ರಾಮನಗರ ರೋಟರಿ ಸಂಸ್ಥೆಗೆ ಒಟ್ಟು 16 ಪ್ರಶಸ್ತಿ
ರಾಮನಗರ : 2013-14ನೇ ಸಾಲಿನಲ್ಲಿ ರಾಮನಗರದ ರೋಟರಿ ಸಂಸ್ಥೆಯು ಹಮ್ಮಿಕೊಂಡಿದ್ದ ಸಾಮಾಜಿಕ ಸೇವಾ ಕಾರ್ಯಕ್ರಮಗಳಿಗಾಗಿ ಸಂಸ್ಥೆಗೆ ಅತ್ಯುತ್ತಮ ರೋಟರಿ, ಚಾಂಪಿಯನ್ ಪ್ರಶಸ್ತಿ ಸೇರಿದಂತೆ ಒಟ್ಟು 16 ಪ್ರಶಸ್ತಿಗಳು ಲಭಿಸಿವೆ ಎಂದು ರೋಟರಿ ಅಧ್ಯಕ್ಷ ಆರ್.ಜಿ. ಚಂದ್ರಶೇಖರ್ ತಿಳಿಸಿದರು. ಜಿಲ್ಲೆಯಲ್ಲಿ ಆರೋಗ್ಯ ಶಿಬಿರಗಳು, ಜನ ಜಾಗೃತಿ ಶಿಬಿರಗಳು, ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ, ನೀರು ಶುದ್ದೀಕರಣ ಯಂತ್ರಗಳ ವಿತರಣೆ ಸೇರಿದಂತೆ 70ಕ್ಕೂ ಹೆಚ್ಚು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕನಕಪುರ ತಾಲೂಕು ಅಣೇದೊಡ್ಡಿಯಲ್ಲಿ ಡೆಂಘಿ ರೋಗ ಇಡೀ ಗ್ರಾಮವನ್ನು ವ್ಯಾಪಿಸಿದ್ದ ಸಂದರ್ಭದಲ್ಲಿ ಜಿ.ಪಂ. ಸಹಯೋಗದಲ್ಲಿ ಗ್ರಾಮಸ್ಥರಿಗೆ ಸೊಳ್ಳೆ ಬ್ಯಾಟ್ಗಳನ್ನು ನೀಡಿ ಸೊಳ್ಳೆ ನಿಯಂತ್ರಣಕ್ಕೆ ಸಂಸ್ಥೆಯು ಸಹಕರಿಸಿದೆ. ನೈರ್ಮಲ್ಯದ ಕುರಿತು ಸಹ ಗ್ರಾಮಸ್ಥರರಲ್ಲಿ ಅರಿವು ಮೂಡಿಸಲಾಗಿತ್ತು ಎಂದರು.
ರಾಸುಗಳಿಗೆ ಕಾಲು ಬಾಯಿ ಜ್ವರ ವ್ಯಾಪಕವಾಗಿ ಹರಡಿಕೊಂಡಿದ್ದ ಸಂದರ್ಭದಲ್ಲಿ ತಮ್ಮ ಸಂಸ್ಥೆ ತಾಲೂಕಿನಾದ್ಯಂತ ನಿರಂತರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಜ್ವರ ಹರಡದಂತೆ ಗ್ರಾಮಸ್ಥರು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಿತ್ತು ಎಂದು ತಮ್ಮ ಸೇವಾವಧಿಯಲ್ಲಿ ನಡೆದ ಕಾರ್ಯಕ್ರಮಗಳ ವಿವರ ಚಂದ್ರಶೇಖರ್ ನೀಡಿದರು.
ವೈಷ್ಣವಿ ಅಂಗವಿಕಲರ ಕೇಂದ್ರದ ಮಕ್ಕಳಿಗೆ ವೀಲ್ಚೇರ್ಗಳನ್ನು ನೀಡಲಾಗಿದೆ. ವಿವಿಧ ಶಾಳೆಗಳಲ್ಲಿ ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತದ ಸಹಕಾರದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಕುರಿತು ಅಂತರಾಷ್ಟ್ರೀಯ ಸಲಹೆಗಾರರನ್ನು ಕರೆಸಿ ಸ್ಥಳೀಯ ಉದ್ದಿಮೆಗಳ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಾಗಿದೆ ಎಂದರು. ಪೊಲಿಯೋ ಮುಕ್ತ ಭಾರತಕ್ಕೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ ಎಂದ ಅವರು ಈ ನಿಟ್ಟಿನಲ್ಲಿ ಕಳೆದ ಕೆಲವು ದಶಕಗಳ ರೋಟರಿ ಹೋರಾಟಕ್ಕೆ ಸಫಲತೆ ದಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಗಾಲಿ ಕುರ್ಚಿ ಮೇಲೆ ನೃತ್ಯ 13ಕ್ಕೆ
ಬೆಂಗಳೂರು: ಮೊಬಿಲಿಟಿ ಇಂಡಿಯಾ ಸಂಸ್ಥೆ ಗಾಲಿಕುರ್ಚಿಗಳ ಮೇಲಿನ ನೃತ್ಯ ಕಾರ್ಯಕ್ರಮವನ್ನು ಮ್ಯೂಸಿಯಂ ರಸ್ತೆಯ ಗುಡ್ ಷೆಪರ್ಡ್ ಸಭಾಂಗಣದಲ್ಲಿ ಜು. 13ರಂದು ಆಯೋಜಿಸಿದೆ. ಸಂಸ್ಥೆಯು ವಿಭಿನ್ನ ಸಾಮರ್ಥ್ಯವುಳ್ಳ ವಿಕಲಚೇತನ ಕಲಾವಿದರನ್ನು ಹೊಂದಿದ್ದು, ವಿಶ್ವದಾದ್ಯಂತ ಹತ್ತುಸಾವಿರ ಪ್ರದರ್ಶನ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

