ಜಾಗತೀಕರಣ ಪ್ರಭಾವದಿಂದ ಗ್ರಾಮೀಣ ಕಲೆ ಅಳಿವಿನಂಚಿಗೆ
ರಾಮನಗರ: ಭಾರತದಲ್ಲಿ ಕಾಣಸಿಗುವ ವೈಶಿಷ್ಟ್ಯಪೂರ್ಣ ಹಾಗೂ ಸಾಂಪ್ರದಾಯಿಕ ಗ್ರಾಮೀಣ ಕಲೆಗಳು ವಿಶ್ವದ ಬೇರಾವುದೇ ದೇಶದಲ್ಲೂ ಕಾಣಸಿಗುವುದಿಲ್ಲ. ಜಾಗತೀಕರಣದ ಪ್ರಭಾವದಿಂದ ಈ ಕಲೆಗಳು ಕಡೆಗಣಿಸಲ್ಪಟ್ಟಿದ್ದು, ಅಳಿವಿನಂಚಿಗೆ ತಲುಪಿವೆ. ಇವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು ಹೇಳಿದರು.
ನಗರದ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ನಡೆದ ಜಾನಪದ ಸಾಹಸಿಗರ ಜಾತ್ರೆ-2013 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಕಲೆಗಳಾದ ಕುಸ್ತಿ, ದೊಣ್ಣೆ ವರಸೆ, ಗುಂಡು ಎತ್ತುವುದು, ಹಗ್ಗದಾಟ ಇಂತಹ ಸಾಂಪ್ರದಾಯಿಕ ಗ್ರಾಮೀಣ ಕಲೆಗಳು ನಮ್ಮಲ್ಲಿ ಜೀವಂತವಾಗಿ ಉಳಿದಿವೆ ಎಂದರು.
ಯುವಕರು ದುಶ್ಚಟಗಳಿಗೆ ದಾಸರಾಗುವ ಬದಲು ದೇಶೀ ಕಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಆರೋಗ್ಯವಂತರಾಗಬಹುದು. ಜತೆಗೆ ಅಮೂಲ್ಯ ಕಲೆಗಳನ್ನು ಬೆಳೆಸಿ, ಮುಂದುವರಿಸಿಕೊಂಡು ಹೋಗಬಹುದು. ದೇಶೀ ಕಲೆಗಳಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಶಿಕ್ಷಣಾರ್ಥಿಗಳು ಸತತ ಅಭ್ಯಾಸದಿಂದ ಕರತಗ ಮಾಡಿಕೊಂಡರೆ ಕೀರ್ತಿಯ ಜತೆಗೆ ಹಣವನ್ನೂ ಗಳಿಸಬಹುದು ಎಂದರು.
ಜಿಲ್ಲೆಯಲ್ಲಿ ಸಾಹಸ ಕಲಾ ಶಿಕ್ಷಣ ಕೇಂದ್ರದ ಅನೇಕ ಕಲೆಗಳನ್ನು ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸಿ ಹೆಚ್ಚು ಹೆಚ್ಚು ಮಕ್ಕಳು ಜಾನಪದ ಸಾಹಸ ಕಲೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶಕ್ಕೆ ಸದಾ ಪ್ರೋತ್ಸಾಹಿಸುತ್ತೇನೆಂದು ಆಶ್ವಾಸನೆ ನೀಡಿದರು.
ಸಾಹಸ, ಆತ್ಮ ರಕ್ಷಣೆ ಮತ್ತು ಸಮರ ಕಲೆಗಳನ್ನು ಅಭ್ಯಾಸ ಮಾಡುವುದರಿಂದ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ. ಯುವ ಸಮುದಾಯ ದುಶ್ಚಟಗಳನ್ನು ಬಿಟ್ಟು ಸಾಹಸ ಕಲೆಗಳ ಕಲಿಯಲು ಮುಂದಾಗಬೇಕು ಎಂದು ರಾ-ಚ ನಗರಾಭಿಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಶೇಖರ್ ಕರೆ ನೀಡಿದರು.
ರಾಜ್ಯ ಅಲೆಮಾರಿಗಳ ಸಂಘದ ಅಧ್ಯಕ್ಷ ಭಾಸ್ಕರ್ ದಾಸ್ ಯಕ್ಕಾರ್, ಜೋಗಿಲ ಸಿದ್ದರಾಜು, ನಾಗರಾಜ್,ಪ್ರಕಾಶ್, ಪಿ.ಶ್ರೀನಿವಾಸಮೂರ್ತಿ,ರಾಜಗೋಪಾಲ್, ಮೋಹನ್ಕುಮಾರ್, ಹಾಸನ ರಘು, ಚೆಲುವರಾಜು ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

