ಬೆಂಗಳೂರು ಗ್ರಾಮಾಂತರ

ಮಕ್ಕಳಿಗೆ ಮಾನಸಿಕ, ದೈಹಿಕವಾಗಿ ದೌರ್ಜನ್ಯ ನೀಡಿದರೆ ಶಿಕ್ಷೆ

Published On :

ನೆಲಮಂಗಲ: ಸರ್ಕಾರ ಸಂವಿಧಾನಾತ್ಮಕವಾಗಿ  ಮಕ್ಕಳಿಗೆ ನೀಡಿರುವ ಹಕ್ಕುಗಳನ್ನು ಯಾವುದೇ ನಿರ್ವಂಚನೆ ಇಲ್ಲದೆ  ನೀಡುವುದು ಮತ್ತು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದರೆ ಮತ್ತು  ಮಕ್ಕಳಿಗೆ ಮಾನಸಿಕವಾಗಿ ದೈಹಿಕವಾಗಿ ದೌರ್ಜನ್ಯ ಹಾಗೂ ಲೈಂಗಿಕ ತೊಂದರೆ ನೀಡುವುದರಿಂದ ಕಾನೂನಿನ ಚೌಕಟ್ಟಿನಲ್ಲಿ ಉಗ್ರ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಮುಖ್ಯ ಶಿಕ್ಷಕ ನರಸಿಂಹಯ್ಯ ತಿಳಿಸಿದರು. ಅವರು ಸೋಮವಾರ ತಾಲೂಕಿನ ಸೋಂಪುರ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಕೆ.ಆರ್.ನಗರದ ಚೇತನ ಕಲಾ ಬಳಗದ ಕಲಾವಿದರಿಂದ  ನಡೆದ ಮಕ್ಕಳ ಹಕ್ಕುಗಳ ಬಗ್ಗೆ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಟ್ಯಾಕ್ಸಿ ಖರೀದಿಸಲು ಸರ್ಕಾರದಿಂದ ಸಹಾಯಧನ
ರಾಮನಗರ: 2013-14ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗದ ನಿರುದ್ಯೋಗಿ ಮತ್ತು ಅರ್ಹ ಮಾಜಿ ಸೈನಿಕರು ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸರ್ಕಾರವು ಸಹಾಯಧನ ನೀಡಲಿದೆ. ಆಸಕ್ತ ಮಾಜಿ ಸೈನಿಕರು ಮಿಲಿಟರಿ ಸೇವಾ ಪುಸ್ತಕ, ಗುರುತು ಚೀಟಿ, ವಾಹನ ಚಾಲನಾ ಪರವಾನಗಿಯೊಂದಿಗೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಕಚೇರಿಗಳನ್ನು ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ನಾಳೆ ಗ್ರಾಹಕರ ಸಂವಾದ ಸಭೆ
ರಾಮನಗರ: ಬೆಸ್ಕಾಂನಿಂದ ಮಾ.5ರ ಮಧ್ಯಾಹ್ನ 3ಕ್ಕೆ ನಗರದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್  ಉಪ ವಿಭಾಗ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ ನಡೆಯಲಿದೆ. ವಿದ್ಯುತ್ಗ್ರಾಹಕರು ಸಂವಾದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಎಇಇ ತಿಳಿಸಿದ್ದಾರೆ.

ಮುಕ್ತ ವಿಶ್ವವಿದ್ಯಾನಿಲಯ ಘಟಿಕೋತ್ಸವ
ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 14ನೇ ವಾರ್ಷಿಕ ಘಟಿಕೋತ್ಸವವು 2014ರ ಮೇ, ಜೂನ್ ತಿಂಗಳಲ್ಲಿ ನಡೆಯಲಿದೆ. ಅರ್ಹ ವಿದ್ಯಾರ್ಥಿಗಳಿಗೆ ಅಧಿಸೂಚನೆ, ಚಲನ್ ಮತ್ತು ಅರ್ಜಿಗಳನ್ನು ಕೇಂದ್ರ ಕಚೇರಿಯಿಂದ ನೇರವಾಗಿ ಅಂಚೆ ಮುಖಾಂತರ ರವಾನಿಸಲಾಗಿದೆ. ಇದುವರೆವಿಗೂ ತಲುಪದೇ ಇರುವ ವಿದ್ಯಾರ್ಥಿಗಳು ಕರಾಮುವಿ ವೆಬ್‌ಸೈಟ್ ಅಥವಾ ರಾಮನಗರದ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ ಖುದ್ದಾಗಿ ಬಂದು ಪಡೆದುಕೊಳ್ಳಬಹುದು. ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಮಾ.15 ಹಾಗೂ ರು.100ರ ದಂಡ ಶುಲ್ಕದೊಂದಿಗೆ ಮಾ.29 ಕಡೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ರಾಮನಗರದ ಪ್ರಾದೇಶಿಕ ಕೇಂದ್ರದ ನಿರ್ದೇಶಕರನ್ನು ಖುದ್ದಾಗಿ ಅಥವಾ ದೂ.080-27274443 ಸಂಪರ್ಕಿಸಬಹುದು ಎಂದು ಕರಾಮುವಿ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.

