ಬೆಂಗಳೂರು ನಗರ

ಕೈಲಾಸ ಮಾನಸ ಸರೋವರ ಯಾತ್ರೆ

Published On :

ಬೆಂಗಳೂರು:  ನಾರಾಯಣಿ ಹಾಲಿಡೇಸ್ ವತಿಯಿಂದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಯಾತ್ರೆಯು ಜೂನ್ 20ರಿಂದ 14ದಿನಗಳ ಕಾಲ ನಡೆಯಲಿದೆ. ಬೆಂಗಳೂರಿನಿಂದ ನೇಪಾಳದ ಕಠ್ಮಂಡುವಿಗೆ ಹಾಗೂ ಕಠ್ಮಂಡುವಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಸಾಗಲಿದೆ. ಯಾತ್ರೆಯಲ್ಲಿ ನುರಿತ ಮಾರ್ಗದರ್ಶಕರೊಂದಿಗೆ ವಸತಿ ಹಾಗೂ ಸಸ್ಯಾಹಾರಿ ದಕ್ಷಿಣ ಭಾರತ ಭೋಜನ ವ್ಯವಸ್ಥೆಯಿದೆ. ಯಾತ್ರೆಯಿಂದ ಮರಳಿ ಬಂದವರಿಗೆ ರಾಜ್ಯ ಸರ್ಕಾರವು 30,000 ಧನಸಹಾಯ ನೀಡಲಿದೆ. ಭಾಗವಹಿಸಲು ಇಚ್ಛಿಸುವ ಯಾತ್ರಾರ್ಥಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ- ಮೆ.ನಾರಾಯಣಿ ಹಾಲಿಡೇಸ್, ನಂ.24, ಬಾಲಾಜಿ ಪ್ಲಾಜ, 2ನೇ ಮಹಡಿ, 2ನೇ ಅಡ್ಡರಸ್ತೆ, ಕಿರ್ಲೋಸ್ಕರ್ ಕಾಲೋನಿ, 2ನೇ ಹಂತ, ಶಂಕರಮಠದ ವೃತ್ತದ ಹತ್ತಿರ, ಬಸವೇಶ್ವರನಗರ, ಬೆಂ- 560079. ಮಾಹಿತಿಗೆ- 42151225/226, 9845608096 ಸಂಪರ್ಕಿಸಿ.

ನೀರು ಉಳಿಸಿದ ಐಟಿಸಿ ವಿಂಡ್ಸರ್
ನೀರಿನ ಮಿತವ್ಯಯದ ಮೂಲಕ ಐಟಿಸಿ ವಿಂಡ್ಸರ್ ಹೊಟೇಲ್ ಪ್ರಸಕ್ತ ವರ್ಷದಲ್ಲಿ 27.92 ಲಕ್ಷ ಲೀಟರ್ ನೀರು ಉಳಿಸಿದೆ. ವಿಶ್ವ ಜಲ ದಿನಾಚರಣೆ ಅಂಗವಾಗಿ ಶುಕ್ರವಾರ ವಿಶೇಷ ಕಾರ್ಯಕ್ರಮವನ್ನು ಹೊಟೇಲ್ ಹಮ್ಮಿಕೊಂಡಿದ್ದು ಭವಿಷ್ಯದಲ್ಲಿ ನೀರಿನ ಮಿತವ್ಯಯದ ಕುರಿತಂತೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ. ನೀರಿನ ಮಿತವ್ಯಯವು ದಿನಾಚರಣೆಗೆ ಸೀಮಿತವಾಗದೇ ವರ್ಷದ ಎಲ್ಲ ದಿನಗಳಲ್ಲೂ ಪಾಲಿಸಲು ಹೋಟೆಲ್ ನಿರ್ಧರಿಸಿದೆ. ಇದೇ ಕಾರಣದಿಂದ ಒಳಚರಂಡಿ ನೀರು ಸಂಸ್ಕರಣೆ ಘಟಕವನ್ನು ಆರಂಭಿಸಲಾಗಿದ್ದು, ಹೋಟೆಲ್‌ನ ಉದ್ಯಾನ ನಿರ್ವಹಣೆಗೆ ಉಪಯೋಗಿಸಲಾಗುತ್ತದೆ. ಹೆಚ್ಚುವರಿ ನೀರನ್ನು ಗಾಲ್ಫ್ ಕ್ಲಬ್‌ಗೂ ನೀಡಲಾಗುತ್ತದೆ.

ನಾಳೆ ನಗರದಲ್ಲಿ ಐಡಿಯಾ ಜಲ್ಸಾ
ಭಾರತೀಯ ಸಂಗೀತ ಪ್ರಕಾರದಲ್ಲಿ 'ಐಡಿಯಾ ಜಲ್ಸಾ' ಎಂಬ ಸುದೀರ್ಘ ಸಂಗೀತ ಪ್ರವಾಸ ಮಾ.23ರಂದು ನಗರದಲ್ಲಿ ನಾದಗಂಗೆ ಹರಿಸಲಿದೆ. ಓರಿಯನ್ ಮಾಲ್‌ನಲ್ಲಿ ನಡೆಯಲಿರುವ ಸಂಗೀತ ರಸಧಾರೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕ ಹರಿಹರನ್ ಗಾಯನ ಮತ್ತು ಯು.ಶ್ರೀನಿವಾಸ್ ಮ್ಯಾಂಡೊಲಿನ್ ವಾದನವಿದೆ. ಬಹು ಮಾಧ್ಯಮ ವೇದಿಕೆಯಡಿ ರೂಪಿತವಾಗಿರುವ ಈ ಭಾರತೀಯ ಸಂಗೀತ ತಂಡದ ಪ್ರವಾಸ 2013ರ ಜನವರಿ 20ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಆರಂಭಗೊಂಡಿದ್ದು, ಮಾ.24ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ಐಡಿಯಾ ಜಲ್ಸಾ ಸಂಗೀತ ಪಯಣ 12 ನಗರಗಳಲ್ಲಿ ಸಂಗೀತ ಪ್ರೇಮಿಗಳ ಮನ ತಣಿಸಲಿದ್ದು, ಅದೇ ವೇಳೆಗೆ ಅಂತರ್ಜಾಲದಲ್ಲಿ ನೇರ ಪ್ರಸಾರವೂ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ವೆಬ್‌ಸೈಟ್ ಮತ್ತು ಫೇಸ್‌ಬುಕ್‌ನಲ್ಲಿ https://www.youtube.com/indiamusicforsoul and on www.facebook.com/JalsaMusicForTheSouls)ರಲ್ಲಿ ಕಾರ್ಯಕ್ರಮವನ್ನು ವಿಶ್ವದೆಲ್ಲೆಡೆಯ ಸಂಗೀತ ಪ್ರೇಮಿಗಳು ನೇರವಾಗಿ ವೀಕ್ಷಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.