ಬೆಂಗಳೂರು ಗ್ರಾಮಾಂತರ

ಚರ್ಮ ಕುಶಲ ಕರ್ಮಿಗಳಿಗೆ ಯಂತ್ರೋಪಕರಣಗಳ ವಿತರಣಾ ಸಮಾರಂಭ

Published On :

ದೇವನಹಳ್ಳಿ: ದೇವನಹಳ್ಳಿ ಸೂಲಿಬೆಲೆ ರಸ್ತೆಯಲ್ಲಿರುವ ಮದರ್ ತೆರೇಸಾ ಟ್ರಸ್ಟ್ ಸಂಸ್ಥೆಯಲ್ಲಿ ಚರ್ಮ ತರಬೇತಿ ಪಡೆದ ಮಹಿಳಾ ಕುಶಲ ಕರ್ಮಿಗಳಿಗೆ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಯಂತ್ರೋಪಕರಣಗಳ ವಿತರಣಾ ಸಮಾರಂಭ ಶನಿವಾರ ಆಯೋಜಿಸಲಾಗಿತ್ತು. ಸಮಾರಂಭದ ಉದ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿ ಮಹಿಳೆಯರು ಆರ್ಥಿಕವಾಗಿ  ಬದುಕಬೇಕಾದರೆ ಅವರಿಗೆ ತರಬೇತಿ ಪಡೆಯುವ ಇಚ್ಛಾಶಕ್ತಿ ಇರಬೇಕು. ಅಲ್ಲದೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಚರ್ಮ ಉದ್ಯಮ ಎಂದಾಕ್ಷಣ ಅಗೌರವ ಎಂದು ಭಾವಿಸಬೇಕಾಗಿಲ್ಲ. ಇಂದು ಚರ್ಮದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ನೈಪುಣ್ಯತೆ ಮುಖ್ಯವಾಗಿರುತ್ತದೆ ಎಂದರಲ್ಲದೆ ಅವರಿಗೆ ದೇವನಹಳ್ಳಿ ಮತ್ತು ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿ  ತೆರೆಯಲು ಸ್ಥಳಾವಕಾಶ ಕಲ್ಪಿಸುವುದಾಗಿ ತಿಳಿಸಿದರು. ಮದರ್ ತೆರೇಸಾ ಟ್ರಸ್ಟ್ ವತಿಯಿಂದ ತರಬೇತಿ ನೀಡುತ್ತಿರುವ ಪುರಸಭೆ ಮಾಜಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ ಅವರ ಸೇವೆಯನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಲಿಡ್ಕ್‌ರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ರಾಜಶೇಖರ್ ಮಾತನಾಡಿ ತರಬೇತಿ ಪಡೆದವರು ತಯಾರಿಸಿದ ಉತ್ಪನ್ನಗಳಿಗೆ ನಿಗಮದಿಂದ ರಸ್ತೆ ಬದಿ ಕುಟೀರ ನಿರ್ಮಿಸಿಕೊಡುವುದಾಗಿ ತಿಳಿಸಿದರು. ಯಾವುದೇ ವಸ್ತು ತಯಾರಿಕೆ ಮುಖ್ಯವಲ್ಲ, ಅದರ ಮಾರುಕಟ್ಟೆ ವ್ಯವಸ್ಥೆ ಅಗತ್ಯವಾಗಿರುತ್ತದೆ ಎಂದರು. ಮದರ್ ತೆರೇಸಾ ಸಂಸ್ಥೆಯ ಎಂ. ನಾರಾಯಸ್ವಾಮಿ ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೀರಭದ್ರಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಬಿ.ಕೆ. ಶಿವಪ್ಪ ಉಪಸ್ಥಿತರಿದ್ದರು. ಕೆ.ತಿಪ್ಪೇಸ್ವಾಮಿ ವಂದನೆ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.