ಬೆಂಗಳೂರು ಗ್ರಾಮಾಂತರ

ಪಿಜಿ ಪ್ರವೇಶ ಫೆ.28ರವರೆಗೆ ವಿಸ್ತರಣೆ

Published On :

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಅಂಚೆ- ತೆರಪು ಹಾಗೂ ದೂರ ಶಿಕ್ಷಣ ನಿರ್ದೇಶನಾಲಯ 2013-14ನೇ ಸಾಲಿಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳ ಪ್ರವೇಶಕ್ಕೆ ನೋಂದಾಯಿಸಿಕೊಳ್ಳಲು ನಿಗದಿ ಪಡಿಸಿದ್ದ ಅವಧಿಯನ್ನು ಫೆ.28ರವರೆಗೆ ವಿಸ್ತರಿಸಲಾಗಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಹಣಕಾಸು ವಿಭಾಗ, ಬೆಂಗಳೂರು ವಿವಿ ಇವರ ಹೆಸರಿನಲ್ಲಿ ತೆಗೆದುಕೊಂಡು ಪ್ರವೇಶ ಪಡೆದುಕೊಳ್ಳಬಹುದಾಗಿದೆ.
ರವಿ ಕೋಳಾರ್ಕರ್ಗೆ ಪಿಎಚ್.ಡಿ
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಜಿ. ರವಿ ಕೋಳಾರ್ಕರ್ ಅವರು ಮಂಡಿಸಿದ 'ಎಲೆಟ್ರಾನಿಕಲ್ ಸ್ವಿಚಿಂಗ್ ಟರ್ಮಲ್ ಆ್ಯಂಡ್ ಸ್ಟಡೀಸ್ ಆನ್ ಥಲ್ಲಿಂ ಡೋಪಿಡ್ ಇನ್ ಸಿ ಗ್ಲಾಸ್' ಎಂಬ ವಿಷಯದ ಬಗ್ಗೆ ಮಂಡಿಸಿದ ಮಹಾಪ್ರಬಂಧಕ್ಕೆ ಬೆಂಗಳೂರು ವಿವಿ ಪಿಎಚ್.ಡಿ ಪದವಿ ನೀಡಿದೆ. ಇವರು ವಿದ್ಯುನ್ಮಾನ ವಿಭಾಗದ ಡಾ.ಜೆ.ಟಿ. ದೇವರಾಜ್ ಅವರ ಮಾರ್ಗದರ್ಶನದಲ್ಲಿ ರಚಿಸಿದ್ದಾರೆ.
ಅಂತಾರಾಷ್ಟ್ರೀಯ ಭಾಷಾ ಮೇಳ  26ರಂದು
ಬೆಂಗಳೂರು ವಿವಿ ವಿದೇಶಿ ಭಾಷಾ ವಿಭಾಗ ಜ.26ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ 'ಅಂತಾರಾಷ್ಟ್ರೀಯ ಭಾಷಾ ಮೇಳ' ಆಯೋಜಿಸಿದೆ. ಇತರ ದೇಶಗಳ ಸಾಂಸ್ಕೃತಿಕ ಭಾಷಾ ವೈವಿದ್ಯತೆಯನ್ನು ಭಾರತೀಯರ ಸಮಕ್ಷಮದಲ್ಲಿ ಪ್ರಸ್ತುತ ಪಡಿಸಲು, ವಿವಿಧ ದೇಶಗಳ ಸಂಗೀತ, ನೃತ್ಯ, ಚಲನಚಿತ್ರ ಪ್ರದರ್ಶನ ಆಹಾರ ಪದ್ಧತಿಯನ್ನು ಪರಿಚಯಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ ಎಂದು ವಿಭಾಗದ ಸಂಚಾಲಕಿ ಡಾ. ಜ್ಯೋತಿ ವೆಂಕಟೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.