ಮಾಹಿತಿ ಫಲಕ ಫೆ.15ವರೆಗೆ ವಿಸ್ತರಣೆ
ಬೆಂಗಳೂರು: ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸೇರಿದಂತೆ ಕೆಲ ವಾಹನಗಳಿಗೆ 'ಮಾಹಿತಿ ಫಲಕ' ಅಳವಡಿಸಲು ನೀಡಿದ್ದ ಗಡುವು ಜ.31ಕ್ಕೆ ಮುಕ್ತಾಯವಾಗಲಿದ್ದು, ಫೆ.15ರವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ನಗರದ ಆಟೋಗಳಲ್ಲಿ ಭಾವಚಿತ್ರವಿರುವ ಈ 'ಮಾಹಿತಿ ಫಲಕ' (ಡಿಸ್ಪ್ಲೇ ಕಾರ್ಡ್) ಅಳವಡಿಸಲಾಗಿದೆ. ಅದೇ ರೀತಿ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಟೆಂಪೋ ಟ್ರಾವಲ್ಸ್, ಕಾಲ್ ಸೆಂಟರ್ ವಾಹನಗಳು ಬಿಪಿಓ, ಐಟಿಬಿಟಿ ಕಂಪನಿಗೆ ಬಳಸುವ ವಾಹನಗಳ ಚಾಲಕರು ತಮ್ಮ ಬಗ್ಗೆ ವಿವರವುಳ್ಳ 'ಮಾಹಿತಿ ಫಲಕ'ವನ್ನು ವಾಹನದಲ್ಲಿ ಹಾಕುವಂತೆ ನಗರ ಸಂಚಾರ ವಿಭಾಗದ ಆರಕ್ಷಕರು ಸೂಚಿಸಿದ್ದರು. ಆದರೆ, ಈ 'ಮಾಹಿತಿ ಫಲಕ' ಅಳವಡಿಕೆಗೆ ಚಾಲಕರಿಂದ ಉತ್ತಮ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ನಿಗದಿಪಡಿಸಿದ್ದ ದಿನಾಂಕವನ್ನು ವಿಸ್ತರಿಸಲಾಗಿದೆ. ಆ ಸಮಯದಲ್ಲಿ 'ಮಾಹಿತಿ ಫಲಕ' ಹಾಕಿಸದಿದ್ದಲ್ಲಿ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆರಕ್ಷಕರು ತಿಳಿಸಿದ್ದಾರೆ. ಚಾಲಕರು ಶಿವಾಜಿನಗರ ಬಸ್ ನಿಲ್ದಾಣದ ಮೇಲ್ಭಾಗದಲ್ಲಿರುವ 2ನೇ ಮಹಡಿ ಉಪಪೊಲೀಸ್ ಆಯುಕ್ತರ ಕಚೇರಿ(ಸಂಚಾರ ಪೂರ್ವ) ಹಾಗೂ ಯಶವಂತಪುರ ವೃತ್ತ, ಸಿ.ವಿ.ರಾಮನ್ ರಸ್ತೆಯಲ್ಲಿರುವ ಪಶ್ಚಿಮ ವಿಭಾಗದ ಸಂಚಾರ ಆರಕ್ಷಕರ ಕಚೇರಿಯಲ್ಲಿ ಫಲಕಗಳನ್ನು ಪಡೆಯಬಹುದು. ಮಾಹಿತಿಗಾಗಿ 2286 2222 ಸಂಪರ್ಕಿಸಬಹುದು.
ಬಿಡಿಎ ಆಯುಕ್ತರು ಜೈಲಿಗೆ; ಹೈ ಎಚ್ಚರಿಕೆ
ನ್ಯಾಯಾಲಯದ ಆದೇಶವಿದ್ದರೂ, ನಿಯಮ ಉಲ್ಲಂಘಿಸಿ ನೆಲಸಮಗೊಳಿಸಿ ಕಟ್ಟಡದ ಮಾಲೀಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕುರಿತು ವಿವರಣೆ ನೀಡದಿದ್ದಲ್ಲಿ ಬಿಡಿಎ ಆಯುಕ್ತರನ್ನು ಮುಲಾಜಿಲ್ಲದೆ ಜೈಲಿಗೆ ಕಳುಹಿಸುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಆದೇಶದ ನಿರ್ಲಕ್ಷ್ಯದ ಕುರಿತು ಆಯುಕ್ತರು 24 ಗಂಟೆಗಳಲ್ಲಿ ವಿವರಣೆ ನೀಡದಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ನ್ಯಾ.ರಾಮಮೋಹನ ರೆಡ್ಡಿ, ಬಿಡಿಎ ಆಯುಕ್ತರು ವಿದೇಶ ಪ್ರಯಾಣದಲ್ಲಿದ್ದಾರೆ ಎಂಬ ನೆಪವನ್ನು ಪರಿಗಣಿಸಲು ನಿರಾಕರಿಸಿದ್ದಾರೆ. ವಿವರಣೆ ನೀಡಲು ಸೋಮವಾರದವರೆಗೆ ಕಾಲಾವಕಾಶ ನೀಡಬೇಕು ಎಂಬ ಬಿಡಿಎ ಪರ ವಕೀಲರ ಮನವಿ ತಿರಸ್ಕರಿಸಿದ ನ್ಯಾಯಮೂರ್ತಿಗಳು, ಜೈಲಿಗೆ ಹೋಗಲು ಶುಕ್ರವಾರ ಶುಭದಿನ. ವಿವರಣೆ ನೀಡದಿದ್ದಲ್ಲಿ ಬಿಡಿಎ ಆಯುಕ್ತರನ್ನು ಶುಕ್ರವಾರ ಜೈಲಿಗೆ ಅಟ್ಟಲಾಗುವುದು ಎಂದು ಸ್ಪಷ್ಟಪಡಿಸಿದೆ.
ವಿವಾದವೇನು?: ನಂದಿನಿ ಲೇಔಟ್ನಲ್ಲಿ ದಾಕ್ಷಾಯಿಣಿ ಎಂಬವರಿಗೆ ಸೇರಿದ ನಿವೇಶನವನ್ನು ಬಿಡಿಎ ನಿಯಮ ಮೀರಿ ಸ್ವಾಧೀನ ಪಡಿಸಿಕೊಂಡಿತ್ತು. ಇದನ್ನು ದಾಕ್ಷಾಯಿಣಿ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಬಿಡಿಎ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಈ ಜವಾಬ್ದಾರಿಯನ್ನು ನ್ಯಾಯಮೂರ್ತಿಗಳು ಬಿಡಿಎ ಆಯುಕ್ತರಿಗೆ ವಹಿಸಿದ್ದರು. ಮಾತ್ರವಲ್ಲದೆ 4 ವಾರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಿದ್ದರು. ಆದರೆ, ಆಯುಕ್ತರು ಇದನ್ನು ಪಾಲಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

