕಿಂಗ್ ಟ್ರಾಕ್ ನಿರ್ಮಿಸಲು 6.25 ಕೋಟಿ ರು. ಬಿಡುಗಡೆಯಾಗಿದೆ ಎಂದು ಕೇಂದ್ರ ಇಂಧನ ಸಚಿವ ಎಂ. ವೀರಪ್ಪಮೊಯ್ಲಿ ತಿಳಿಸಿದರು.
ಇಲ್ಲಿನ ಇತಿಹಾಸ ಪ್ರಸಿದ್ಧ ಕೋಟೆ ಮತ್ತು ಟಿಪ್ಪುಸುಲ್ತಾನರ ಜನ್ಮ ಸ್ಥಳದ ಸ್ಮಾರಕಕ್ಕೆ ಭಾನುವಾರ ವೀರಪ್ಪ ಮೊಯ್ಲಿ ಭೇಟಿ ನೀಡಿದರಲ್ಲದೆ ಟಿಪ್ಪು ಸುಲ್ತಾನರು ಬ್ರಿಟಿಷರ ವಿರುದ್ಧ ಹೋರಾಡಿದ ಮಹಾಸೇನಾನಿ ಅಲ್ಲದೆ ಆತನ ಕಾಲದಲ್ಲಿ ರೇಷ್ಮೆ ಬೆಳೆಯಲು ಪ್ರೋತ್ಸಾಹ ನೀಡಿದವನು. ಅಂತಹ ವೀರ ಹುಟ್ಟಿದ ಈ ಸ್ಥಳದ ಸ್ಮಾರಕ ಮತ್ತು ಪಾಳೇಗಾರರು ನಿರ್ಮಿಸಿದ ಕೋಟೆ ಇದು. ಇದನ್ನು ಅಭಿವೃದ್ಧಿಪಡಿಸಿ ಸೌಂಡ್ ಅಂಡ್ ಲೈಟ್ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಪಕ್ಕದಲ್ಲೇ ಇರುವ ವೇಣುಗೋಪಾಲಸ್ವಾಮಿ ಕೆರೆ ದಂಡೆಯಲ್ಲಿ ಉದ್ಯಾನವನ ನಿರ್ಮಿಸಿ ಅದರಲ್ಲಿ ವಾಕಿಂಗ್ ಟ್ರ್ಯಾಕ್ ಮಾಡಲು ಈಗಾಗಲೇ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಫೌಂಡೇಶನ್ ಸಂಸ್ಥೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ 6.25 ಕೋಟಿ ರು. ಬಿಡುಗಡೆಯಾಗಿದ್ದು ಇದೇ ತಿಂಗಳಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಬದಲಿ ಜಮೀನು: ಟಿಪ್ಪೂ ಸುಲ್ತಾನರ ಸ್ಮಾರಕ ಸ್ಥಳ ತುಂಬ ಚಿಕ್ಕದಾಗಿದ್ದು ಇದಕ್ಕೆ ಹೊಂದಿಕೊಂಡಂತೆ ಇರುವ ಎರಡೂವರೆ ಎಕರೆ ಜಮೀನನ್ನು ಶಮಿಉಲ್ಲ ಎಂಬುವರು ಮುಂದೆ ಬಂದಿದ್ದು ಅವರಿಗೆ ಸರ್ಕಾರದಿಂದ ಬದಲಿ ಜಮೀನು ನೀಡುವಂತೆ ಕೋರಿದ್ದಾರೆ. ಆದ್ದರಿಂದ ಟಿಪ್ಪು ಸ್ಮಾರಕದ ಸುತ್ತ ಉದ್ಯಾನವನ ನಿರ್ಮಿಸಲಾಗುವುದು ಎಂದು ಮೊಯ್ಲಿ ತಿಳಿಸಿ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಪೂರ್ವಜರು ಆಳುತ್ತಿದ್ದು ಅಲ್ಲಿಯೂ ಸಹ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದರು. ಈ ಎಲ್ಲ ಕಾರ್ಯಗಳ ಅಭಿವೃದ್ಧಿ ಕೈಗೊಳ್ಳಲು ಕಳೆದ ಮೂರು ದಿನಗಳ ಹಿಂದೆ ನಿಧನರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಆರ್.ಬಚ್ಚೇಗೌಡರು ಸಹಕಾರ ನೀಡಿದ್ದರು ಎಂದು ಸ್ಮರಿಸಿದರು.
ಚಿಕ್ಕಬಳ್ಳಾಪುರದ ಬಳಿ ಇರುವ ನಂದಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧವಾದ ಭೋಗನಂದೀಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ 9 ಕೋಟಿ ರು. ಮಂಜೂರಾಗಿದೆ ಎಂದು ವೀರಪ್ಪ ಮೊಯ್ಲಿ ಪತ್ರಕರ್ತರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರವಾಸೋಧ್ಯಮ ಇಲಾಖೆ ಕಾರ್ಯದರ್ಶಿ ಅರವಿಂದ್ ಜಾದವ್, ಜಿಲ್ಲಾಧಿಕಾರಿ ನಿ. ಶಂಕರ್, ತಹಸೀಲ್ದಾರ್ ಡಾ.ವೆಂಕಟರಾಜು, ಮಾಜಿ ಶಾಸಕ ವೆಂಕಟಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ರಾಜಣ್ಣ, ಮುಖಂಡರುಗಳಾದ ಸಿ.ಜಗನ್ನಾಥ್, ಎ.ವಿ. ನಾರಾಯಣಸ್ವಾಮಿ, ಎ.ಚಿನ್ನಪ್ಪ, ಆರ್. ರವಿಕುಮಾರ್, ಸಿ.ಕೆ.ರಾಮಚಂದ್ರಪ್ಪ, ಎಂ.ಮೂರ್ತಿ, ಸೋಮಶೇಖರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

