ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಿ: ಶಾಸಕ
ವಿಜಯಪುರ: ಪುರಸಭೆಯವರು ಹೆಚ್ಚಿನ ಆದ್ಯತೆ ರಸ್ತೆಗಳಿಗೆ ಮಾತ್ರ ಕೊಡುವುದಲ್ಲದೆ ನೈರ್ಮಲ್ಯ, ನೀರು ಸರಬರಾಜು, ಬೀದಿ ದೀಪ ಶೌಚಾಲಯಗಳ ನಿರ್ಮಾಣಕ್ಕೂ ಗಮನಹರಿಸಬೇಕು. ಸರ್ಕಾರದಿಂದ ಬರುತ್ತಿರುವ ಅನುದಾನಗಳನ್ನು ಉತ್ತಮ ರೀತಿಯಲ್ಲಿ ಬಳಸುವುದರೊಂದಿಗೆ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಕ್ಷೇತ್ರ ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ಅವರು ಪಟ್ಟಣದ ಟೌನ್ ಹಾಲ್ನಲ್ಲಿ ಸರ್ಕಾರಿ ಅಧಿಕಾರಿಗಳ ಹಾಗೂ ಇಲಾಖಾವಾರು ಕುಂದುಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರತಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ವಿಶ್ವಾಸದಿಂದ ಸ್ಪಂದಿಸಿ ವ್ಯಕ್ತಿಗೆ ಗೌರವ ಕೊಡಬೇಕೆಂದ ಅವರು, ಯಾವುದೇ ರೀತಿಯ ದೂರುಗಳು ಅಧಿಕಾರಿಗಳ ಮೇಲೆ ಬರಬಾರದು ಎಂದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞೆ ಪ್ರಿಯದರ್ಶಿನಿ ಮಾತನಾಡಿ ಆಸ್ಪತ್ರೆಗೆ ಡಿ ದರ್ಜೆಯ ಸಿಬ್ಬಂದಿ ಡಾಕ್ಟರ್ಗಳ ಕೊರತೆ ಹಾಗೂ ಎಕ್ಸರೇ ಸಿಬ್ಬಂದಿ ಕೊರತೆ ಬಗ್ಗೆ ವಿವರಣೆ ನೀಡಿದರು. ಹತ್ತು ತಿಂಗಳು ಕಳೆದರೂ ಪುರಸಭೆಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಆಗುತ್ತಿಲ್ಲ. ಸರ್ಕಾರ ಇತ್ತ ಗಮನಹರಿಸಬೇಕು ಎಂದ ಅವರು ಪಟ್ಟಣದಲ್ಲಿನ ಪುರಸಭೆ ಉಪವಿಭಾಗಧಿಕಾರಿಗಳಾಗಲಿ, ಜಿಲ್ಲಾ ಅಧಿಕಾರಿಗಳಾಗಲಿ ಇದುವರೆಗೂ ಒಮ್ಮೆಯು ಭೇಟಿ ನೀಡಿ ಕುಂದುಕೊರತೆಗಳ ಸಭೆಯನ್ನು ನಡೆಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಾಡಕಚೇರಿ ಪ್ರಾರಂಭವಾಗಿ ವರ್ಷ ಕಳೆದರೂ ನಾಮಕಾವಸ್ಥೆಗೆ ಮಾತ್ರ ಪಾತ್ರವಾಗಿದೆ. ಕಂದಾಯ ಇಲಾಖೆ ಸಂಬಂಧ ಪಟ್ಟಂತಹ ಸಾಕಷ್ಟು ಕೆಲಸಗಳಿಗೆ ದೇವನಹಳ್ಳಿ ತಾಲೂಕು ಕಚೇರಿ ಕಡೆ ಮುಖಮಾಡುವುದು ತಪ್ಪುತ್ತಿಲ್ಲ ಎನ್ನುವುದನ್ನು ಶಾಸಕರಿಗೆ ಮನದಟ್ಟು ಮಾಡಲಾಯಿತು. ನಾಡಕಚೇರಿ ಉಪತಹಸೀಲ್ದಾರ್ ಶ್ರೀನಿವಾಸ್ ನಾಯ್ಡು, ಪುರಸಭಾ ಮುಖ್ಯಾಧಿಕಾರಿ ಮಾರುತಿ ಶಂಕರ್, ವೃತ್ತ ನಿರೀಕ್ಷಕ ಮಹೇಶ್ ಕುಮಾರ್, ಪುರಸಭಾ ಸದಸ್ಯ ಸಿ. ಭಾಸ್ಕರ್, ವರದರಾಜು, ಕೇಶವಪ್ಪ, ತಿರುಮಲೇಶ್, ರೇಷ್ಮೆ ಇಲಾಖೆ ಉಪವಿಭಾಗಧಿಕಾರಿ ಸತ್ಯಪಾಲ್, ಭೀಮಪ್ಪ, ಮತ್ತಿತರರ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

