ಆರ್ಟ್ ಆಫ್ ಇನ್‌ವೆಸ್ಟಿಂಗ್; ಆಶ್ರಮದ ವಿದೇಶಿ ಭಕ್ತರಿಗಾಗಿ ವಾಣಿಜ್ಯ ಸಮಾವೇಶ
ಬೆಂಗಳೂರು: ಆಧ್ಯಾತ್ಮದಿಂದ ಹೂಡಿಕೆ ಕಡೆಗೆ ...!
ಇದು ಎಫ್‌ಕೆಸಿಸಿಐ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಗಳು ಜಂಟಿಯಾಗಿ ನಡೆಸುತ್ತಿರುವ ವಾಣಿಜ್ಯ ಸಮಾವೇಶದ ಉದ್ದೇಶ.
ಹೀಗಾಗಿ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಬರುವ ಉದ್ಯಮಿ ಭಕ್ತರನ್ನು ಬಂಡವಾಳ ಹೂಡಿಕೆ ಕಡೆಗೆ ಆಕರ್ಷಿಸಲು ಫೆ.8 ಮತ್ತು 9ರಂದು ಸಮಾವೇಶ ಹಮ್ಮಿಕೊಂಡಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಶಿವಷಣ್ಮುಗಂ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಮಾವೇಶದಲ್ಲಿ ವಾಣಿಜ್ಯೋದ್ಯಮಿಗಳು, ಆಡಳಿತ ನಾಯಕರು, ತಜ್ಞರು, ಧಾರ್ಮಿಕ ಸಂಸ್ಥೆಗಳ ನಾಯಕರು ಒಗ್ಗೂಡಿ ವಾಣಿಜ್ಯ ವ್ಯವಸ್ಥೆಗೆ ನೈತಿಕ ಮತ್ತು ಆಧ್ಯಾತ್ಮಿಕ ನೆಲೆಗಟ್ಟು ರೂಪಿಸುವ ಬಗ್ಗೆ ಚಿಂತನೆ ನಡೆಸಲಿದ್ದಾರೆ. ಇದೇವೇಳೆ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ಸಮಗ್ರ ಸಮಾಜದ ಸೃಷ್ಟಿ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.
ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ನಾನಾ ದೇಶಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇವರಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಅನೇಕ ಕೈಗಾರಿಕೋದ್ಯಮಿಗಳಿರುತ್ತಾರೆ. ಆದರೆ, ಅವರಿಗೆ ಕರ್ನಾಟಕ ಕೈಗಾರಿಕಾ ಸ್ಥಾಪನೆಗೆ ಎಷ್ಟು ಪ್ರಶಸ್ತವಾಗಿದೆ ಎಂಬ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ಸಮಾವೇಶದಲ್ಲಿ ಕರ್ನಾಟಕದಲ್ಲಿ ಹೂಡಿಕೆಗೆ ಏನೆಲ್ಲಾ ಅವಕಾಶಗಳಿವೆ ಎಂದು ತಿಳಿಸುವ ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತದೆ. ಈ ಮೂಲಕ ವಿದೇಶಿ ಉದ್ಯಮಿಗಳು ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡಲಾಗುತ್ತದೆ ಎಂದು ಶಿವಷಣ್ಮುಗಂ ವಿವರಣೆ ನೀಡಿದರು.
ಸಮಾವೇಶದಲ್ಲಿ 100ಕ್ಕೂ ಹೆಚ್ಚು ವಿದೇಶ ಕೈಗಾರಿಕೋದ್ಯಮಿಗಳು ಹಾಗೂ ದೇಶದ 200ಕ್ಕೂ ಅಧಿಕ ಉದ್ಯಮಿಗಳು ಭಾಗವಹಿಲಿದ್ದು, ಇವರಿಗೆ ರಾಜ್ಯದಲ್ಲಿರುವ ಹೂಡಿಕೆ ಸಾಧ್ಯತೆ ಬಗ್ಗೆ ವಿವರಿಸಲು ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಆಗಮಿಸುವರು ಎಂದರು.
ಕೇಂದ್ರ ಪೆಟ್ರೋಲಿಯಂ ಸಚಿವ ಡಾ. ವೀರಪ್ಪ ಮೋಯ್ಲಿ, ಇನ್‌ಫೋಸಿಸ್ ಅಧ್ಯಕ್ಷ ಕೆ.ವಿ. ಕಾಮತ್, ಫ್ಯೂಚರ್ ಗ್ರೂಪ್‌ನ ಸಿಇಒ ಕಿಶೋರ್ ಬಿಯಾನಿ, ಮಣಿಪಾಲ್ ಸಂಸ್ಥೆಯ ಮೋಹನ್‌ದಾಸ್ ಪೈ, ಟಾಟಾ ಗ್ಲೋಬಲ್‌ನ ಹರೀಶ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಿವಷಣ್ಮುಗಂ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

