ಬಿ.ಬಾಲಕೃಷ್ಣನ್ ರಾಜಿನಾಮೆ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ. ಬಾಲಕೃಷ್ಣನ್ ಅವರು ಕಾನೂನು ಸಲಹೆಗಾರ ಹುದ್ದೆಯಿಂದ ಮುಕ್ತಗೊಳಿಸಬೇಕೆಂದು ರಾಜಿನಾಮೆ ಪತ್ರ ಬರೆದು ಬೆಂಗಳೂರು ವಿವಿ ಹಂಗಾಮಿ ಕುಲಪತಿ ಡಾ.ಎನ್. ರಂಗಸ್ವಾಮಿ ಅವರಿಗೆ ರವಾನೆ ಮಾಡಿದ್ದಾರೆ. ರಂಗಸ್ವಾಮಿ ಅವರ ಒತ್ತಡದಿಂದಲೇ ಬಾಲಕೃಷ್ಣನ್ ಅವರು ಹುದ್ದೆ ತೊರೆದಿದ್ದಾರೆ ಎಂದು ವಿವಿಯ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ. ಅಲ್ಲದೆ, ಸಹಾಯಕ ಕಾನೂನು ಸಲಹೆಗಾರರಾಗಿ ಕಳೆದ 20ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಜೇಂದ್ರ ಕುಮಾರ್ ಅವರು ಬಿ.ಎಡ್ ಕಾಲೇಜುಗಳ ವಿಚಾರದಲ್ಲಿ ಅನ್ಯಾಯ ಎಸಗಿದ್ದಾರೆಂದು ಬಿಎಡ್ ಕಾರ್ಯಪಡೆ ಅಧ್ಯಕ್ಷ ಕರಣ್ ಕುಮಾರ್ ಹಂಗಾಮಿ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಸದ್ಯದಲ್ಲೇ ಇವರು ಸಹ ಸಹಾಯಕ ಕಾನೂನು ಸಲಹೆಗಾರ ಹುದ್ದೆಯಿಂದ ವಜಾಗೊಳ್ಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

