ಬೆಂಗಳೂರು ಗ್ರಾಮಾಂತರ

ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆಯೋಣ: ಶಾಸಕ

Published On :

ಮಾಗಡಿ: ಸರ್ವ ಶ್ರೇಷ್ಠವಾದ ಭಾರತ ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆಯೋಣ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಕರೆ ನೀಡಿದರು.
ಅವರು ಇಲ್ಲಿನ ಐತಿಹಾಸಿಕ ಕೆಂಪೇಗೌಡ ಕೋಟೆ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ  ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಾಲಾ ಮಕ್ಕಳನ್ನು ಇಟ್ಟುಕೊಂಡು ಗಣರಾಜ್ಯೋತ್ಸವ ಆಚರಣೆಯ ಪರಿಸ್ಥಿತಿ ಬೇಡ, ಸ್ವಾತಂತ್ರ್ಯ ಹೋರಾಟಗಾರರು, ಹಿರಿಯ, ಕಿರಿಯ ನಾಗರಿಕರು ಗಣರಾಜ್ಯೋತ್ಸವದಲ್ಲಿ ಕಡ್ಡಾಯವಾಗಿ ಭಾಗವಹಿಸುವ ಮೂಲಕ ಶಿಸ್ತುಬದ್ಧ ಹಾಗೂ ಅರ್ಥಪೂರ್ಣ ಗಣರಾಜೋತ್ಸವ ಆಚರಣೆಯಾಗಲಿ ಎಂದರು. ತಹಸೀಲ್ದಾರ್ ಶಿವಕುಮಾರ್ ಅವರು 65ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಜಾತಿ, ಧರ್ಮ, ಮತ ಬದಿಗೊತ್ತಿ, ಸುಭದ್ರವಾದ  ಭವ್ಯ ಭಾರತ ರಾಷ್ಟ್ರ ನಿರ್ಮಾಣಕ್ಕೆ  ಕಂಕಣಬದ್ಧರಾಗೋಣ. ದೇಶದ ಸಂಪತ್ತು ಉಳಿಸಬೇಕು. ಉತ್ತಮ ಪ್ರಜೆಗಳ ನಿರ್ಮಾಣ, ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ, ಉತ್ತಮ ಆಡಳಿತಕ್ಕಾಗಿ ಸ್ವಾಸ್ಥ್ಯ, ಸಾಮರಸ್ಯ, ಭಾವೈಕ್ಯತೆಯನ್ನು ಕಾಪಾಡಿಕೊಂಡು ಬರಬೇಕಿದೆ. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.
ಸನ್ಮಾನಿತರು: ಇದೇ ಸಂದರ್ಭದಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್, ದೈಹಿಕ ಶಿಕ್ಷಣ ಶಿಕ್ಷಕ ಕೆ. ಪ್ರಹ್ಲಾದ್ ರಾವ್, ಅಲ್ಪಲಾ  ಕಾಲೇಜಿನ ಪ್ರಾಂಶುಪಾಲರಾದ ರಾಜನ್  ಪುರಾಣಿಕ್  ಅವರನ್ನು ಶಾಸಕ ಎಚ್.ಸಿ. ಬಾಲಕೃಷ್ಣ ಸನ್ಮಾನಿಸಿದರು.
ಸ್ಪರ್ಧಾ ವಿಜೇತರಿಗೆ ಬಹುಮಾನ: ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಪುರಸಭೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗಳಲ್ಲಿ ಜಿಜಿಎಚ್ಎಸ್ ಕಲ್ಯಗೇಟ್ ಶಾಲೆಯ ಕೆ. ಮಂಜುಳ ಪ್ರಥಮ, ಮಾರುತಿ ಪಬ್ಲಿಕ್ ಶಾಲೆಯ ಜಿ. ಗಗನ ದ್ವಿತೀಯ ಮತ್ತು ತೇಜಸ್ವಿನಿ ತೃತೀಯ. ವರ್ಣ ಚಿತ್ರ ಬಿಡಿಸುವ ಸ್ವರ್ಧೆಯಲ್ಲಿ ಜಿಜಿಪಿಎಸ್ನ ಎ.ಎಂ. ಮಮತಾ ಪ್ರಥಮ, ಜಿಜಿಎಚ್ಎಸ್ನ ಕಲೀಂ ಪಾಷ ದ್ವಿತೀಯ, ಡಿ.ಸ್ನೇಹ ತೃತೀಯ. ಚರ್ಚಾ ಸ್ಪರ್ಧೆಯಲ್ಲಿ ಜಿಜಿಎಂಎಸ್ ಶಾಲೆಯ ಆರ್. ನಾಗರತ್ನ ಪ್ರಥಮ, ಎಂ.ಸಿ. ಸಂಜಯ್ ದ್ವಿತೀಯ, ಆಲ್ಪಲಾ ಕಾಲೇಜಿನ ಮಧುಶ್ರೀ ತೃತೀಯ ಬಹುಮಾನ ಪಡೆದಿದ್ದು, ಶಾಸಕ ಎಚ್.ಸಿ. ಬಾಲಕೃಷ್ಣ ನಗದು ಬಹುಮಾನ ವಿತರಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.