ಸಾರಿಗೆ ನಿಯಮ ಪಾಲಿಸಿ: ದಯಾನಂದ್
ಆನೇಕಲ್ಲು: 18 ರಿಂದ 30 ವಯೋವಾನದ ಯುವ ಪೀಳಿಗೆ ವೇಗದ ಅಮಲಿಗೆ ಬಿದ್ದು ಅಪಘಾತಗಳಿಗೆ ಕಾರಣರಾಗುತ್ತಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ವೇಗಕ್ಕೆ ಕಡಿವಾಣ ಹಾಕಿ ಚೆನ್ನಾಗಿ ಬದುಕುವ ಮಾರ್ಗ ಕಂಡುಕೊಳ್ಳಿ ಎಂದು ಬೆಂಗಳೂರು ನಗರ ಟ್ರಾಫಿಕ್ ಅಡಿಷನಲ್ ಕಮಿಷನರ್ ದಯಾನಂದ್ ತಿಳಿಸಿದ್ದಾರೆ.
ಅವರು ಆನೇಕಲ್ಲಿನ ಶಿರಡಿ ಸಾಯಿ ತಾಂತ್ರಿಕ ಕಾಲೇಜಿನ 17ನೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆಯಿಂದ ಬಹುತೇಕ ಅಪಘಾತಗಳು ನಡೆದು ಜೀವ ಹಾನಿ ಅಥವಾ ಅಂಗ ವೈಕಲ್ಯತೆ ಉಂಟಾಗಿದೆ. ವಿದ್ಯಾವಂತ ಸಮುದಾಯ ವಾಹನ ಚಾಲನಾ ಪರವಾನಗಿಯನ್ನು ಕಡ್ಡಾಯ ಹೊಂದಿ ನಿಗದಿತ ವೇಗದಲ್ಲಿ ಜಾಗರೂಕರಾಗಿ ವಾಹನ ಚಲಿಸಬೇಕೆಂದು ಕೋರಿದರು.
ಪೋಷಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ದ್ವಿಚಕ್ರ ವಾಹನ ಯಾ ಕಾರುಗಳ ಚಾಲನೆಗೆ ಪ್ರೋತ್ಸಾಹ ನೀಡುವುದು ಬಿಟ್ಟು ಕಾನೂನನ್ನು ಗೌರವಿಸಿ ಎಂದರು. ಕುಡಿದು ವಾಹನ ಚಲಾಯಿಸಿದವರ ಬಹುತೇಕ ವಾಹನ ಚಾಲನಾ ಪತ್ರವನ್ನು ಅಮಾನತು ಪಡಿಸಲಾಗಿದೆ. ಯುವ ಜನತೆ ವಾಹನ ಚಾಲನೆ, ಸುರಕ್ಷತೆ ಮತ್ತು ಜವಾಬ್ದಾರಿಗಳ ಬಗ್ಗೆ ಹೆಚ್ಚು ಗಮನ ನೀಡಬೇಕೆಂದರು.
ವಿಪ್ರೋ ಟೆಕ್ನಾಲಜೀಸ್ನ ವಿ. ವಿಶ್ವನಾಥನ್ ಮಾತನಾಡಿ ವಿದ್ಯಾರ್ಥಿಗಳು ಅಧ್ಯಯನ ಹಾಗೂ ಸಂಶೋದನಾ ಮನೋಭಾವವನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು. ಉದ್ಯೋಗಸ್ತನಾಗುವ ಬದಲು ಉದ್ಯೋಗದಾತನಾದರೆ ಹೆಚ್ಚು ಅನುಕೂಲ ಎಂದ ಅವರು ಉದ್ಯಮಿಯಾಗಿ ವಿಶ್ವ ಮಟ್ಟದ ಸ್ಫರ್ಧೆಯಲ್ಲಿ ಸೆಣಸುವ ಛಲ ಹೊಂದಬೇಕು. ಪಠ್ಯ ವಿಷಯದ ಜೊತೆಗೆ ವಿಶ್ವದ ಆಗು ಹೋಗುಗಳ ಬಗ್ಗೆ ತಿಳಿಯುವ ಆಸಕ್ತಿ ಕುತೂಹಲ ಹೊಸ ಪೀಳಿಗೆಯಲ್ಲಿ ನಿರಂತರ ಇರಬೇಕೆಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ. ವಿಜಯಕುಮಾರ್, ಉಪ ಪ್ರಾಂಶುಪಾಲ ಡಾ. ಷಡಕ್ಷರಿ, ಮ್ಯಾನೇಜ್ಮೆಂಟ್ನ ಅರುಣ್, ಪಟೇಲ್ ಇದ್ದರು. ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ಮಾಹಿತಿ ಪುಸ್ತಕ ಬಿಡುಗಡೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

