ಸೌವಿಕ್ ಪಾಲ್ ಶವ ಇಂದು ನಗರಕ್ಕೆ
ಬೆಂಗಳೂರು: ಮ್ಯಾಂಚೆಸ್ಟರ್‌ನಲ್ಲಿ ನಾಪತ್ತೆಯಾಗಿ ನಂತರ ಮೃತದೇಹವಾಗಿ ಪತ್ತೆಯಾದ ಬೆಂಗಳೂರಿನ ಸೌವಿಕ್ ಪಾಲ್‌ನ ಮೃತದೇಹ ಬುಧವಾರ ಮಧ್ಯಾಹ್ನದ ವೇಳೆಗೆ ನಗರಕ್ಕೆ ಆಗಮಿಸಲಿದೆ.
ಹೊಸವರ್ಷದ ಹಿಂದಿನ ದಿನ ಸೌವಿಕ್ ಮ್ಯಾಂಚೆಸ್ಟರ್‌ನಲ್ಲಿ ನಾಪತ್ತೆಯಾಗಿದ್ದ. ಕಾಣೆಯಾಗಿ ಸುಮಾರು 20 ದಿನಗಳ ನಂತರ ನಾಲೆಯೊಂದರಲ್ಲಿ ಸೌವಿಕ್ ಮೃತದೇಹ ಪತ್ತೆಯಾಗಿತ್ತು. ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌವಿಕ್ ತಂದೆ ಸಂತನು ಪಾಲ್, ಸೌವಿಕ್‌ನ ಮರಣೋತ್ತರ ಪರೀಕ್ಷೆ ನಡೆದಿದ್ದು, ಆತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದ್ದರಿಂದ ಆತನ ದೇಹದಲ್ಲಿ ಸಂಗ್ರಹಿಸಿರುವ ಕೆಲವು ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಹಾಗಾಗಿ ವರದಿ ಬರುವವರೆಗೂ ಕಾದು ನೋಡಬೇಕಿದೆ. ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಬಹುದು ಎಂದು ನಂಬಿದ್ದೇವೆ.
ಅಲ್ಲದೆ ಆತನ ಮೃತದೇಹ ಪತ್ತೆಯಾದ ನಾಲೆಯಲ್ಲಿ ಈಜಲು ಹೋಗಿ ಈ ದುರಂತ ಸಂಭವಿಸಿರಬಹುದು ಎಂದರೆ, ಅದು ಸಾಧ್ಯವಿಲ್ಲ. ಆತನಿಗೆ ಚೆನ್ನಾಗಿ ಈಜು ಬರುತ್ತದೆ ಹಾಗೂ ಉತ್ತಮ ಆಟಗಾರ. ಸೌವಿಕ್ ಅಲ್ಲಿಗೆ ಹೋಗಿದ್ದು ಏಕೆ ಎಂಬಿತ್ಯಾದಿ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಯಾವುದಕ್ಕೂ ಉತ್ತರ ಸಿಕ್ಕಿಲ್ಲ.
ಈ ನಡುವೆ ಸೌವಿಕ್‌ನ ಅಜ್ಜ ಅಲೋಕ್‌ರಾಜನ್ ಪಾಲ್, ಈ ಘಟನೆ ಆಕಸ್ಮಿಕ ಹಾಗೂ ಆತ್ಮಹತ್ಯೆಯೂ ಅಲ್ಲ. ಇದು ಕೊಲೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಅಲ್ಲಿನ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

