ಬೆಂಗಳೂರು ಗ್ರಾಮಾಂತರ

ಮರು ಮೌಲ್ಯಮಾಪನ ನಂತರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಬಾಲಕಿ

Published On :

ಮಾಗಡಿ: ಪ್ರಸ್ತುತ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದೊರಕಿದ ಕಡಿಮೆ ಅಂಕದಿಂದ ವಿಚಲಿತರಾದ ವಿದ್ಯಾರ್ಥಿನಿಯೊಬ್ಬಳು ಮರು ಮೌಲ್ಯಮಾಪನ ಮಾಡಿಸಿದ ಪರಿಣಾಮ ಹೆಚ್ಚಿನ 19 ಅಂಕಗಳು ಲಭಿಸಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾಳೆ.
    ಮಾಗಡಿ ಪಟ್ಟಣದ ವಾಸವಿ ವಿದ್ಯಾ ನಿಕೇತನ ಶಾಲೆಯಲ್ಲಿ ಅಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿನಿ ಎಸ್. ಆರ್, ದೀಕ್ಷಿತ  ಪರೀಕ್ಷೆಯಲ್ಲಿ  599 ಅಂಕಗಳಿಸಿ ಶೇ.95.84 ಫಲಿತಾಂಶ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನಗಳಿಸಿದ್ದಳು. ಆದರೆ ಇನ್ನೂ ಹೆಚ್ಚಿನ ಅಂಕ ಬರಬೇಕೆಂದು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಿದಳು. ಮರು ಮೌಲ್ಯ ಮಾಪನ ನಂತರ ಹೆಚ್ಚಿನ 19 ಅಂಕಗಳನ್ನು ಲಭಿಸಿದ್ದು, ಈ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
   ಮರು ಮೌಲ್ಯಮಾಪನ ಮುನ್ನಾ ವಿಜ್ಞಾನ ವಿಷಯದಲ್ಲಿ 79 ಅಂಕಗಳಿಸಿದ್ದಳು. ಮರು ಮೌಲ್ಯಮಾಪನ ನಂತರ 18 ಹೆಚ್ಚಿನ ಅಂಕಗಳು ಲಭಿಸಿದ ಕಾರಣ ವಿಜ್ಞಾನದಲ್ಲಿ 100ಕ್ಕೆ 97 ಅಂಕಗಳು ಬಂದಂತಾಯಿತು. ಇದೇ ರೀತಿ ಕನ್ನಡದಲ್ಲಿಯೂ ಮರು ಮೌಲ್ಯಮಾಪನ ನಂತರ ಹೆಚ್ಚಿನ 1 ಅಂಕ ಬಂದಿದ್ದು, ಇದರಿಂದಾಗಿ ಒಟ್ಟು 19 ಅಂಕಗಳು ಮರು ಮೌಲ್ಯಮಾಪನದಿಂದ ಸಿಕ್ಕಿದ್ದು, ಒಟ್ಟಾರೆ  625ಕ್ಕೆ 610 ಅಂಕಗಳು ಪಡೆದು, ಶೇ.98.80 ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಗಳಿಸುವಲ್ಲಿ ಯಶಸ್ವಿಯಾದಳು. ಈ ಮೂಲಕ ಶಾಲೆಗೆ ಕೀರ್ತಿ ತಂದ ಎಸ್.ಆರ್. ದೀಕ್ಷಿತ ಅವರನ್ನು ವಾಸವಿ ವಿದ್ಯಾನಿಕೇತನ ಆಡಳಿತ ಮಂಡಲಿ ಅಭಿನಂದಿಸಿತು.
ವಿಜ್ಞಾನ ವಿಷಯದಲ್ಲಿ ಅಧ್ಯಯನ: ಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿ ಪರೀಕ್ಷೆಯಲ್ಲಿಯೂ ಪ್ರಥಮ ಸ್ಥಾನದಲ್ಲಿರುತ್ತಿದ್ದೆ. ವಾರ್ಷಿಕ ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಲಭಿಸಿದ್ದು, ನನಗೆ ತುಂಬ ಬೇಸರ ತಂದಿತ್ತು. ಕೂಡಲೆ ಮರು ಮೌಲ್ಯಮಾಪನ ಮಾಡಿಸುವ ತೀರ್ಮಾನಕ್ಕೆ ಬಂದೆ.  ಮರು ಮೌಲ್ಯಮಾಪನದ ನಂತರ ಹೆಚ್ಚಿನ 19 ಅಂಕಗಳು ಲಭಿಸಿದ್ದು, ಕೊನೆಗೂ ಪ್ರಥಮ ಸ್ಥಾನಗಳಿಸುವಲ್ಲಿ ಯಶಸ್ವಿಯಾದೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಬೇಕೆಂದಿದ್ದೇನೆ ಎಂದು ವಿದ್ಯಾರ್ಥಿನಿ ಎಸ್.ಆರ್. ದೀಕ್ಷಿತ ತಿಳಿಸಿದರು.

ಮೌಲ್ಯಮಾಪನದ ವೇಳೆ ಶಿಕ್ಷಕನಿಂದ ಆಗುವ ತಪ್ಪಿನಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸಿದಂತಾಗುತ್ತದೆ. ಮೌಲ್ಯಮಾಪನಕ್ಕೆ ತೆರಳುವ ಶಿಕ್ಷಕರಿಗೆ ನಾವು ಸಹ ತಿಳುವಳಿಕೆ ನೀಡಿರುತ್ತೇವೆ.ಆದರೂ ತಪ್ಪಾಗಿ ಹೋಗಿದ್ದು, ಮರು ಮೌಲ್ಯಮಾಪನದಿಂದ ನ್ಯಾಯ ದೊರಕಿದ್ದು ನನಗೂ ಸಂತಸ ತಂದಿದೆ.
-ರಂಗಸ್ವಾಮಿ, ಬಿಇಒ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.