ಬೆಂಗಳೂರು ಗ್ರಾಮಾಂತರ

ಸಮಸ್ಯೆ ನಿವಾರಣೆಗೆ ಆದ್ಯತೆ: ಶಾಸಕ

Published On :

ಮಾಗಡಿ: ಕುಡಿಯುವ ನೀರು, ವಿದ್ಯುತ್ ಸಮಸ್ಯೆ ನಿವಾರಣೆ ಹಾಗೂ ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ಮಾಗಡಿ ತಾಪಂ ಕಚೇರಿಯಲ್ಲಿ ನೆಲಮಂಗಲ ಶಾಸಕರ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾಗಡಿ ತಾಲೂಕಿನ ಸೋಲೂರು ಹೋಬಳಿ ಸೇರುವುದರಿಂದ ಅವರ ಕಾರ್ಯಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಕೊಠಡಿ ಅಗತ್ಯವಿತ್ತು. ಕಾರ್ಯಕರ್ತರು ಸುಮ್ಮನೆ ಗೊಂದಲಕ್ಕೆ ಒಳಗಾಗದೆ, ತಮ್ಮ ಸಮಸ್ಯೆಗಳನ್ನು ಹಾದಿ-ಬೀದಿಗಳಲ್ಲಿ ಚರ್ಚಿಸದೆ ಶಾಸಕರೊಂದಿಗೆ ಚರ್ಚಿಸಿ, ತಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.
ನಮ್ಮನ್ನು ಆಡಳಿತರೂಢ ಶಾಸಕರಂತೆ ಕಾಣಬೇಡಿ, ಶ್ರಮವಹಿಸಿ ಪಕ್ಷದ ಸಂಘಟನೆಗೆ ಶಕ್ತಿ ಮೀರಿ ದುಡಿಯೋಣ. ಮುಂದಿನ ದಿನಗಳಲ್ಲಿ ದುಡಿಮೆಗೆ ತಕ್ಕ ಫಲ ಸಿಗುತ್ತದೆ. ನನಗೆ ಸಹಕರಿಸಿದಂತೆ ನೆಲಮಂಗಲ ಶಾಸಕರಿಗೂ ಸಹಕರಿಸುವಂತೆ ಕಾರ್ಯಕರ್ತರಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ಕರೆ ನೀಡಿದರು.
ನೆಲಮಂಗಲ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಮಾತನಾಡಿ, ಸೋಲೂರು ಹೋಬಳಿ ವ್ಯಾಪ್ತಿಯ 25 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ 25 ಘಟಕಗಳನ್ನು ಆರಂಭಿಸಲು ತೀರ್ಮಾನಿಸಿದ್ದೇನೆ. ಸೋಲೂರು ಹೋಬಳಿ ಯನ್ನು ನೆಲಮಂಗಲ ಕ್ಷೇತ್ರ ವ್ಯಾಪ್ತಿಗೆ ತರಲು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಸಂಬಂಧಪಟ್ಟ ಸಚಿವ ಎಚ್.ಕೆ. ಪಾಟೀಲ್ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮುದ್ದುರಾಜಯಾದವ್, ಜಿಪಂ ಸದಸ್ಯ ರಂಗಸ್ವಾಮಿ, ತಾಪಂ ಅಧ್ಯಕ್ಷ ಜಿ.ಕೃಷ್ಣ, ಲಕ್ಕೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಗಂಗರಾಜು, ಚಲುವಯ್ಯ, ಜಿ.ಎಂ. ಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜುಳ ಗೋಪಾಲಕೃಷ್ಣ, ತಾಪಂ ಸದಸ್ಯೆ ಅನಸೂಯಮ್ಮ  ಕಾಂತರಾಜು, ರಾಮಚಂದ್ರ, ಗುಡೇಮಾರನಹಳ್ಳಿ ನಾಗರಾಜು,ಶರ್ಮ ಜವಹಾರ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.