ಬಳ್ಳಾರಿಯಲ್ಲಿ ಸಿಕ್ಕಿತು ಕುರುಡು ಕಾಂಚಾಣ
ಬಳ್ಳಾರಿ: ಇನ್ನು ಚುನಾವಣಾ ಪ್ರಚಾರ ಆರಂಭವಾಗಿಲ್ಲ, ಆಗಲೇ ಲೆಕ್ಕರಹಿತ ಹಣ ಹರಿದಾಟ ಶುರುವಾಗಿದೆ. ಬಳ್ಳಾರಿಯಲ್ಲಿ ಬುಧವಾರ ತಡರಾತ್ರಿ ಹಾಗೂ ಗುರುವಾರ ಬೆಳಗ್ಗೆ ಎರಡು ಕಡೆಗಳಲ್ಲಿ ದಾಖಲೆ ಇಲ್ಲದೆ ತೆಗೆದುಕೊಂಡು ಹೋಗುತ್ತಿದ್ದ ರು. 41.47 ಲಕ್ಷವನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಬುಧವಾರ ತಡರಾತ್ರಿ ನಗರದ ಗೊಳೆರಹಟ್ಟಿಯಿಂದ ಗೋಪಾಲ್ ಎನ್ನುವವರಿಗೆ ಸೇರಿದ ಕಚೇರಿಯಿಂದ ಅಶೋಕ್ ಎನ್ನುವವರು ತನ್ನ ಬೈಕ್‌ನಲ್ಲಿ ರು. 33,47,400 ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಎಸ್ಪಿ ಡಾ. ಚಂದ್ರಗುಪ್ತಾ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ಇನ್‌ಸ್ಪೆಕ್ಟರ್ ಈಶ್ವರ ನಾಯಕ್ ತಂಡ ದಾಳಿ ಮಾಡಿ, ಹಣವನ್ನು ವಶಪಡಿಸಿಕೊಂಡಿದೆ. ಹಣಕ್ಕೆ ಯಾವುದೆ ದಾಖಲೆ ಇಲ್ಲದ ಕಾರಣ ವಶಕ್ಕೆ ತೆಗೆದುಕೊಂಡು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಚೇಳ್ಳಗುರ್ಕಿ ಚೆಕ್‌ಪೋಸ್ಟ್‌ನಲ್ಲಿ ರು. 8 ಲಕ್ಷ: ಅನಂತಪುರ ಕಡೆಯಿಂದ ಬರುತ್ತಿದ್ದ ಕಾರಿನಲ್ಲಿ ಯಾವುದೆ ದಾಖಲೆ ಇಲ್ಲದ ರು. 8 ಲಕ್ಷ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ಪಿಎಸ್‌ಐ ಸಂದೀಪ್ ಗಡಿಯ ಚೇಳ್ಳಗುರ್ಕಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಕಾರೊಂದನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ದ್ರಾಕ್ಷಿ ಹಣ್ಣಿನ ಪುಟ್ಟಿಯಲ್ಲಿ ಹಣವನ್ನು ಇಟ್ಟುಕೊಂಡು ಬಂದಿದ್ದು, ತೀವ್ರ ಅನುಮಾನಕ್ಕೆ ಕಾರಣವಾಗಿತ್ತು. ಕಾರಿನಲ್ಲಿ ತಂದಿದ್ದ ರು. 8 ಲಕ್ಷ ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಚೇತನ್ ಹಣ ತನ್ನದು ಎಂದು ಹೇಳಿದರೂ, ಯಾವುದೆ ದಾಖಲೆ ಇರಲಿಲ್ಲ. ಕಾರಿನಲ್ಲಿ ಚೇತನ್, ಹರೀಶ್, ಹೇಮಂತ್, ದೀಪಾರಾಂ, ಡ್ರೈವರ್ ಇದ್ದರು. ಈ ಕುರಿತು ಪಿ.ಡಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ರುದ್ರಮುನಿ, ಇನ್ಸ್‌ಪೆಕ್ಟರ್ ಸುಲೇಮಾನ್ ತಹಸೀಲ್ದಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಎಸ್ಪಿ ಡಾ. ಚಂದ್ರಗುಪ್ತಾ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ನೀತಿ ಸಂಹಿತೆ ಹಿನ್ನೆಲೆಯಲ್ಲಿ ದಾಖಲೆ ಇಲ್ಲದೆ ಹಣ ಸಾಗಿಸುತ್ತಿರುವುದು ತಪ್ಪು. ಚುನಾವಣೆಗೆ ಹಂಚಲು ತೆಗೆದುಕೊಂಡು ಹೋಗುವುದು ಬಿಟ್ಟು, ಬೇರೆ ಯಾವುದೆ ಉದ್ದೇಶ ಇರುವುದಿಲ್ಲ. ಅದಕ್ಕಾಗಿ 2 ಪ್ರಕರಣದಲ್ಲಿ ರು. 41.47 ಲಕ್ಷ ಸೀಜ್ ಮಾಡಿ, ಪ್ರಕರಣ ದಾಖಲಿಸಲಾಗಿದೆ. ಇದಕ್ಕಾಗಿ ಜಿಲ್ಲಾದ್ಯಂತ ತೀವ್ರ ನಿಗಾವಹಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

