ಅತ್ಯಾಚಾರವೆಸಗಿ ಕೊಲೆ?, ಕೆಲಸ ಕೊಡಿಸುವ ನೆಪದಲ್ಲಿ ಬಲಾತ್ಕಾರ
ಭಟ್ಕಳ/ಸಿಂದಗಿ: ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆದ ಪ್ರಕರಣಗಳು ಮಂಗಳವಾರ ಬೆಳಕಿಗೆ ಬಂದಿವೆ.
ಸಿಂದಗಿ ತಾಲೂಕಿನ ಯರಗಲ್ ಬಿ.ಕೆ. ಗ್ರಾಮದಲ್ಲಿ 5 ವರ್ಷದ ಬಾಲಕಿ ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಸಾಧ್ಯತೆಗಳಿವ ಎಂದು ಶಂಕಿಸಲಾಗಿದೆ. ಅದೇ ವೇಳೆ, ಭಟ್ಕಳ ಪಟ್ಟಣದ ಬಾಲಕಿಯೊಬ್ಬಳಿಗೆ ಕೆಲಸ ಕೊಡಿಸುವುದಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಲಾಲ್‌ಬಾಗ್‌ನಲ್ಲಿ ಅತ್ಯಾಚಾರ ಮಾಡಿದ್ದಾರೆ.
ಅತ್ಯಾಚಾರವೆಸಗಿ ಕೊಲೆ?: ನಿಗೂಢವಾಗಿ ಕೊಲೆಯಾಗಿರುವ ಯರಗಲ್ ಗ್ರಾಮದ ಬಾಲಕಿ 1 ತರಗತಿಯಲ್ಲಿ ಓದುತ್ತಿದ್ದಳು. ಜ.28ರಂದು ತಾಯಿ ಕೂಲಿ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಮಗಳು ಮನೆಯಲ್ಲಿ ಇರಲಿಲ್ಲ. ಬಳಿಕ ಶಾಲೆಗೆ ಬಂದು ಶಿಕ್ಷಕರನ್ನು ವಿಚಾರಿಸಿದಾಗ, ಮಗು ಬೆಳಗ್ಗೆ 7.30ಕ್ಕೆ ತರಗತಿಗೆ ಬಂದಿದ್ದು, ಮಧ್ಯಾಹ್ನ ಊಟಕ್ಕೆ ಹೋದವಳು ಮರಳಿ ಶಾಲೆಗೆ ಬಂದಿಲ್ಲವೆಂದು ತಿಳಿಸಿದರು.
ಬಳಿಕ ಪೋಷಕರು ಆಕೆಯನ್ನು ಹುಡುಕಿದಾಗ, ಮನೆಯೊಂದರ ಪಕ್ಕದ ಶೆಡ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಶವದ ಕುತ್ತಿಗೆ, ಕೆನ್ನೆ, ಕೈಗಳು ಮತ್ತು ಮರ್ಮಾಂಗದ ಮೇಲೆ ಗಾಯಗಳಾಗಿದ್ದು ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಕೆಲಸ ನೆಪ ತೊರಿಸಿ ಅತ್ಯಾಚಾರ: ಭಟ್ಕಳದ ಬಾಲಕಿಯೊಬ್ಬಳಿಗೆ ಕೆಲಸ ಕೊಡಿಸುವ ನೆಪದಲ್ಲಿ ಬೆಂಗಳೂರಿನಲ್ಲಿ ರೇಪ್ ಮಾಡಲಾಗಿದೆ. ಈ ವಿಷಯವನ್ನು ಅತ್ಯಾಚಾರಕ್ಕೊಳಗಾದ ಬಾಲಕಿ ಭಟ್ಕಳ ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಭಟ್ಕಳ ನಗರದ ಉಮರ್ ಸ್ಟ್ರೀಟ್‌ನ ಶಿರಾಲಿ ಗುಡಿಹಿತ್ಲು ನಿವಾಸಿ ಕಾಸೀಫ್ ಬೆಂಗಳೂರಿನಲ್ಲಿ ಕೆಲಸ ಕೊಡುವ ಭರವಸೆ ನೀಡಿ, 1 ಸಾವಿರ ಕೊಟ್ಟು ಬೆಂಗಳೂರು ಬಸ್ ಹತ್ತಿಸಿದ್ದಾನೆ. ಬೆಂಗಳೂರಿನಲ್ಲಿ ರಿಯಾಜ್ ಎಂಬಾತನನ್ನು ಭೇಟಿಯಾಗಿ, ಕೆಲಸಕ್ಕೆ ಸೇರುವಂತೆ ನಂಬಿಸಿದ್ದ. ಅಲ್ಲಿ ರಿಯಾಜ್ ತನ್ನನ್ನು ಲಾಲ್‌ಬಾಗ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಅತ್ಯಾಚಾರಕ್ಕೆ ಒಳಗಾದ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

