ಧಾರ್ಮಿಕ ಸಂವೇದನೆ ಮರೆಯಾದರೆ ದೇಶಕ್ಕೆ ಕುತ್ತು
ಕ.ಪ್ರ.ವಾರ್ತೆ , ದೊಡ್ಡಬಳ್ಳಾಪುರ ್ಣಜ.15
ಭಕ್ತಿ ಭಾರತ ಭೂಮಿಯ ನಿಜವಾದ ಶಕ್ತಿ. ಭಕ್ತಿಯ ಮೂಲಕ ಎಲ್ಲವನ್ನೂ ಗೆಲ್ಲುವ ಸರಳ ಸೂತ್ರ ಈ ಭೂಮಿಯಲ್ಲಿದೆ ಎಂದು ಬ್ರಹ್ಮರ್ಷಿ ಆಶ್ರಮದ ಮಹರ್ಷಿ ಡಾ.ಆನಂದ ಗುರೂಜಿ ಹೇಳಿದರು.
ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ತಾಲೂಕು ಸವಿತಾ ಸಮಾಜ ಯುವ ವೇದಿಕೆ ನೇತೃತ್ವದಲ್ಲಿ ನಡೆದ ವಿಶೇಷ ಪೂಜಾ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮ, ಧಾರ್ಮಿಕ ವಿಚಾರಗಳ ಸಂವೇದನೆ ಮರೆಯಾದರೆ ದೇಶ ಸಂಕಷ್ಟಕ್ಕೆ ಸಿಲುಕುತ್ತದೆ. ಧಾರ್ಮಿಕ ಭಾವನೆಗಳ ಜೀವಂತಿಕೆ ದೇಶವನ್ನು ಸಶಕ್ತವಾಗಿಸುತ್ತದೆ. ಧಾರ್ಮಿಕ ಮೌಲ್ಯಗಳು ಇಂದಿನ ದಿನಗಳಲ್ಲಿ ನಶಿಸುತ್ತಿದ್ದು, ಸ್ವಾರ್ಥದ ಬದುಕು ಮಾನವೀಯತೆಯ ಮೇಲೆ ಸವಾರಿ ಮಾಡುತ್ತಿದೆ. ವ್ಯಕ್ತಿಗತ ಹಿತಾಸಕ್ತಿಗಳು ನಮ್ಮನ್ನು ಆಳುತ್ತಿದ್ದು, ಸಮಾಜ ಮತ್ತು ಸಾಮಾಜಿಕ ಹಿತಾಸಕ್ತಿಗಳು ಕಡೆಗಣಿಸಲ್ಪಟ್ಟಿವೆ. ಧಾರ್ಮಿಕ ಮಂದಿರಗಳ ಮೇಲೆ ಇರಬೇಕಾದ ಶ್ರದ್ಧಾಭಕ್ತಿ ಸಂಸ್ಕೃತಿಯ ಅಂಗ ಎಂದರು.
ಆಧ್ಯಾತ್ಮಿಕತೆ ಅಥವಾ ಭಕ್ತಿ ಡಾಂಭಿಕತೆಯನ್ನು ಪ್ರಚೋದಿಸುವುದಾದರೆ ಅದನ್ನು ಮೌಢ್ಯ ಎನ್ನಬಹುದು. ಆದರೆ ಸಾತ್ವಿಕ ಹಿತಾಸಕ್ತಿಯನ್ನು ಬೆಳೆಸಿ ಸಮಾಜದ ಹಿತವನ್ನು ಬಯಸುವ ಆಧ್ಯಾತ್ಮ ಅಥವಾ ಭಕ್ತಿ ಮೌಢ್ಯವಲ್ಲ. ಆದರೆ ಕೆಲವರು ಮನುಷ್ಯರ ದುರ್ಬಲ ಮನೋಸ್ಥೈರ್ಯದ ಲಾಭ ಪಡೆಯುವ ಹುನ್ನಾರಗಳನ್ನು ಮಾಡುತ್ತಾರೆ. ಅದು ವಿಷಾದನೀಯ. ದೈವ ಮಂದಿರಗಳು ನೆಮ್ಮದಿ ಮತ್ತು ಶಾಂತಿಯ ನೆಲೆಯಾಗಬೇಕು ಎಂದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಕ್ರೀಡಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವೇಣುಗೋಪಾಲ್, ಸವಿತಾ ಸಮಾಜ ರಾಜ್ಯ ಮುಖಂಡ ರಾಮಾಂಜನೇಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ತಾ.ಪಂ ಸದಸ್ಯ ಎಸ್.ಆರ್.ನಾಗರಾಜ್, ದೊಡ್‌ಡತುಮಕೂರು ಗ್ರಾ.ಪಂ ಸದಸ್ಯೆ ಸಿ.ಮೀನಾ, ಸವಿತಾ ಸಮಾಜ ಯುವ ವೇದಿಕೆ ಮುಖಂಡ ಟಿ.ಜಿ.ಮಂಜುನಾಥ್, ನಂಜಪ್ಪ, ನಾಗಭೂಷಣ್, ನಾಗರಾಜ್, ನರಸಿಂಹರಾಜು, ನರಸಿಂಹಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ಸಂಗೀತ ಕಾರ್ಯಕ್ರಮ: ಇದೇ ಸಂದರ್ಭದಲ್ಲಿ ಸುಪ್ರಸಿದ್ಧ ಸ್ಯಾಕ್ಸೋಫೋನ್ ವಾದಕ ಕಲಾನಿಧಿ ಮಂಜುನಾಥ್ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಾದಸ್ವರ ಮತ್ತು ಸ್ಯಾಕ್ಸೋಫೋನ್ ವಾದನ ನೆರೆದಿದ್ದ ಭಕ್ತಾದಿಗಳಲ್ಲಿ ಭಕ್ತಿ ಭಾವ ಪ್ರಚೋದಿಸುವಲ್ಲಿ ಯಶಸ್ವಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

