ಬೆಂಗಳೂರು ಗ್ರಾಮಾಂತರ

'ಖಾಸಗಿ ಶಾಲೆ ಮೌಲ್ಯಾಧಾರಿತ ಶಿಕ್ಷಣ ನೀಡಲಿ'

Published On :

ಮಾಗಡಿ: ಖಾಸಗಿ ವಿದ್ಯಾ ಸಂಸ್ಥೆಗಳು ಕೇವಲ ವ್ಯಾಪಾರೀಕರಣವಾಗಬಾರದು, ಮೌಲ್ಯಾಧಾರಿತ ಶಿಕ್ಷಣ ನೀಡುವ ಸಂಸ್ಥೆಯಾಗಬೇಕು. ಈ ನಿಟ್ಟಿನಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೊರ ಹೊಮ್ಮಲಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹಾರೈಸಿದರು.
ತಾಲೂಕಿನ ಹುಲೀಕಟ್ಟೆಯಲ್ಲಿ ನೂತನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳನ್ನು ತೆರೆದರೆ ಸಾಲದು, ಗ್ರಾಮೀಣ ಜನತೆ ಸಾಲ ಮಾಡಿ ಜೀವನ ನಡೆಸುತ್ತಿದ್ದಾರೆ. ಕೂಲಿ ಮಾಡಿಯಾದರೂ ತಮ್ಮ ಮಕ್ಕಳಿಗೆ ಕಾನ್ವೆಂಟ್ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಬೇಕು ಎಂಬ ಚಿಂತನೆಯೂ ಪೋಷಕರಲ್ಲಿದೆ.
 ಇಂತಹ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಮಹತ್ವಕಾಂಕ್ಷೆಯಿಂದ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಉತ್ತಮ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಮನೋಭಾವ ಸಂಸ್ಥೆಗಳು ಬೆಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜ್ಞಾನ ಸದ್ವಿನಿಯೋಗವಾಗಲಿ: ಸಾಹಿತಿ ರಾಮಲಿಂಗೇಶ್ವರ (ಸಿಸಿರಾ) ಮಾತನಾಡಿ, ಶಿಕ್ಷಣ ಕ್ಷೇತ್ರಗಳು ಹಣಕಾಸು ಸಂಸ್ಥೆಗಳಾಗಿ ಮಾರ್ಪಟಾಗಿವೆ. ಗರ್ಭದಲ್ಲಿರುವ ಶಿಶುವಿಗೂ ಹುಟ್ಟುವ ಮೊದಲೇ ಪ್ರತಿಷ್ಠಿತ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಸೀಟು ಮೀಸಲಿಡುತ್ತಿರುವುದನ್ನು ಕೇಳಿದ್ದೇವೆ.
  ಇಂತಹ ಪರಿಸ್ಥಿತಿಯಲ್ಲಿ ಬಡ ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ನೀಡುವುದು ಗ್ರಾಮೀಣ ಖಾಸಗಿ ವಿದ್ಯಾಸಂಸ್ಥೆಗಳೇ ಹೊರತು ಪ್ರತಿಷ್ಠಿತ ಸಂಸ್ಥೆಗಳಲ್ಲ. ಆದರೆ ಜಾತಿ,ಧರ್ಮ ಮೀರಿದ ಶಿಕ್ಷಣ ನೀಡಬೇಕು. ಗ್ರಾಮೀಣ ಮಕ್ಕಳಿಗೆ ಜ್ಞಾನ ಸದ್ವಿನಿಯೋಗವಾಗಲಿ ಎಂದು ತಿಳಿಸಿದರು.
ಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂ.ದಯಾನಂದ್, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎನ್. ಅಶೋಕ್, ಶಾಲೆ ಕಾರ್ಯದರ್ಶಿ ಮಿಮಾ ಅಶೋಕ್, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿದರು.
ಎಚ್.ಜಿ.ನಾರಾಯಣಸ್ವಾಮಿ, ಶಾರದಮ್ಮ ಶಾಲಾ ಸಮಾರಂಭ ಉದ್ಘಾಟಿಸಿದರು.
 ತಾಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ಪ್ರಾಂಶುಪಾಲರಾದ ಎಂ.ಸಿ. ಗೋವಿಂದರಾಜು, ಗಂಗರಾಜು, ಜುಟ್ಟನಹಳ್ಳಿ ನಾಗರಾಜು, ತಾಪಂ ಸದಸ್ಯರಾದ ಎಸ್.ಕಾಂತರಾಜು, ಜಿ.ಕೃಷ್ಣ, ಉಪನ್ಯಾಸಕ ಜಗದೀಶ್,  ರಾಧಾ ಬಾಲಕೃಷ್ಣ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.