ಒಂದಾಗಿ ದೇಶ ಮುನ್ನಡೆಸೋಣ
ಆನೇಕಲ್ಲು: ಭಾರತ ದೇಶ ವಿವಿಧತೆಯಲ್ಲಿ ಏಕತೆ ಸಾರುವ, ಎಲ್ಲ ಧರ್ಮೀಯರನ್ನೂ ಗೌರವಿಸುವ ಸತ್ ಸಂಪ್ರದಾಯ ಹೊಂದಿರುವ ವಿಶಿಷ್ಠ ನಾಡಾಗಿದೆ.
ಇಂದು ವಿಶ್ವದಲ್ಲೇ ಭಾರತ ಐಟಿ ಬಿಟಿಗಾಗಿ ಖ್ಯಾತಿ ಪಡೆದಿದೆ. ದೇಶದ ಐಕ್ಯತೆ, ಸಮಗ್ರ ಅಭಿವೃದ್ಧಿಗಾಗಿ ಎಲ್ಲ ಬಾಂಧವರು ಒಗ್ಗೂಡಬೇಕಿದೆ ಎಂದು ಆನೇಕಲ್ ಶಾಸಕ ಬಿ.ಶಿವಣ್ಣ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ನಾಯನಹಳ್ಳಿ ಈದ್ಗಾ ಮೈದಾನದಲ್ಲಿ ನಡೆದ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿ ರಂಜಾನ್ ಉಪವಾಸದ ಹಬ್ಬ. ಶಿಸ್ತು, ಸಂಯಮ ಮತ್ತು ನಿಷ್ಠೆ ಸಾರುವ ಹಬ್ಬ. ಈ ದಿನಗಳಲ್ಲಿ ದೇಶದ ಅಬಿವೃದ್ಧಿಗಾಗಿ ದೇಶವಾಸಿಗಳಲ್ಲಿ ಸಹೋದರತೆಗಾಗಿ ಎಲ್ಲರೂ ಪ್ರಾರ್ಥನೆ ಸಲ್ಲಿಸಬೇಕಾಗಿದೆ. ಅಬಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ಗುರುತಿಸಲಾಗುತ್ತಿದ್ದು, ನಾವೆಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.
ಬೆಂಗಳೂರು ನಗರ ಜಿಪಂ ಮಾಜಿ ಅದ್ಯಕ್ಷ ಎಚ್. ಎಸ್. ಬವಸರಾಜು, ಹಾರಗದ್ದೆ ಗ್ರಾಪಂ ಮಾಜಿ ಅದ್ಯಕ್ಷ ನಟರಾಜು, ಪ್ಯಾರೇಜಾನ್, ಕಾರ್ಯದರ್ಶಿ ಮುಜಾಮಿಲ್, ಚಾಂದ್ ಪಾಷ, ವೆಂಕಟೇಶ್ ಇದ್ದರು.
ಅಧಿಕಾರ ದುರ್ಬಳಕೆ: ಕ್ರಮಕ್ಕೆ ಆಗ್ರಹ
ಬೆಂಗಳೂರು: ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆ ಕಾರ್ಯದರ್ಶಿ, ಐಎಫ್ಎಸ್ ಅಧಿಕಾರಿ ರಾಮಚಂದ್ರ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಬರೆದ ಪತ್ರದಲ್ಲಿ ಕಾರ್ಯದರ್ಶಿ ರಾಮಚಂದ್ರ ವಿರುದ್ಧ ಅಧಿಕಾರ ದುರ್ಬಳಕೆಯ ಗಂಭೀರ ಆರೋಪಮಾಡಿರುವ ವಾಮನ ಆಚಾರ್ಯ, ಅಧಿಕಾರಿ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ರಾಮಚಂದ್ರ ಅಧಿಕಾರ ವಹಿಸಿಕೊಂಡ ದಿನದಿಂದ ಮಂಡಳಿಯ ಕಾರ್ಯ ನಿರ್ವಹಣೆಯಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಅವರಿಗೆ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ. ಪರಿಸರ ಕಾನೂನುಗಳು ಹಾಗೂ ನಡಾವಳಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ಅಂತಿಮವಾಗಿ ನಿಮ್ಮ ಗಮನ ಸೆಳೆಯುವುದು ಅನಿವಾರ್ಯವಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ. ರಾಮಚಂದ್ರ ಅವರು ಈ ಹುದ್ದೆಗೆ ವರ್ಗವಾಗಿ ಬಂದ ನಂತರ ಎಸಗಿದ ಕಾನೂನು ಬಾಹಿರ ಕ್ರಮಗಳು ಹಾಗೂ ವರ್ಗಾವಣೆ ಬಗ್ಗೆ ಎಳೆ ಎಳೆಯಾಗಿ ವಿವರಿಸುವುದು ನನ್ನ ಹಾಗೂ ನಿಮ್ಮ ಅಮೂಲ್ಯ ಸಮಯದ ವ್ಯರ್ಥವೇ ಸರಿ. ಏಕೆಂದರೆ ಅವರು ಆ ಪ್ರಮಾಣದಲ್ಲಿ ತಪ್ಪುಗಳನ್ನು ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

