ಬೆಳಗಾವಿ

ಸಮಾಜ ಗುರುತಿಸುವ ಕಾರ್ಯ ಮಹಿಳೆಯಿಂದಾಗಲಿ: ಡಾ. ಭಾರದ್ವಾಜ

Published On :

ಚಿಕ್ಕೋಡಿ:  ಸಮಾಜದಲ್ಲಿನ ಎಲ್ಲ ಪುರುಷರು ಕೆಟ್ಟವರಲ್ಲ. ಅವರಲ್ಲಿಂೂ ಅನೇಕರು ಒಳ್ಳೆಂು ಜನರಿದ್ದಾರೆ. ಇದರಿಂದ ಮಹಿಳೆಗೆ ತನ ಭಾವನೆಯನು ಕಾವ್ಯ, ಕಥೆ, ಕಾದಂಬರಿ ಮತ್ತು ನಾಟಕ ಇತ್ಯಾದಿ ಪ್ರಕಾರಗಳಲ್ಲಿ ಬರೆಂುಲು ಸಾಧ್ಯವಾಯಿತು. ಇದರಿಂದ ಮಹಿಳೆ ತನನು ತಾನು ಸಮಾಜದಲ್ಲಿ ಗುರುತಿಸಿಕೊಂಡಳು ಎಂದು ಆಗ್ರಾದ ರಾಜ್ಯ ಭಾಷಾ ಅಧಿಕಾರಿ ಡಾ. ಮಧು ಭಾರದ್ವಾಜ ತಿಳಿಸಿದರು.
ಇಲ್ಲಿನ ಕೆಎಲ್ಇ ಸಂಸ್ಥೆ ಬಸವಪ್ರಭು ಕೋರೆ ಮಹಾವಿದ್ಯಾಲಂುದಲ್ಲಿ ಂುಜಿಸಿ ಸಹಂೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾತಂತ್ಯೋತ್ತರ ಹಿಂದಿ ಸಾಹಿತ್ಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿ ನಮ್ಮ ರಾಷ್ಟ್ರ ಭಾಷೆ. ಇದನ್ನು ಎಲ್ಲರೂ ಕಲಿಯುವ ಜೊತೆಗೆ ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು ಎಂದರು. ಕೊಲ್ಲಾಪುರದ ಮಹಾವೀರ ಕಾಲೇಜಿನ ನಿವೃತ್ತ ಪ್ರಾಚಾಂರ್ು ಡಾ. ಸುನೀಲಕುಮಾರ ಲವಟೆ ಮಾತನಾಡಿ, 65 ಹಿಂದಿನ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಸಾಹಿತ್ಯವನ್ನು ಗಮನಿಸಿದರೆ ಇಂದು ಮೊದಲಿಗಿಂತಲೂ ವಿಫುಲ ಸಾಹಿತ್ಯ ಪ್ರಕಟವಾಗತೊಡಗಿದೆ. ದೇಶದಲ್ಲಿ ಸಂಪರ್ಕ ಕ್ರಾಂತಿ ಉಂಟಾದ ಮೇಲೆ ಪ್ರಕಟಿತ ಸಾಹಿತ್ಯವಲ್ಲದೆ ಮಾಧ್ಯಮಗಳಲ್ಲಿಂೂ ವಿಭಿನ್ನ ಬಗೆಂು ಸಾಹಿತ್ಯ ಸೃಷ್ಟಿಂಾಗುತ್ತಿದೆ. ಹಿಂದಿ ಸಾಹಿತ್ಯದ ಕುರಿತು ದಿನವೂ ವಿಭಿನ ರಚನೆಗಳು ಪ್ರಕಟವಾಗುತ್ತಿವೆ. ಹಾಗೆಂು ವೊಬೈಲ್ ಸಾಹಿತ್ಯವೂ ಹೊಸ ಪ್ರಕಾರವಾಗಿ ಬೆಳೆಂುತ್ತಿದೆ ಎಂದರು.
ಕೆಎಲ್ಇ ಸಂಸ್ಥೆಂು ಆಡಳಿತ ಮಂಡಳಿ ಸದಸ್ಯ ಬಸವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಎನ್.ಎಸ್. ವಂಟಮುತ್ತೆ, ಮಹೇಶ ಭಾತೆ, ಪ್ರೊ. ಎಂ.ಬಿ. ಕಬಾಡೆ, ಪದವಿ ಪೂರ್ವ ಪ್ರಾಚಾರ್ಯ ಎಂ.ಎಂ. ನರಗುಂದ, ಪ್ರೊ. ಉದಂು, ಪ್ರಾಚಾಂರ್ು ಬಿ.ಎ. ಪೂಜಾರಿ ಮುಂತಾದವರು ಉಪಸ್ಥಿತರಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾಂರ್ು ಡಾ. ಎಚ್.ಎ. ಇಲಕಲ್ ಪ್ರಾರ್ಥಿಸಿದರು. ಡಾ. ವಿದ್ಯಾವತಿ ರಜಪೂತ ಪರಿಚಯಿಸಿದರು. ಪ್ರಾಚಾಂರ್ು ಡಾ.ಎಸ್.ಹಾಗರಗಿ ಸ್ವಾಗತಿಸಿದರು. ಡಾ. ಎಚ್.ಎ. ಇಲಕಲ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.