ನಾಳೆ ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟನೆ
ರಾಮನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರಾರಂಭವಾಗುತ್ತಿರುನ ಗಾಂಧಿ ಅಧ್ಯಯನ ಕೇಂದ್ರವನ್ನು ಮಾ.5ರ ಬೆಳಗ್ಗೆ 11ಕ್ಕೆ ಪವನಾರ ಆಶ್ರಮದ ಗಾಂಧಿ ಮತ್ತು ವಿನೋಬಾ ಅವರ ಅನುಯಾಯಿಯಾದ ಗೌರಮ್ ಬಜಾಜ್ ಉದ್ಘಾಟಿಸುವರು. ಪವನಾರದ ಬ್ರಹ್ಮ ವಿದ್ಯಾಮಂದಿರದ ಸಂಸ್ಥಾಪಕ ಸದಸ್ಯೆ ಉಷಾ ಬೆಹನ್, ಕರ್ನಾಟಕ ಗಾಂಧಿ ಫೌಂಡೇಷನ್‌ನ ಅಧ್ಯಕ್ಷ ಡಾ.ಊಡೇ ಪಿ. ಕೃಷ್ಣ ಭಾಗವಹಿಸುವರು.

ಶಿಕ್ಷಣ- ಹೊಂಬೆಳಕು ಕಾರ್ಯಕ್ರಮ
ಕನಕಪುರ: ಶಿಕ್ಷಣ ಫೌಂಡೇಷನ್ ವತಿಯಿಂದ ಇಲ್ಲಿನ ಸರ್ಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಶಿಕ್ಷಣ - ಹೊಂಬೆಳಕು ಕಾರ್ಯಕ್ರಮ ಕಲಿಕೆಯಲ್ಲಿ ಮುಂದುವರೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ನಡೆಯಿತು. ಕ್ಷೇತ್ರಶಿಕ್ಷಣಾಧಿಕಾರಿ ಶಿವಕುಮಾರ್ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು. ಶಿಕ್ಷಣ ಯೋಜನಾ ಸಂಯೋಜಕ ಕೆ.ಎನ್.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.    ತಾಲೂಕಿನ 175 ಮಾಧ್ಯಮಿಕ ಶಾಲೆಗಳಲ್ಲಿನ ಕಲಿಕೆಯಲ್ಲಿ ಹಿಂದುಳಿದಿದ್ದ 350 ವಿದ್ಯಾರ್ಥಿಗಳು, ತರಬೇತಿ ಪಡೆದ ನಂತರ ಕಲಿಕೆಯಲ್ಲಿ ಪಡೆದುಕೊಂಡ ಗಮನಾರ್ಹ ಪ್ರಗತಿಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಾಯಿತು. ಶಾಲಾಮಕ್ಕಳೇ ಆಯೋಜಿಸಿದ್ದ ವಸ್ತುಪ್ರದರ್ಶನ, ಪುಸ್ತಕ ಪ್ರದರ್ಶನ, ನಮ್ಮೂರ ಸಂತೆಗಳು  ಗಮನ ಸೆಳೆದವು.  ಶಿಕ್ಷಣ ಫೌಂಡೇಷನ್ ಅಧಿಕಾರಿಗಳಾದ ಧರ್ಮೇಂದ್ರ, ಪ್ರಸಾದ್ ರೈ, ಡಯಟ್ ಅಧಿಕಾರಿ ಭೀಮಾನಾಯಕ್, ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್, ಸಂಚಾಲಕರುಗಳಾದ ವಿಶ್ವನಾಥ್, ರಾಜಕುಮಾರ್, ಉಷಾ ರವಿಕುಮಾರ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.