ಬೆಂಗಳೂರು ನಗರ

ಅರ್ಜಿ ಸಲ್ಲಿಕೆ ಅಭಿಯಾನಕ್ಕೆ ಕೈ ನಾಯಕರ ಡೋಂಟ್ ಕೇರ್

Published On :

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಸೇರಿದಂತೆ ಘಟಾನುಘಟಿ ನಾಯಕರೇ ಕೆಪಿಸಿಸಿ ಆರಂಭಿಸಿರುವ ಅರ್ಜಿ ಸಲ್ಲಿಕೆ ಅಭಿಯಾನಕ್ಕೆ ಡೋಂಟ್ ಕೇರ್ ಹೇಳಿದ್ದಾರೆ.
ಹೌದು. ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಅಭ್ಯರ್ಥಿ ಆಗಬಯಸುವವರು ಕೆಪಿಸಿಸಿ ನೀಡುವ ಅರ್ಜಿ ಪಡೆದು ಜ.25ರೊಳಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಪ್ರಭಾವಿ ಮುಖಂಡರು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಜ.31ರವರೆಗೆ ಅವಧಿ ವಿಸ್ತರಿಸಲಾಗಿತ್ತು.
ಈ ಅವಧಿ ಮುಗಿಯುವುದಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಆದರೆ ಸಿದ್ದರಾಮಯ್ಯ, ಅಂಬರೀಶ್, ಶಾಸಕರಾದ ಕೃಷ್ಣ ಭೈರೇಗೌಡ, ಬಿ.ಸಿ.ಪಾಟೀಲ್, ಡಾ.ಸುಧಾಕರ್, ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಪ್ರಮುಖರು ಅರ್ಜಿ ಸಲ್ಲಿಸಿಲ್ಲ. ಇದುವರೆಗೆ ಕೆಪಿಸಿಸಿಯಿಂದ 2650 ಅರ್ಜಿ ವಿತರಣೆ ಮಾಡಲಾಗಿದ್ದು, 2150 ಅರ್ಜಿಗಳನ್ನು ಅಭ್ಯರ್ಥಿಗಳು ಸಲ್ಲಿಸಿದ್ದಾರೆ.
ಕರೆಗೆ ಕೈಕೊಟ್ಟ ಮುಖಂಡರು: ಅದೇ ರೀತಿ ಕಾಂಗ್ರೆಸ್ ಮುಖಂಡರು ಉಳ್ಳಾಲದಿಂದ ಉಡುಪಿವರೆಗೆ ನಡೆಸುತ್ತಿರುವ ಕಾಂಗ್ರೆಸ್ ನಡಿಗೆ ಸೌಹಾರ್ದತೆಯ ಕಡೆಗೆ ಅಭಿಯಾನಕ್ಕೆ ಬರುವಂತೆ ಕೆಪಿಸಿಸಿ ನೀಡಿದ್ದ ಕರೆಗೆ ಪದಾಧಿಕಾರಿಗಳೇ ಕೈ ಎತ್ತಿದ್ದಾರೆ.
ಕೆಪಿಸಿಸಿ ಉಪಾಧ್ಯಕ್ಷರಾದ ಅಂಬರೀಶ್, ಪ್ರೊ.ಬಿ.ಕೆ. ಚಂದ್ರಶೇಖರ್, ರೋಷನ್ ಬೇಗ್, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಸಿ. ಮಹಾದೇವಪ್ಪ, ಕೆ.ಗೋವಿಂದರಾಜ್, ಸಂತೋಷ್ ಲಾಡ್, ರಾಮಲಿಂಗಾರೆಡ್ಡಿ, ಡಾ.ಎಲ್. ಹನುಮಂತಯ್ಯ, ಸತೀಶ್ ಜಾರಕಿಹೊಳಿ, ಆರ್.ವಿ.ದೇವರಾಜ್, ಎಚ್.ಆಂಜನೇಯ, ಕೃಷ್ಣ ಭೈರೇಗೌಡ, ಬೀಸೆಗೌಡ, ಕಾರ್ಯದರ್ಶಿಗಳಾದ ಛಲವಾದಿ ನಾರಾಯಣಸ್ವಾಮಿ, ಚಂದ್ರಕಲಾ, ಶ್ರೀನಿವಾಸ್ ಮಾನೆ, ಮಲ್ಲಿಗೆ ವೀರೇಶ್, ನಿವೇದಿತಾ ಆಳ್ವ ಮೊದಲಾದವರು ಭಾಗವಹಿಸದೇ ಇರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.