ಉದಯಕುಮಾರ್ ಸ್ಮರಣಾರ್ಥ ನಾಳೆ, ನಾಡಿದ್ದು ನಾಟಕೋತ್ಸವ
ಕನಕಪುರ: ಬೆಂಗಳೂರಿನ ಉದಯ ಕಲಾನಿಕೇತನ ಸಂಸ್ಥೆ ವತಿಯಿಂದ ಕಲಾಕೇಸರಿ, ಅಭಿಜಾತ ಕಲಾವಿದ ದಿ.ಉದಯಕುಮಾರ್ ಸ್ಮರಣೆ ಅಂಗವಾಗಿ ನೃತ್ಯ ಹಾಗೂ ನಾಟಕೋತ್ಸವ ಕಾರ್ಯಕ್ರಮಗಳು ಎರಡು ದಿನಗಳ ಕಾಲ ಕನಕಪುರದ ನಾಡೋಜ ಡಾ.ರಾಜ್ ಬಯಲು ರಂಗಮಂದಿರದಲ್ಲಿ ಜ.19 ಮತ್ತು ಜ.20ರಂದು ನಡೆಯಲಿವೆ ಎಂದು ಸಂಚಾಲಕಿ, ನಟಿ ರೇಣುಕಾ ಬಾಲಿ ಉದಯ ಕುಮಾರ್ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ 19ರಂದು ಭಾನುವಾರ ಬೆಂಗಳೂರಿನ ನಾಟ್ಯಸರಸ್ವತಿ ತಂಡದವರಿಂದ ಪಳೆಂಕರು ನಾಟಕ ಪ್ರದರ್ಶನ, ಶೃತಿ ತಂಡದವರಿಂದ ಕಥಕ್ ನರ್ತನ, ಗುಜರಾತಿ ಜಾನಪದ ನೃತ್ಯಗಳ ಪ್ರದರ್ಶನ ನಡೆಯಲಿದೆ. 20ರಂದು ಸೋಮವಾರ ರಂಗನಿರ್ದೇಶಕಿ ದಾಕ್ಷಾಯಣಿ ಭಟ್ ನಿರ್ದೇಶನದ ಭಸ್ತಿ ನಾಟಕ ಪ್ರದರ್ಶನ, ಉದಯ ಕಲಾನಿಕೇತನ ಕಲಾವಿದರು ಅಭಿನಯಿಸುವ ಸಿದ್ಧ ಕುಡಿದು ಬಿದ್ದ ಹಾಸ್ಯನಾಟಕ ಹಾಗೂ ನಾಟ್ಯ ಪ್ರದರ್ಶನಗಳು ನಡೆಯಲಿವೆ.
ನೃತ್ಯ ಹಾಗೂ ನಾಟಕೋತ್ಸವದ ಅಧ್ಯಕ್ಷತೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ರವಿ ನೆರವೇರಿಸಲಿದ್ದು, ಉದ್ಘಾಟನೆಯನ್ನು ಹಾಪ್ಕಾಮ್ಸ್ ನಿರ್ದೇಶಕ ಜಯಕುಮಾರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಭಿನೇತ್ರಿ ಮಾಲತಿ ಸರ್ದೇಶಪಾಂಡೆ, ರೋಟರಿ ಟ್ರಸ್ಟ್ ಅಧ್ಯಕ್ಷ ವಿಜಯದೇವ್, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಆಂಜನೇಯ, ಹಾಸ್ಯನಟ ಮೈಸೂರು ರಮಾನಂದ್, ಡಾ.ಟಿ.ಎನ್.ವಿಜಯಕುಮಾರ್, ಸಮಾಜ ಸೇವಕಿ ಕಲ್ಪನಾ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲಾಕೇಸರಿ ಉದಯಕುಮಾರ್ರವರ ನೆನಪು ಚಿರನೂತನವಾಗಿರುವಂತೆ ಮಾಡಬೇಕೆಂದು ಸಂಘಟಕ ಮರಳವಾಡಿ ಉಮಾಶಂಕರ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

