ಬೆಂಗಳೂರು ಗ್ರಾಮಾಂತರ

ಅಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ

Published On :

ಸೂಲಿಬೆಲೆ: ಶಾಲೆ ಮಕ್ಕಳಿಂದಲೇ ಶಾಲಾ ಕಟ್ಟಡ ಕೆಡವಲು ಯತ್ನಿಸಿದ ಘಟನೆಯ ಬಗ್ಗೆ ತನಿಖೆ ನಡೆಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ (ಆಡಳಿತ)ಗುರುರಾಜ್ ಅವರು ಅಧಿಕಾರಿಗಳ ತಂಡದೊಂದಿಗೆ ಬುಧವಾರ ಶಾಲೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
ಈ ವೇಳೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಕಟ್ಟಡ ಕೆಡವಲು ಕುಮ್ಮಕ್ಕು ನೀಡಿದ್ದಾರೆನ್ನಲಾದ ಶಿಕ್ಷಕರನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಮಾತಿನ ಚಕಮಕಿ, ಕೃತ್ಯವನ್ನು ಸಮರ್ಥಿಸಲು ಯತ್ನಿಸಿದ ಉರ್ದು ಶಾಲಾಭಿವೃದ್ಧಿ ಸಮಿತಿ ಕೆಲ ನಾಯಕ ಧೋರಣೆ ಭಾರಿ ವಿರೋಧಕ್ಕೆ ಕಾರಣವಾಗಿ ತಳ್ಳಾಟಕ್ಕೆ ನಾಂದಿಯಾಯಿತು. ತಕ್ಷಣ ಮಧ್ಯ ಪ್ರವೇಶಿಸಿ ಪೊಲೀಸರು ಎಲ್ಲರನ್ನು ಚದುರಿಸಿದರು.
ಬಂದ ಅಧಿಕಾರಿಗಳು: ಮಕ್ಕಳೇ ಶಾಲಾ ಕಟ್ಟಡವನ್ನು ಕೆಡುವುತ್ತಿರುವ ಬಗ್ಗೆ ಸಾಂದರ್ಭಿಕ ಸಾಕ್ಷ್ಯಗಳಿದ್ದರೂ ಡಿಡಿಪಿಐ ಗುರುರಾಜ್ ಹಾಗೂ ಬಿಇಒ ಬೈಲಾಂಜಿನಪ್ಪ ಅವರೊಂದಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ನಂತರ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ  ದೃಶ್ಯ ಮಾಧ್ಯಮದವರು ಡಿಡಿಪಿಐ ಅವರ ವಿವರಣೆಯನ್ನು ಚಿತ್ರೀಕರಣ ಮಾಡುತ್ತಿದ್ದಾಗ ಘಟನೆಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.ಇದಕ್ಕೆ ಉರ್ದು ಶಾಲೆಯ ಸದಸ್ಯರೊಬ್ಬರು ವಿರೋಧ ವ್ಯಕ್ತಪಡಿಸಿದ್ದು ಅಲ್ಲಿದ್ದ ಗುಂಪು ಕೆರಳಲು ಕಾರಾಣವಾಯಿತು. ನಂತರ ಮಾತಿನ ಚಕಮುಕಿ, ತಳ್ಳಾಟ, ಪರಸ್ವರ ಆರೋಪ, ಪ್ರತ್ಯಾರೋಪಗಳಿಗೆ ನಾಂದಿಯಾಯಿತು.
ಶಿಕ್ಷಕರೊಂದಿಗೆ ಸದಸ್ಯರು ಶಾಮೀಲು: ಶಾಲಾ ಕಟ್ಟಡವನ್ನು ಮಕ್ಕಳಿಂದ ಒಡೆಸಲು ಶಾಲಾ ಶಿಕ್ಷಕರೊಂದಿಗೆ ಶಾಲಾಭಿವೃದ್ಧಿ ಸಮಿತಿಯವರು ಶಾಮೀಲಾಗಿರುವ ಸಂಶಯವಿದ್ದು, ಕೂಡಲೇ ಸಮಗ್ರ ತನಿಖೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಸಿದರು. ಕೃತ್ಯವನ್ನು ಸಮರ್ಥನೆ ಮಾಡಲು ಯತ್ನಿಸುತ್ತಿರುವುದನ್ನು ಗಮನಿಸಿದರೆ ಇದಕ್ಕೆ ಶಾಲಾಭಿವೃದ್ಧಿ ಸಮಿತಿ ಕೈವಾಡವಿದೆ ಎಂಬ ಗುಮಾನಿ ವ್ಯಕ್ತವಾಗುತ್ತದೆ. ಪೂರ್ವ ನಿಯೋಜಿತವಾಗಿ ಕಲಿಕೆಯ ಮಕ್ಕಳನ್ನು  ಗೋಡೆ ಕೆಡವಲು ಬಿಟ್ಟು ಅಲ್ಲಿ ಉರ್ದು ಪ್ರೌಢಶಾಲೆ ಕಟ್ಟುವ ಹುನ್ನಾರವಾಗಿದೆ. ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಲು ಬಿಟ್ಟ ಶಿಕ್ಷಕರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ನೊಟೀಸ್ ಜಾರಿ: ಘಟನೆ ಬಗ್ಗೆ ವಿವರಣೆ ಕೊಡುವಂತೆ ಹಿರಿಯ ಉರ್ದು ಶಾಲೆ ಹಾಗೂ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಘಟನೆ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಗುರುರಾಜ್ ಹಾಗೂ ಬಿಇಒ ಬೈಲಾಂಜಿನಪ್ಪ ತಿಳಿಸಿದ್ದಾರೆ. ಈ ನಡುವೆ ಗ್ರಾಮಸ್ಥರು  ಘಟನೆಯಲ್ಲಿ  ಶಾಲಾಭಿವೃದ್ಧಿ ಸಮಿತಿ ಕೈವಾಡವಿದೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ಕೋರಿ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.