ಬೆಂಗಳೂರು ನಗರ

15 ಅಪರಾಧಿಗಳಿಗೆ ವಿಧಿಸಿದ್ದ ಗಲ್ಲು ಕೈಬಿಟ್ಟ ಕೋರ್ಟ್

Published On :

ಬೆಂಗಳೂರು: ಬೆಳಗಾವಿಯ ಬೈಲಹೊಂಗಲದಲ್ಲಿ 2005ರಲ್ಲಿ ನಡೆದ ಕೊಲೆ ಪ್ರಕರಣದ ಎಲ್ಲ 15 ಅಪರಾಧಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಕೈಬಿಟ್ಟಿದೆ.
ಕಳೆದ 2008ರಲ್ಲಿ ಬೆಳಗಾವಿಯ ಅಧೀನ ನ್ಯಾಯಾಲಯವು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಶಿಕ್ಷೆಯನ್ನು ಖಾತರಿಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಮಹತ್ವದ ಆದೇಶ ಹೊರಬಿದ್ದಿದೆ. ಮಹಿಳೆ ಸೇರಿದಂತೆ ನಾಲ್ವರ ಕೊಲೆಗೆ ಸಂಬಂಧಿಸಿ ಬೆಳಗಾವಿಯ ಬೈಲಹೊಂಗಲದ ಮುರ್ಕಿಬಾವಿಯ 15 ಅಪರಾಧಿಗಳಿಗೆ ಕೋರ್ಟ್ ಜೀವದಾನ ಮಾಡಿದೆ. ಮರಣ ದಂಡನೆ ಶಿಕ್ಷೆಯನ್ನು 21 ವರ್ಷದ ಜೀವಾವಧಿ ಶಿಕ್ಷೆಗೆ ಇಳಿಸಿ ಆದೇಶಿಸಿದೆ. ಆದರೆ ಇದು ಕೇವಲ 10 ಅಪರಾಧಿಗಳಿಗೆ ಮಾತ್ರ ಸಂಬಂಧಿಸಿದ್ದಾಗಿದೆ. ಇನ್ನುಳಿದ 5 ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
ಕಳೆದ 2005ರಲ್ಲಿನ ಮುರ್ಕಿಬಾವಿಯಲ್ಲಿ ನಡೆದ ಕ್ಷುಲ್ಲಕ ಜಗಳಕ್ಕಾಗಿ ಮಹಿಳೆ ಹಾಗೂ ಮೂವರು ಪುರುಷರನ್ನು ಈ ತಂಡ ಬರ್ಬರವಾಗಿ ಕೊಲೆ ಮಾಡಿತ್ತು. ಪ್ರಕರಣ ಕುರಿತಂತೆ ಕೊಲೆಯಾಗಿದ್ದ ಶರಣವ್ವ ಅವರ ಪತಿ ಸುರೇಶ್ ಒಡೆಯರ್ ದೂರು ನೀಡಿದ್ದರು. ಎಲ್ಲ ಅಪರಾಧಿಗಳು ತಲಾ 40 ಸಾವಿರ ದಂಡ ಭರಿಸಬೇಕು ಹಾಗೂ ಇದನ್ನು ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಹಂಚಬೇಕು ಎಂದು ಕೋರ್ಟ್ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.