'ವಿವೇಕಾನಂದ ಸ್ವಾಭಿಮಾನಿ ಭಾರತದ ಸಂಕೇತ'
ದೊಡ್ಡಬಳ್ಳಾಪುರ: ಸ್ವಾಮಿ ವಿವೇಕಾನಂದರು ಭಾರತದ ಪ್ರತಿಷ್ಠೆ. ಈ ನೆಲದ ಸಾಂಸ್ಕೃತಿಕ ಮೌಲ್ಯಗಳನ್ನು ಉನ್ನತ ಮಟ್ಟಕ್ಕೆ ಏರಿಸುವ ಜೊತೆಗೆ ಸ್ವಾಭಿಮಾನಿ ಬದುಕಿನ ಚಿಂತನೆಯನ್ನು ಕೊಟ್ಟವರು ಎಂದು ವಿವೇಕಾನಂದ ಚಿಂತನೆಗಳ ಪ್ರಚಾರಕಿ ಸುಧಾ ನಾಗೇಶ್ ಹೇಳಿದರು.
ಇಲ್ಲಿನ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ವೇದಿಕೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಮತ್ತು ಯುವಜನತೆ ವಿಚಾರವಾಗಿ ಮಾತನಾಡಿದರು.
ಆಧ್ಯಾತ್ಮ, ಸಾಮರಸ್ಯ, ಸಮೃದ್ಧಿ ಮತ್ತು ಸಂಸ್ಕೃತಿಯ ತವರಾಗಿ ಭಾರತವನ್ನು ವಿಶ್ಲೇಷಿಸಿದ ವಿವೇಕಾನಂದರು ಪಾಶ್ಚಾತ್ಯ ಜನರನ್ನು ತಮ್ಮ ಮೌಲಿಕ ಆದರ್ಶಗಳಿಂದ ಸೂಜಿಗಲ್ಲಿನಂತೆ ಸೆಳೆದರು. ಭಾರತದ ಮೇಲಿನ ಅವರ ಅಭಿಪ್ರಾಯವನ್ನು ಬದಲಿಸುವ ಮಹತ್ವದ ಕೆಲಸ ವಿವೇಕಾನಂದರಿಂದಾಯಿತು. ಅವರು ಈ ನೆಲದ ಯುವಕರಿಗೆ ಎಂದೆದೂ ದೊಡ್ಡ ಆದರ್ಶ. ಆಧುನೀಕರಣದ ಅಲೆಯಿಂದ ಮನುಷ್ಯ ಪ್ರತಿ ನಿಮಿಷವೂ ಒತ್ತಡದಲ್ಲಿರುತ್ತಾನೆ. ಹೀಗಾಗಿ ದೇಶದ ಚಿಂತನೆ ಮತ್ತು ತನ್ನನ್ನು ತಾನು ಅರಿತುಕೊಳ್ಳುವಲ್ಲಿ ನಮ್ಮ ಯುವಜನತೆ ವಿಫಲವಾಗುತ್ತಿದ್ದಾರೆ. ವಿವೇಕ ವಿಚಾರಧಾರೆಗಳು ಇಂದಿನ ಯುವ ಪೀಳಿಗೆಗೆ ತಲುಪಿದರೆ ಅವರು ನೈತಿಕ ಮತ್ತು ಆಧ್ಯಾತ್ಮಿಕ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ನಿರಂತರ ಆಧ್ಯಾತ್ಮಿಕತೆ ಮತ್ತು ಧ್ಯಾನದಿಂದ ಮನುಷ್ಯನನ್ನು ಸಾತ್ವಿಕವಾಗಿ ಮತ್ತು ಬೌದ್ದಿಕವಾಗಿ ಸದಾ ಜೀವಂತವಿರಲು ಸಾಧ್ಯವಾಗುತ್ತದೆ ಎಂದರು.
ಕೊಂಗಾಡಿಯಪ್ಪ ವಿದ್ಯಾ ಸಂಸ್ಥೆ ಖಜಾಂಚಿ ಡಿ. ಪ್ರಭುದೇವಯ್ಯ, ನಿರ್ದೇಶಕ ವಿ. ತಿಮ್ಮಶೆಟ್ಟಪ್ಪ, ಜಗದೀಶಬಾಬು, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ. ಮಹದೇವ್, ಪ.ಪೂ. ಕಾಲೇಜು ಪ್ರಾಂಶುಪಾಲ ಎಸ್. ಮಹಾಬಲೇಶ್ವರ್, ಹಿರಿಯ ವಿದ್ಯಾರ್ಥಿಗಳ ವೇದಿಕೆಯ ಅಧ್ಯಕ್ಷೆ ಎಸ್. ರಾಜಲಕ್ಷ್ಮಿ, ಕಾರ್ಯದರ್ಶಿ ಆರ್.ಮಂಜುನಾಥ್, ಖಜಾಂಚಿ ಎನ್. ಸತ್ಯನಾರಾಯಣ್, ಉಪನ್ಯಾಸಕ ಎಸ್. ಕೃಷ್ಣಯ್ಯ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

