16 ಉಮೇದುವಾರರ ನಾಮಪತ್ರ ಕ್ರಮಬದ್ಧ
ಕ.ಪ್ರ.ವಾರ್ತೆ ರಾಮನಗರ ಮಾ.27
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎಲ್ಲ 16 ಉಮೇದುವಾರರು ಸಲ್ಲಿಸಿದ್ದ 29 ನಾಮಪತ್ರಗಳು ಕ್ರಮಬದ್ಧವಾಗಿವೆ.
ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರು ತಮ್ಮ ಕಚೇರಿಯಲ್ಲಿ ಗುರುವಾರ ಕ್ಷೇತ್ರದ ಚುನಾವಣಾ ವೀಕ್ಷಕ ಪ್ರಕಾಶ್, ಅಭ್ಯರ್ಥಿಗಳು ಸಮಕ್ಷಮ ಪರಿಶೀಲನೆ ಬಳಿಕ ಎಲ್ಲ ನಾಮಪತ್ರಗನ್ನು ಅಂಗೀಕರಿಸಿದ್ದಾರೆ. ನಾಮಪತ್ರ ಹಿಂತೆಗೆತಕ್ಕೆ ಶನಿವಾರ ಕಡೆಯ ದಿನವಾಗಿದ್ದು, ಅಂದು ಮಧ್ಯಾಹ್ನ 3ರ ನಂತರ ಕ್ರಮ ಸಂಖ್ಯೆ ಹಾಗೂ ಚಿನ್ಹೆಗಳನ್ನು ಗೊತ್ತುಪಡಿಸಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
ಒಂದೇ ಮತ ಯಂತ್ರ: ಅಭ್ಯರ್ಥಿಗಳ ಸಂಖ್ಯೆಯು 16ಕ್ಕಿಂತ ಒಂದು ಹೆಚ್ಚಾದರೂ ಪ್ರತಿ ಮತಗಟ್ಟೆಯಲ್ಲೂ ಹೆಚ್ಚುವರಿ ಮತಯಂತ್ರ ಅಳವಡಿಸಬೇಕಾಗುತ್ತದೆ. ಆದರೆ, ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸಂಖ್ಯೆ 16 ಆಗಿರುವ ಹಿನ್ನೆಲೆಯಲ್ಲಿ ಇಲ್ಲಿ 2ನೇ ಮತಯಂತ್ರ ಅಳವಡಿಕೆ ತಪ್ಪಿದಂತಾಗಿದೆ. ಪಕ್ಷೇತರ ಡಮ್ಮಿ ಅಭ್ಯರ್ಥಿಗಳ ಪೈಕಿ ಬಹುತೇಕರು ಪುನರಾವರ್ತಿತರೇ ಆಗಿದ್ದಾರೆ. ಚುನಾವಣೆ ಸ್ಪರ್ಧೆಯ ಗೀಳು ಹಚ್ಚಿಕೊಂಡ ಅವರು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಕ್ಷೀಣಿಸಿದೆ. ಹಾಗೊಮ್ಮೆ ಒಬ್ಬಿಬ್ಬರು ನಾಮಪತ್ರ ಹಿಂತೆಗೆದುಕೊಂಡರೆ ಹೆಚ್ಚು. 2009ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 15 ಮತ್ತು 2013ರ ಉಪಚುನಾವಣೆಯಲ್ಲಿ 13 ಮಂದಿ ಹುರಿಯಾಳುಗಳು ಕಣದಲ್ಲಿ ಉಳಿದಿದ್ದರು.
ಕಣದಲ್ಲಿರುವ ಸ್ಪರ್ಧಾಗಳು
ಡಿ.ಕೆ.ಸುರೇಶ್ ಕಾಂಗ್ರೆಸ್
ಆರ್.ಪ್ರಭಾಕರರೆಡ್ಡಿ ಜೆಡಿಎಸ್
ಪಿ.ಮುನಿರಾಜುಗೌಡ ಬಿಜೆಪಿ
ರವಿ ಕೃಷ್ಣಾರೆಡ್ಡಿ ಎಎಪಿ
ತೋಪಯ್ಯ ಬಿ.ಎಸ್.ಪಿ.
ಶಂಕರಪ್ಪ ಜೈ ವಿಜಯ್ಭಾರತಿ ಪಾರ್ಟಿ
ಬಸವೇಗೌಡ ಆರ್.ಪಿ.ಐ.
ಎಂ.ಪಿ.ಮುನಾವರ್ ಷರೀಫ್ ಹಿಂದೂಸ್ಥಾನ ಜನತಾ ಪಾರ್ಟಿ
ಮೋಹನ್ ಕಾಮರಾಜರ್ ದೇಶೀಯ ಕಾಂಗ್ರೆಸ್
ಸಿದ್ದರಾಮ ಹೆಗ್ಗಡೆ ಪಕ್ಷೇತರ
ಸುರೇಶ್ ಪಕ್ಷೇತರ
ಜೆ.ನಟರಾಜು ಪಕ್ಷೇತರ
ಜೆ.ಟಿ.ಪ್ರಕಾಶ್ ಪಕ್ಷೇತರ
ಮಲ್ಲೇಶ್ ಪಕ್ಷೇತರ
ಟಿ.ಎಂ.ಮಂಚೇಗೌಡ ಪಕ್ಷೇತರ
ಕೆಂಚಯ್ಯ ಪಕ್ಷೇತರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

