ಅಪಘಾತ; ಮೂವರ ಸಾವು
ನೆಲಮಂಗಲ: ಆಟೋ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮಹಿಳೆಯರು ಸೇರಿದಂತೆ ಮೂರು ಮಂದಿ ಮೃತಪಟ್ಟಿದ್ದು 7 ಮಂದಿ ತೀವ್ರ ಗಾಯಗೊಂಡಿರುವ ಘಟನೆ ದಾಬಸ್ಪೇಟೆ ಠಾಣೆ ವ್ಯಾಪ್ತಿಯ ಹೊನ್ನೇನಹಳ್ಳಿಯ ಕೆಂಗಲ್ ಕೂಡು ರಸ್ತೆ ಬಳಿ ಬುಧವಾರ ನಡೆದಿದೆ.
ಶಿವಗಂಗೆಯ ಗಂಗಮ್ಮ(35), ಮಂಜುಳ(40), ಮಾಚನಹಳ್ಳಾ ಕಾಲೋನಿ ಧನಂಜಯ(23) ಮೃತ ಕೂಲಿ ಕಾರ್ಮಿಕರು. ಶಿವಗಂಗೆಯ ಗೌರಮ್ಮ, ತೌಹಿಬ್ಪಾಷ, ಹೊನ್ನಮ್ಮ, ಮಹಾಲಕ್ಷ್ಮಮ್ಮ, ಆಕಾಶ್ಗೌಡ, ಕೆಂಪರಾಜು ಮತ್ತು ಆಟೋ ಚಾಲಕ ಮಾಚನಹಳ್ಳಿ ಕಾಲೋನಿಯ ನವೀನ್ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರನ್ನು ತುಮಕೂರು ದಾಬಸ್ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಶಿವಗಂಗೆಯಿಂದ ದಾಬಸ್ಪೇಟೆ ಕಡೆ ಬಂದ ಆಟೋ ಹೊನ್ನೇನಹಳ್ಳಿಯ ಕೆಂಗಲ್ ರಸ್ತೆಯ ತಿರುವಿನಲ್ಲಿ ವೇಗವಾಗಿ ಬಂದು ಟ್ರಾಕ್ಟರ್ನ ಟ್ರೈಲರ್ಗೆ ಅಪ್ಪಳಿಸಿದ್ದರಿಂದ ಆಟೋದಲ್ಲಿದ್ದ ಹತ್ತಕ್ಕೂ ಹೆಚ್ಚು ಮಂದಿ ಚಲ್ಲಾಪಿಲ್ಲಿಯಾಗಿ ರಸ್ತೆಗೆ ಉರುಳಿದರು.
ಇವರ ಪೈಕಿ ಮುಂದೆ ಕುಳಿತಿದ್ದ ಕಾರ್ಮಿಕರಾದ ಗಂಗಮ್ಮ, ಮಂಗಳಮ್ಮ ಮತ್ತು ಧನಂಜಯರಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಗಂಗಮ್ಮ ಮೃತಪಟ್ಟರು. ಮಂಗಳಮ್ಮ ಬೆಂಗಳೂರಿನ ನಿಮಾನ್ಸ್ನಲ್ಲಿ, ಧನಂಜಯ ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ರಸ್ತೆ ತಡೆ, ಪ್ರತಿಭಟನೆ: ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಪಟ್ಟಣದಲ್ಲಿ ಆಟೋ ಚಾಲಕರು ನಿರ್ಲಕ್ಷ್ಯ, ಪರವಾನಗಿ ಮತ್ತು ಇನ್ಸೂರೆನ್ಸ್ ಇಲ್ಲದೆ ಆಟೋ ಓಡಿಸುತ್ತಿದ್ದಾರೆ. ಇದರಿಂದ ಅಮಾಯಕರಿಗೆ ತೊಂದರೆ ಆಗುತ್ತಿದೆ. ಲೈಸೆನ್ಸ್ ಇಲ್ಲದ ಮತ್ತು ಸೂಕ್ತ ದಾಖಲೆಗಳಿಲ್ಲದ ಆಟೋ ಮಾಲೀಕ, ಚಾಲಕರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿಯೇ ಮೃತ ಮಹಿಳೆಯ ಶವ ಇಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿ ಮನವೊಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

