ಮಾಜಿ ಶಾಸಕ, ಹೋರಾಟಗಾರ ಪ್ರಭಾಕರರೆಡ್ಡಿ ನಿಧನಕ್ಕೆ ಸಂತಾಪ
ದೊಡ್ಡಬಳ್ಳಾಪುರ: ಕನ್ನಡ ಚಳವಳಿ ನಾಯಕ, ಮಾಜಿ ಶಾಸಕ ಕೆ.ಪ್ರಭಾಕರರೆಡ್ಡಿ ನಿಧನಕ್ಕೆ ಪಟ್ಟಣದ ನೇಕ ಕನ್ನಡಪರ ಸಂಘಟನೆಗಳು ಸಂತಾಪ ಸೂಚಿಸಿವೆ. ಪ್ರಭಾಕರರೆಡ್ಡಿ ಅವರದು ಅಪ್ಪಟ ಕನ್ನಡ ಪ್ರೇಮ. ಬೆಂಗಳೂರಿನಂತಹ ನಗರದಲ್ಲಿ ತಮ್ಮದೇ ಆದ ಘನತೆಯನ್ನು ಹೊಂದಿ ಕನ್ನಡತನ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ದೊಡ್ಡಬಳ್ಳಾಪುರದ ಹಲವು ಕನ್ನಡಪರ ಚಳವಳಿಗಳಲ್ಲೂ ಸಕ್ರಿಯ ಪಾತ್ರ ನಿರ್ವಹಿಸಿದ್ದರು. ಅನೇಕ ಬಾರಿ ದೊಡ್ಡಬಳ್ಳಾಪುರದಲ್ಲಿ ಹೋರಾಟಗಳ ಮೂಲಕ ಯುವ ಚಳವಳಿಗಾರರಿಗೆ ಮಾರ್ಗದರ್ಶನ ನೀಡಿದವರು ಎಂದು ಹಲವು ಗಣ್ಯರು ಸ್ಮರಿಸಿದ್ದಾರೆ. ಕನ್ನಡ ಜಾಗೃತ ಪರಿಷತ್ನ ಡಿ.ವಿ.ಅಶ್ವತ್ಥಪ್ಪ, ಕಾರ್ಯದರ್ಶಿ ತ.ನ.ಪ್ರಭುದೇವ್ ಸೇರಿದಂತೆ ಭುವನೇಶ್ವರಿ ಕನ್ನಡ ಸಂಘ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ, ಶಿವರಾಜ್ಕುಮಾರ್ ಕನ್ನಡ ಸೇನಾ ಸಮಿತಿ, ರಾಶಿರಾಪು ಅಭಿಮಾನಿಗಳ ಬಳಗ, ಕಸಾಪ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಸಂತಾಪ ಸೂಚಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

