ಬೆಂಗಳೂರು ಗ್ರಾಮಾಂತರ

ನೀರುಗಂಟಿ ಮೇಲೆ ಹಲ್ಲೆ: ಪ್ರತಿಭಟನೆ

Published On :

ಸೂಲಿಬೆಲೆ: ಸರಿಯಾಗಿ ನೀರು ಪೂರೈಕೆ ಮಾಡಲಿಲ್ಲವೆಂದು ಆರೋಪಿಸಿ ಹಲ್ಲೆ ನಡೆಸಿರುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶನಿವಾರ ಸೂಲಿಬೆಲೆ ಗ್ರಾಪಂದಲ್ಲಿ ಪ್ರತಿಭಟನೆ ನಡೆಸಿದರು.
ಪದೇ ಪದೇ ಇಂಥ ಘಟನೆಗಳನ್ನು ನಡೆಸುವ ವ್ಯಕ್ತಿಗಳಿಗೆ ಬಿಸಿ ಮುಟ್ಟಿಸಬೇಕು ಎನ್ನುವ ಒತ್ತಾಯದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ ಕುಟುಂಬಕ್ಕೆ ಒಂದು ತಿಂಗಳು ಕಾಲ ನೀರು ಪೂರೈಕೆ ಮಾಡದಂತೆ ಸರ್ವಾನುಮತ ನಿರ್ಣಯದ ಮೂಲಕ ಗ್ರಾಪಂ ಹಲ್ಲೆಕೋರರಿಗೆ ಬಿಸಿ ಮುಟ್ಟಿಸಿದೆ.
ಸೂಲಿಬೆಲೆ ವಾರ್ಡ್‌ವೊಂದರಲ್ಲಿ ನೀರು ಪೂರೈಕೆ ಮಾಡಲಿಲ್ಲವೆಂದು ವಾಟರ್‌ಮ್ಯಾನ್ (ನೀರುಗಂಟಿ) ಮುನಿನರಸಿಂಹಯ್ಯನ ಮೇಲೆ ಮುಜಾಯಿದ್ ಪಾಷ ಎಂಬಾತ ಹಲ್ಲೆ ನಡೆಸಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ  ಪ್ರಕರಣವನ್ನು ರಾಜಿ ಮಾಡಿಸುವಲ್ಲಿ ಸಫಲರಾಗಿದ್ದರು. ಶನಿವಾರ ನಮಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿ ವಾಟರ್ ಮ್ಯಾನ್‌ಗಳು ಕೆಲಸ ಮಾಡದೆ ನೀರು ಸ್ಥಗಿತ ಮಾಡಿ ಪ್ರತಿಭಟನೆಗೆ ಇಳಿದರು.ಇದಕ್ಕೆ ಕೈಜೋಡಿಸಿದ ದಲಿತ ಮುಖಂಡರು, ವಾಟರ್ ಮ್ಯಾನ್ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಲ್ಲೆಕೋರರ ಮೇಲೆ ಕ್ರಮಕ್ಕೆ
ಒತ್ತಾಯಿಸಿದರು. ಗ್ರಾಪಂ ನೌಕರನ ಮೇಲೆ ಹಲ್ಲೆ ನಡೆಸಿದ್ದು ಅಕ್ಷಮ್ಯ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪಿಡಿಒ ಸುಂದರ್ ಸಮಜಾಯಿಷಿ ನೀಡಿದರು.
ಪ್ರತಿಭಟನೆಕಾರರ ಪ್ರಶ್ನೆಗಳು ಹೆಚ್ಚಾಗುತ್ತಿದಂತೆ ಹಲ್ಲೆ ನಡೆಸಿದ ವ್ಯಕ್ತಿಗಳ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಪಿಎಸ್‌ಐ ಅವರನ್ನೇ ಇಲ್ಲಿಗೆ ಕರೆಯಿಸಿ ಅವರ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳಲು ಪಿಎಸ್‌ಐ ನವೀನ್ ಅವರನ್ನು ಕರೆಯಿಸಲಾಯಿತು. ಮಾತು, ಚರ್ಚೆ,ವಾಗ್ವಾದ ನಂತರ ಇನ್ನು ಮುಂದೆ ಇಂಥಪ್ರಕರಣಗಳು ಮರಕಳಿಸಿದರೆ  ಕಠಿಣ ಕ್ರಮದ ಭರವಸೆಯನ್ನು ಪಿಎಸ್‌ಐ ನೀಡಿದರು. ಇದಕ್ಕೆ ತೃಪ್ತರಾಗದ ಪ್ರತಿಭಟನಾಕಾರರು ಪಂಚಾಯಿತಿ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಕಾರಣ ಹಲ್ಲೆ ನಡೆಸಿದ ಕುಟುಂಬಕ್ಕೆ ಒಂದು ತಿಂಗಳು ಕಾಲ ನೀರು ಪೂರೈಕೆ ಬಂದ್ ಮಾಡಿ, ಮಾಸಿಕ ಸಭೆಯಲ್ಲಿ ಹಲ್ಲೆ ಕಾರಣ ಹೇಳಿ ನಂತರ ನೀರು ಸರಬರಾಜು ಬಗ್ಗೆ ಚಿಂತಿಸೋಣ ಎಂಬ ನಿರ್ಣಯದ ನಂತರ ಪ್ರತಿಭಟನೆ ಕೈಬಿಡಲಾಯಿತು. ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಮುನಿತಾಯಮ್ಮ ಮುನಿರಾಜ್, ಸದಸ್ಯರಾದ ಶಿವಣ್ಣ, ರಮೇಶ್, ರಾಮಯ್ಯ, ಮೌಲ, ಶಫಿ, ವಾಟರ್ ಮ್ಯಾನ್ ಸಂಘದ ಅಧ್ಯಕ್ಷ ನರಸಿಂಹಪ್ಪ, ಡಿವೈಎಫ್‌ಐ ಮುಖಂಡ ಮೋಹನ್ ಬಾಬು ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.