ಬೆಂಗಳೂರು ಗ್ರಾಮಾಂತರ

ದೇವಾಲಯಗಳು ಶಾಂತಿ, ಸಾಮರಸ್ಯದ ಪ್ರತೀಕ: ಸ್ವಾಮೀಜಿ

Published On :

ಮಾಗಡಿ: ದೇವಾಲಯಗಳು ಶಾಂತಿ, ಸಾಮರಸ್ಯದ ಪ್ರತೀಕವಿದ್ದಂತೆ ಎಂದು ಸಿದ್ಧಗಂಗೆಯ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.
   ಅವರು ಮಾಗಡಿ ತಾಲೂಕಿನ ಜೋಡಗಟ್ಟೆ ಗ್ರಾಮದಲ್ಲಿ ಯೋಗ ಮುನೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ನವಗ್ರಹ ಪ್ರತಿಷ್ಠಾಪನೆ, ನೂತನ ವಿಮಾನ ಗೋಪುರದ ಕುಂಭಾಭಿಷೇಕವನ್ನು ನೆರವೇರಿಸಿ ಮಾತನಾಡುತ್ತಾ ದೇವಾಲಯಗಳು ದೇಶಿ ಸಂಸ್ಕೃತಿ ಪರಂಪರೆಯನ್ನು ಉಳಿಸುತ್ತವೆ. ಜತೆಗೆ ಸಾಮರಸ್ಯವನ್ನು ಬೆಸೆಯುತ್ತದೆ.
   ಪ್ರತಿಯೊಬ್ಬರು ಐಕ್ಯತಾ ಮನೋಭಾವದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ಅಂತರಂಗ, ಬಹಿರಂಗದ ಶುದ್ಧೀಕರಣದಿಂದ ಕಾಯಕ ಯೋಗಿಗಳಾಗಬೇಕು. ಪರರ ಲೇಸನ್ನೇ ಬಯಸುವ ಮಠಗಳ ಉದ್ಧಾರಕ್ಕೆ,
ಉದಾರ ದಾನಿಗಳ ಸಹಕಾರ ಬೇಕು  ಎಂದರು.  ಶಾಸಕ ಎಚ್.ಸಿ. ಬಾಲಕೃಷ್ಣ ದೇವಾಲಯಗಳು ನೆಮ್ಮದಿಯ ತಾಣ. ಆಧುನಿಕ ಜೀವನದ ಜಂಜಾಟದಲ್ಲಿ ಮನುಷ್ಯ ಅನೇಕ ಒತ್ತಡಗಳಿಂದ ಸಮಸ್ಯೆ ಎದುರಿಸುತ್ತಿರುತ್ತಾನೆ.
 ದೇವಾಲಯಗಳು ಶಾಂತಿ, ನೆಮ್ಮದಿ ನೀಡುತ್ತದೆ ಎಂದರು.
   ಗುಮ್ಮಸಂದ್ರದ ಚಂದ್ರಶೇಖರಸ್ವಾಮೀಜಿ ಮಾತನಾಡಿ, ಮಾಗಡಿ ತಾಲೂಕಿನಲ್ಲಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಕೆರೆ, ಗೋಕಟ್ಟೆ, ಕಲ್ಯಾಣಿಗಳು ಕಣ್ಮರೆಯಾಗುತ್ತದೆ. ಇದು ಮುಂದುವರೆದರೆ ಮುಂದಿನಪೀಳಿಗೆ ನಾನಾ ಸಮಸ್ಯೆಗಳನ್ನು ಎದುರಿಸಬೇಕಾದಿತು. ಪುಣ್ಯಪುರುಷ ಕೆಂಪೇಗೌಡರು ಕಟ್ಟಿಸಿರುವ ಕೆರೆ, ಗೋಕಟ್ಟೆ, ಕಲ್ಯಾಣಿಗಳ ಸಂರಕ್ಷಿಸಬೇಕಾದದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದರು.
   ಪ್ರತಿಯೊಂದು ಸಮಸ್ಯೆಗಳಿಗೆ ಆಧ್ಯಾತ್ಮಿಕತೆಯಿಂದಲೇ ಪರಿಹಾರ ದೊರಕಲಿದೆ. ವೈಜ್ಞಾನಿಕ ತಳಹದಿಯ ಮೇಲೆ ಧರ್ಮ, ಧಾರ್ಮಿಕ ನೆಲಗಟ್ಟು ಬೆಳೆಸುವ ಪರಂಪರೆ ಮುಂದುವರೆಯಬೇಕಿದೆ ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಚಾರ್ಯಸ್ವಾಮೀಜಿ ತಿಳಿಸಿದರು.
   ಕಂಚಗಲ್ ಬಂಡೇಮಠದ ಬಸವಲಿಂಗಸ್ವಾಮೀಜಿ, ಹಂಚೀಕುಪ್ಪೆ ಗ್ರಾ.ಪಂ. ಅಧ್ಯಕ್ಷ ಜಲಜಾ ಬಸವರಾಜು, ಅರ್ಚಕ ರಾಣೋಜೀರಾವ್, ವಿಎಸ್‌ಎಸ್‌ಎನ್  ಅಧ್ಯಕ್ಷ ನರಸೇಗೌಡ, ತ್ಯಾಗದೆರೆಪಾಳ್ಯದ ರಂಗಸ್ವಾಮಿ, ಕೆ.ಎಚ್. ಕೃಷ್ಣಮೂರ್ತಿ, ವಿ.ಜಿ.ದೊಡ್ಡಿ ಸುಶೀಲಬಾಯಿ, ನರಸಿಂಗ್, ಪವಿತ್ರ, ಧನಜಾಬಾಯಿ ಸೇರಿದಂತೆ ಅನೇಕ ಭಕ್ತರು ಹಾಗು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.