ಬೆಂಗಳೂರು ಗ್ರಾಮಾಂತರ

13 ಪರೀಕ್ಷಾ ಕೇಂದ್ರದಲ್ಲಿ ಶಾಂತಿಯುತ ಪರೀಕ್ಷೆ

Published On :

ಮಾಗಡಿ: ತಾಲೂಕಿನಾದ್ಯಂತ 13 ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸೇರಿ ಸುಮಾರು 2,848 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಆರ್.ರಂಗಸ್ವಾಮಿ ತಿಳಿಸಿದರು.
ಮಾಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು, ರಂಗನಾಥಸ್ವಾಮಿ ಪ್ರೌಢಶಾಲೆ, ಕಲ್ಯಾಗೇಟ್ ವಾಸವಿ ವಿದ್ಯಾನಿಕೇತನ್, ವೀರೇಗೌಡನದೊಡ್ಡಿ ಮಹಾಲಿಂಗೇಶ್ವರ ಪ್ರೌಢಶಾಲೆ, ಮೋಟಗಾನಹಳ್ಳಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಗುಡೇಮಾರನಹಳ್ಳಿ ಸಿದ್ದಗಂಗಾ ಪ್ರೌಢಶಾಲೆ, ಕೆ.ಜಿ.ಮಠದ ಸಿದ್ದಗಂಗಾ ಪ್ರೌಢಶಾಲೆ, ಹುಲೀಕಟ್ಟೆ ಗ್ರಾಮಾಂತರ ವಸತಿ ಶಾಲೆ, ಬಗಿನಗೆರೆ, ತಿಪ್ಪಸಂದ್ರ, ಸೋಲೂರು,ಕುದೂರು, ಸುಗ್ಗನಹಳ್ಳಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳು ಕನ್ನಡ ವಿಷಯದ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ವೇಳೆ ಯಾವುದೇ ಅಹಿತಕರ ಘಟನೆ, ನಕಲು ನಡೆದಿರುವುದು ವರದಿಯಾಗಿಲ್ಲ, ಶಾಂತಿಯುತವಾಗಿ ಮಕ್ಕಳು ಪರೀಕ್ಷೆ ಎದುರಿಸಿದರು ಎಂದರು.
ಭೇಟಿ: ಕನ್ನಡ ವಿಷಯ ಪರೀಕ್ಷೆ ಬರೆಯುತ್ತಿದ್ದ 4 ಪರೀಕ್ಷಾ ಕೇಂದ್ರಕ್ಕೆ ಜಾಗೃತದಳದ ಅಧಿಕಾರಿಯೂ ಆಗಿರುವ ಬೆಂಗಳೂರು ವಿಭಾಗ ಜಂಟೀ ನಿರ್ದೇಶಕ ನರಸಿಂಹಯ್ಯ ಅವರು ಭೇಟಿ ನೀಡಿ ಪರಿಶೀಲಿಸಿದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.