ಏ.6ರಂದು ಲೋಹಿಯಾ ಸಾಮಾಜಿಕ ಸೇವಾ ಪ್ರಶಸ್ತಿ ಪ್ರದಾನ

Updated on: 

ಕ.ಪ್ರ.ವಾರ್ತೆ ್ಣ ಬೆಂಗಳೂರು ್ಣ ಮಾ.29
ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ 2011- 12ನೇ ಸಾಲಿನ 'ಲೋಹಿಯಾ ಸಾಮಾಜಿಕ ಸೇವಾ ಪ್ರಶಸ್ತಿ'ಗೆ ಲೋಹಿಯಾ ವಿಚಾರವಾದಿ ಅಲಿಬಾಬಾ ಹಾಗೂ 'ಶ್ರೀಶಾರದಾಮಾತಾ ಮಹಿಳಾ ಪ್ರಶಸ್ತಿ'ಗೆ ಸುಗಮ ಸಂಗೀತ ಗಾಯಕಿ ಆಶಾ ಬದ್ರಿನಾಥ್ ಅವರನ್ನು ಆಯ್ಕೆ ಮಾಡಿದೆ. ನಯನ ಸಭಾಂಗಣದಲ್ಲಿ ಏ.6ರಂದು ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜತೆಗೆ, ವಿವಿಧ ಪ್ರಾಕಾರಗಳಲ್ಲಿನ ಹತ್ತು ಕೃತಿಗಳನ್ನು 2011-12ನೇ ಸಾಲಿನ 'ಸಾಹಿತಿ ಹೆಬ್ಬಗೋಡಿ ಗೋಪಾಲ್ ದತ್ತಿ ಪುಸ್ತಕ ಬಹುಮಾನ'ಕ್ಕೆ ಆಯ್ಕೆ ಮಾಡಿದ್ದು, ಅದರ ಲೇಖಕರಿಗೂ ಇದೇ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಸಿ.ಹೇಮಾವತಿ ಸಿಸಿರಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com