ಹಂಗಾಮಿ ಕುಲಪತಿ ಹುದ್ದೆಗೆ ಹಗ್ಗಜಗ್ಗಾಟ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿರುವಾಗಲೇ ಹಂಗಾಮಿ ಹುದ್ದೆಗೆ ಹಗ್ಗ- ಜಗ್ಗಾಟ ಉಂಟಾಗಿದೆ.
ಹಾಲಿ ಹಂಗಾಮಿ ಕುಲಪತಿಯಾಗಿರುವ ಡಾ.ಎನ್. ರಂಗಸ್ವಾಮಿ ಅವರ ಡೀನ್‌ಷಿಪ್ ಮುಗಿದಿದ್ದು, ಆವರ ನಂತರ ಹಿರಿಯರಾದ ಡಾ.ಜಿ. ಮೋಹನ್ ಕುಮಾರ್ ಅವರ ಡೀನ್‌ಷಿಪ್ ಸಹ ಅಂತ್ಯಗೊಂಡಿದೆ. ಇದೀಗ ಫೆ.1ರಿಂದ ಹಿರಿಯ ಡೀನ್ ಆಗಿರುವ ಡಾ.ಎಂ. ರಾಮಚಂದ್ರಗೌಡ ಅವರು ಕಾನೂನಿನಂತೆ ಹಂಗಾಮಿ ಹುದ್ದೆ ನೀಡಬೇಕೆಂದು ವಿವಿಗೆ ಮನವಿ ಸಲ್ಲಿಸಿದ್ದಾರೆ.
ಅಲ್ಲದೆ, ಸದ್ಯದಲ್ಲೇ ರಾಮಚಂದ್ರಗೌಡ ಅವರು ಕಾನೂನಿನ ಪ್ರಕಾರ ಹಿರಿಯ ಡೀನ್‌ಗೆ ಹಂಗಾಮಿ ಕುಲಪತಿ ಹುದ್ದೆ ನೀಡಬೇಕೆಂದು ಕೋರಲು ರಾಜ್ಯಪಾಲರನ್ನು ಭೇಟಿ ಮಾಡಲೂ ನಿರ್ಧರಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ 2000 ಪರಿಚ್ಛೇದ 16(2)ರ ಪ್ರಕಾರ ವಿವಿ ಕುಲಪತಿ ಹುದ್ದೆ ಖಾಲಿ ಇದ್ದ ಸಂದರ್ಭದಲ್ಲಿ ವಿವಿಯಲ್ಲಿರುವ ಹಿರಿಯ ಡೀನ್ ಅವರನ್ನು ಹಂಗಾಮಿ ಕುಲಪತಿಯಾಗಿ ನೇಮಿಸಬೇಕಾಗಿರುತ್ತದೆ. ಇದೇ ರೀತಿ ಬೆಂಗಳೂರು ವಿವಿ ಕುಲಪತಿಯಾಗಿದ್ದ ಡಾ.ಎನ್. ಪ್ರಭುದೇವ್ ಅವರು ರಾಜಿನಾಮೆ ನೀಡಿದ ಬಳಿಕ ಅಕ್ಟೋಬರ್ 16ರಂದು ರಂಗಸ್ವಾಮಿ ಅವರು ಹಂಗಾಮಿ ಕುಲಪತಿಯಾಗಿ ನೇಮಕಗೊಂಡರು.
ಆದರೆ, ರಂಗಸ್ವಾಮಿ ಅವರ ಡೀನ್‌ಷಿಪ್ 2012 ಡಿ. 21ರಂದೇ ಕೊನೆಗೊಳ್ಳುತ್ತದೆ. ಕಾನೂನಿನ ಪ್ರಕಾರ ಇವರು ಹಂಗಾಮಿ ಕುಲಪತಿ ಹುದ್ದೆ ತೊರೆಯಬೇಕಾಗಿತ್ತು. ಈ ಸಮಯದಲ್ಲಿ ರಾಜ್ಯಪಾಲರು ಅದೇಶ ಹೊರಡಿಸುವ ಮೂಲಕ ರಂಗಸ್ವಾಮಿ ಅವರು ಮುಂದಿನ ಆದೇಶದವರೆಗೂ ಹಂಗಾಮಿ ಕುಲಪತಿ ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ಹೇಳಿದ್ದರು. ಹೀಗಾಗಿ ಇಂದಿಗೂ ರಂಗಸ್ವಾಮಿ ಅವರೇ ಹಂಗಾಮಿ ಕುಲಪತಿಯಾಗಿದ್ದಾರೆ.
ಮೌನವಾದ ಮೋಹನ್: ಪ್ರೊ.ಎನ್. ರಂಗಸ್ವಾಮಿ ಅವರ ಡೀನ್‌ಷಿಪ್ ಮುಗಿದ ನಂತರವೂ ಹಂಗಾಮಿ ಕುಲಪತಿ ಹುದ್ದೆಯಲ್ಲಿ ಮುಂದುವರಿದಾಗ ಹಿರಿಯ ಡೀನ್ ಪಟ್ಟಿಯಲ್ಲಿದ್ದ ಮನಶಾಸ್ತ್ರದ ಪ್ರೊಫೆಸರ್ ಜಿ. ಮೋಹನ್ ಕುಮಾರ್ ಅವರು ನನಗೆ ಅನ್ಯಾಯವಾಗಿದೆ ಎಂದು ರಾಜ್ಯಪಾಲರ ಬಳಿ ಮನವಿ ಮಾಡಿರಲಿಲ್ಲ.
ಈ ಮಧ್ಯೆ ಮೋಹನ್ ಕುಮಾರ್ ಅವರ ಡೀನ್‌ಷಿಪ್ 2013 ಜ. 31ರಂದೇ ಕೊನೆಗೊಂಡಿದೆ. ಫೆ. 1ರಿಂದ ರಾಮಚಂದ್ರಗೌಡ ಅವರು ವಿವಿ ಹಿರಿಯ ಡೀನ್‌ಷಿಪ್‌ನಲ್ಲಿದ್ದಾರೆ. ಹೀಗಾಗಿ ಬೆಂಗಳೂರು ವಿವಿ ಕುಲಪತಿ ಹುದ್ದೆ
ಅರ್ಹ ಅಭ್ಯರ್ಥಿ ಆಯ್ಕೆಯಾಗುವವರೆಗೂ ಕಾನೂನು ರೀತಿ ತಮ್ಮನ್ನು ಹಂಗಾಮಿ ಕುಲಪತಿಯಾಗಿ ನೇಮಕಮಾಡಬೇಕೆಂದು ಈಗಾಗಲೇ ರಾಮಚಂದ್ರ ಗೌಡ ಅವರು ಹಂಗಾಮಿ ಕುಲಪತಿಗೆ ಪತ್ರ ಬರೆದಿದ್ದಾರೆ.
-ದೇವರಾಜ್ ಎಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

