ಬೆಂಗಳೂರು ಗ್ರಾಮಾಂತರ

ಬ್ಯಾಟರಿ, ಪೆಟ್ರೋಲ್ ಚಾಲಿತ ಬೈಕ್ ಶೋಧ

Published On :

ದೊಡ್ಡಬಳ್ಳಾಪುರ: ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ದ್ವಿಚಕ್ರವಾಹನ ಕೊಳ್ಳುವ ಆಸೆ ನಿಮ್ಮದಾಗಿದ್ದರೆ ಅದನ್ನು ಈಡೇರಿಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೊಸಬಗೆಯ ಶೋಧ ನಡೆಸಿ, ಯಶಸ್ವಿಯಾಗಿದ್ದಾರೆ.
ಪೆಟ್ರೋಲ್ ಬೆಲೆ ದಿನೇ ದಿನೇ ಗಗನಮುಖಿಯಾಗುತ್ತಿರುವ ಈ ಸಂದರ್ಭದಲ್ಲಿ ಈ ವಾಹನ ಬಳಕೆಗೆ ಯೋಗ್ಯ. ಇದನ್ನು ಪೆಟ್ರೋಲ್ ಮತ್ತು ವಿದ್ಯುತ್ ಬ್ಯಾಟರಿಗಳಿಂದ ಚಲಿಸಬಹುದಾಗಿದೆ. 110 ಸಿಸಿ 2-ಸ್ಟ್ರೋಕ್ ಸಾಮರ್ಥ್ಯದ ವಾಹನ ಇದಾಗಿದ್ದು, ಹಿಂದಿನ ಚಕ್ರವನ್ನು ಇಸಿ-ಎಂಜಿನ್ ಮುಖಾಂತರ, ಮುಂದಿನ ಚಕ್ರವನ್ನು ವಿದ್ಯುತ್ ಬ್ಯಾಟರಿ ಮುಖಾಂತರ ಚಲಿಸುವಂತೆ ಆವಿಷ್ಕರಿಸಲಾಗಿದೆ. ಬಳಕೆದಾರರ ಉಪಯೋಗಕ್ಕಾಗಿ ಸ್ವಿಚ್ ಸಿಸ್ಟಮ್ ಆಳವಡಿಸಲಾಗಿದ್ದು, ಯಾವ ವ್ಯವಸ್ಥೆ ಬೇಕಿದ್ದರೂ ಸುಲಭವಾಗಿ ಬದಲಿಸಿಕೊಳ್ಳಬಹುದು. ಒಂದೇ ಬಾರಿ ಎರಡೂ ವ್ಯವಸ್ಥೆಗಳನ್ನು ಬಳಸಿ ಚಾಲನೆ ಮಾಡಬಹುದಾದ ಅವಕಾಶ ಇದೆ. ಇದರಿಂದ ವಾಹನದ ಕಾರ್ಯಕ್ಷಮತೆ ಹೆಚ್ಚಿಸಬಹುದಾಗಿದೆ ಎಂಬುದು ಸಂಶೋಧನಾ ವಿದ್ಯಾರ್ಥಿಗಳ ಅಭಿಪ್ರಾಯ.
ಕಾಲೇಜಿನ ಯಾಂತ್ರಿಕ ವಿಭಾಗದ ಸಹ ಪ್ರಾಧ್ಯಾಪಕ ಎಚ್.ಜಿ.ಶೆಣೈ ಮಾರ್ಗದರ್ಶನದಲ್ಲಿ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಅನುಷ್ ಮಾಂಡೋಲಿ, ಅವಿನಾಶ್ ಚೌಧರಿ, ವಿಕಾಸ್‌ಕುಮಾರ್ ವರ್ಮ ಮತ್ತು ತೇಜೇಶ್ ಈ ವಾಹನ ಆವಿಷ್ಕಾರ ಮಾಡಿದ್ದಾರೆ. ಈ ವಾಹನ 1 ಲೀಟರ್ ಪೆಟ್ರೋಲ್‌ಗೆ 47 ಕಿ.ಮೀ, ಬ್ಯಾಟರಿಯೊಂದಿಗೆ ಬಳಸಿದರೆ 51 ಕಿ.ಮೀ ಚಲಿಸಬಲ್ಲದು. ಈ ವಾಹನದ ಅಂದಾಜು ಮೊತ್ತ ಕೇವಲ 27 ಸಾವಿರ. ಈ ವೆಚ್ಚವನ್ನು ಮತ್ತಷ್ಟು ತಗ್ಗಿಸುವ ಅವಕಾಶವಿದ್ದು, ಎಲ್ಲರಿಗೂ ಸುಲಭ ದರದಲ್ಲಿ ಸಿಗುವಂತೆ ಮಾಡಬಹುದು ಎನ್ನುತ್ತಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ನಿರ್ದೇಶಕ ರಾಜೇಂದ್ರ, ಸಿಇಒ ಗಂಗಾಧರಪ್ಪ, ಪ್ರಾಂಶುಪಾಲ ನಂದಕುಮಾರ್ ಮತ್ತು ವಿಭಾಗ ಮುಖ್ಯಸ್ಥ ಶ್ರೀನಿವಾಸರೆಡ್ಡಿ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.