ಬೆಂಗಳೂರು ಗ್ರಾಮಾಂತರ

ಕಾಡಾನೆಗಳ ದಾಳಿ; ಬೆಳೆ ನಷ್ಟ

Published On :

ಕನಕಪುರ: ಕನಕಪುರ ತಾಲೂಕು ಸಾತನೂರು ಅರಣ್ಯ ವಲಯದ ಕೆಂಚೇಗೌಡನದೊಡ್ಡಿ, ಹೊಸಕಬ್ಬಾಳು ಮೊದಲಾದ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ನಡೆಸಿದ ದಾಳಿಯಿಂದ ಲಕ್ಷಾಂತರ ರು.ಮೌಲ್ಯದ ಬೆಳೆಗಳು ನಷ್ಟವಾಗಿವೆ. ಕಾಡಾನೆಗಳು ಗ್ರಾಮಗಳಲ್ಲಿನ ತೋಟಗಳು, ಗದ್ದೆ ಹಾಗೂ ಹೊಲಗಳಿಗೆ ದಾಳಿಯಿಟ್ಟು ಹಲಸು, ಮಾವು, ಸಪೋಟ, ಟಮೋಟೋ ಬೆಳೆಗಳನ್ನು ಹಾಳುಗೆಡವಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿ ರಾಜಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರಿಂದ ಪರಿಹಾರ ಕೋರಿಬಂದ ಅರ್ಜಿಗಳನ್ನು ಸ್ವೀಕರಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು. ಸಾತನೂರು ವಲಯದಲ್ಲಿ ಬೀಡುಬಿಟ್ಟಿರುವ ಐದು ಕಾಡಾನೆಗಳನ್ನು ಮುತ್ತತ್ತಿ ಅರಣ್ಯಕ್ಕೆ ಒಡಿಸಲು ಕ್ರಮ ಕೈಗೊಂಡಿರುವುದಾಗಿ ರಾಜಶೇಖರ್ ತಿಳಿಸಿದ್ದಾರೆ.


ಚಾಮುಂಡಿ ಹಬ್ಬ ಆಚರಿಸದಂತೆ ಆದೇಶ


ಶ್ರೀರಂಗಪಟ್ಟಣ: ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಕೋಮುಗಲಭೆ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದಂದು ನಡೆಯುತ್ತಿದ್ದ ಚಾಮುಂಡೇಶ್ವರಿ ಹಬ್ಬವನ್ನು ಆಚರಿಸದಂತೆ ಮಾ.30 ರಿಂದ ಏಪ್ರಿಲ್ 1ರ ತನಕ ಮೂರು ದಿನಗಳ ಕಾಲ 144 ಕಾಯಿದೆಯ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ಮಲ್ಲಿಕಾರ್ಜುನ ಆದೇಶ ಹೊರಡಿಸಿದ್ದಾರೆ. 2004ರಲ್ಲಿ ಯುಗಾದಿ ಹಬ್ಬದ ದಿನ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ವಿಚಾರದಲ್ಲಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣಿಯರಿಗೂ ಗಲಭೆ ನಡೆದು ಎರಡು ಕಡೆ ಜನಾಂಗದವರು ಬಡಿದಾಡಿಕೊಂಡು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನಿಂದ ಗಲಾಟೆ ತಡೆಗಟ್ಟಲು ಪೊಲೀಸರು ಹಬ್ಬವನ್ನು ಗ್ರಾಮದಲ್ಲಿ ಆಚರಿಸದಂತೆ ಶಾಂತಿ ವ್ಯವಸ್ಥೆ ಕಾಪಾಡಲು ನಿಷೇಧಾಜ್ಞೆ ಜಾರಿಗೊಳಿಸಿದ್ದರು.
ಮತ್ತೆ 2008 ರಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಎರಡು ಕೋಮಿನ ಜನರು ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವಂತೆ ತಿಳಿಸಿ ಮತ್ತೆ ಹಬ್ಬವನ್ನು ಚಾಲನೆಗೊಳಿಸಿದರಾದರೂ, ಮತ್ತೆ ಗ್ರಾಮಸ್ಥರು ಹಳೆಯದನ್ನೇ ಕ್ಯಾತೆ ತೆಗೆದು ಎರಡೂ ಕೋಮಿನವರಿಗೂ ಗಲಾಟೆ ನಡೆದಿದ್ದರಿಂದ ಪೊಲೀಸರ ವರದಿಯ ಮೇರೆಗೆ ಗ್ರಾಮದಲ್ಲಿ ಅಂದಿನಿಂದ ಹಬ್ಬ ಆಚರಿಸಿದಂತೆ ತಹಶೀಲ್ದಾರ್, ಪರಿಸ್ಥಿತಿ ಪರಿಗಣಿಸಿ ಈ ಹಬ್ಬ ಆಚರಿಸಿದಂತೆ ನಿಷೇಧಾಜ್ಞೆ ಹೊರಡಿಸಿದ್ದರು. ಪ್ರತಿ ವರ್ಷದಂತೆ ಈ ಬಾರಿಯೂ ಈ ಹಬ್ಬದಲ್ಲಿ ಕೋಮುಗಲಬೆ ಉಂಟಾಗಬಾರದು. ಮುನ್ನೆಚ್ಚರಿಕೆ ಕ್ರಮವಾಗಿ   144 ಕಾಯ್ದೆಯನ್ನು ಜಾರಿಗೊಳಿಸಿ ತಹಶೀಲ್ದಾರ್ ನಿಷೇಧಾಜ್ಞೆ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.