'ನಮ್ಮ ನಾಡು ನುಡಿಯ ಮಹಿಮೆ ಅರಿತುಕೊಳ್ಳಲಿ'
ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯಪುರ ಘಟಕವು ಉತ್ತಮ ಕಾರ್ಯಕ್ರಮಗಳೊಂದಿಗೆ ಪಟ್ಟಣದ ಜನರ ಮನ ಮನೆ ಮುಟ್ಟುವ ಕಾರ್ಯಕ್ರಮಗಳನ್ನು ಮಾಡಿ ಜನರ ವಿಶ್ವಾಸದೊಂದಿಗೆ ಕನ್ನಡವನ್ನು ಹಾಗೂ ಕನ್ನಡತನವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಮೆಚ್ಚುವಂತ ಕೆಲಸವಾಗಿದೆ ಎಂದು ಶ್ರೀ ಮಹದೇವ ಸ್ವಾಮಿಗಳು ತಿಳಿಸಿದರು.
ಅವರು ಪಟ್ಟಣದ ಬಸವ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯಪುರ ಘಟಕದ 2014ನೇ ವರ್ಷದ ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಅನೇಕ ಕಾರ್ಯಕ್ರಮಗಳೊಂದಿಗೆ ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಿ ಕನ್ನಡದ ಬೆಳವಣಿಗೆಗೆ ಜನರನ್ನು ಆಕರ್ಷಿಸುವ ಮತ್ತು ಅಭಿಮಾನ ಮೂಡಿಸುವ ಕೆಲಸ ಪಟ್ಟಣದ ಘಟಕದಿಂದ ಆಗಿದೆ ಎಂದರು. ಪುರಸಭಾ ಸದಸ್ಯ ಆರ್.ಸಿ.ಮಂಜುನಾಥ್ ಮಾತನಾಡಿ 2013ರರ ನವೆಂಬರ್ ತಿಂಗಳಿನಲ್ಲಿ ಮನೆಯಂಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರತಿದಿನ ಹಲವಾರು ಕವಿಗಳ ಮಹನೀಯರ ವಿಚಾರಗಳನ್ನು ಜನರಿಗೆ ತಿಳಿಸುವ ಕೆಲಸವಾಗಿದೆ. ಮತ್ತಷ್ಟು ಕಾರ್ಯಕ್ರಮಗಳು ಕಸಾಪ ವತಿಯಿಂದ ನಡೆಯಲಿ. ಇತರೆ ಘಟಕಗಳಿಗೆ ಮಾದರಿಯಾಗಲಿ ಎಂದರು. ವಿಜಯಪುರ ಕಸಾಪ ಘಟಕದ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ಎ.ಬಿ.ಪರಮೇಶ್, ಪ್ರೇಮಾ ಹೂಗಾರ್, ಚಿದಾನಂದ ಬಿರಾದರ್, ಮುನಿವೆಂಕಟರಮಣ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

