ಆರ್ ಆ್ಯಂಡ್ ಆರ್ ಪ್ಲಾನ್ ವೀಕ್ಷಣೆಗೆ ಇಂದು ತಂಡ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 12
ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ 9 ಕಂಪನಿಗಳ ಗಣಿ ಪ್ರದೇಶದಲ್ಲಿ ಕೈಗೊಂಡಿರುವ ಆರ್ ಆ್ಯಂಡ್ ಆರ್ ಪ್ಲಾನ್ (ಪುನಶ್ಚೇತನ ಹಾಗೂ ಪುನರ್ನಿರ್ಮಾಣ) ವೀಕ್ಷಣೆ ಮಾಡಲು ವಿಜ್ಞಾನಿಗಳು, ತಜ್ಞರು ಹಾಗೂ ಐಸಿಎಫ್ಆರ್ಇಯ ಒಟ್ಟು 16 ಜನರನ್ನು ಒಳಗೊಂಡ ಎರಡು ತಂಡ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ.
ಒಂದು ತಂಡದಲ್ಲಿ ಐವರು ವಿಜ್ಞಾನಿಗಳು, ಇಬ್ಬರು ತಜ್ಞರು, ಒಬ್ಬ ಸಂಶೋಧನೆ ಸಹಾಯಕ ಇರಲಿದ್ದಾರೆ. ಏ. 13ರಿಂದ 23ರ ವರೆಗೆ ಮೂರು ಜಿಲ್ಲೆಗಳ ವಿವಿಧ ಗಣಿ ಪ್ರದೇಶಗಳಿಗೆ ಎರಡು ತಂಡ ಭೇಟಿ ನೀಡಿ, ಆರ್ ಆ್ಯಂಡ್ ಆರ್ ಯೋಜನೆ ಪರಿಶೀಲನೆ ನಡೆಸಲಿದೆ.
ಮೊದಲನೇ ತಂಡ ಚಿತ್ರದುರ್ಗ ಜಿಲ್ಲೆಯ ಗರುಡಾದ್ರಿ ಇಪೆಕ್ಸ್ ಪ್ರೈವೇಟ್ ಲಿಮಿಟೆಡ್ (ಎಂಎಲ್ ನಂ. 2583), ಕೆನರಾ ಮಿನರಲ್ಸ್ (ಎಂಎಲ್ 2656), ಬಳ್ಳಾರಿ ಜಿಲ್ಲೆಯ ಎಚ್.ಜಿ. ರಂಗನಗೌಡ (ಎಂಎಲ್ 2549), ಆರ್ ಚಾರುಚಂದ್ರ (ಎಂಎಲ್ 2544) ಪ್ರದೇಶದಲ್ಲಿ ಪರಿಶೀಲನೆ ನಡೆಸಲಿದೆ. ಎರಡನೇ ತಂಡ ತುಮಕೂರು ಜಿಲ್ಲೆಯ ಬಿ.ಆರ್. ಗಣಪತಿ ಸಿಂಗ್ (ಎಂಎಲ್ 2570), ಶ್ರೀ ಯು. ಉಪೇಂದ್ರ (ಎಂಎಲ್ 1957), ಬಳ್ಳಾರಿ ವ್ಯಾಪ್ತಿ ಗಡಗಿ ಮಿನರಲ್ಸ್ ಮೈನಿಂಗ್ ಕಂಪನಿ (ಎಂಎಲ್ 2489), ಕುಮಾರಸ್ವಾಮಿ ಮೈನಿಂಗ್ ಕಂಪನಿ (ಎಂಎಲ್ 2087)ಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.
--
ಹೊರ ಆವರಣದಲ್ಲೇ ಸ್ವಾಮಿಯ ದರ್ಶನ ಪಡೆದ ಎಲ್. ಮಾರೆಣ್ಣ
ಕೊಟ್ಟೂರು: ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಲ್. ಮಾರೆಣ್ಣ ಪಟ್ಟಣದ ಆರಾಧ್ಯದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನವನ್ನು ಹೊರ ಆವರಣದಲ್ಲೇ ಪಡೆದು ಆಶೀರ್ವಾದ ಬೇಡಿದ್ದು ಜನತೆಯ ಗಮನ ಸೆಳೆಯಿತು. ಮಠದ ಒಳಗಡೆ ತೆರಳಲು ಪ್ರತಿಯೊಬ್ಬರಿಗೂ ಮುಕ್ತ ಅವಕಾಶವಿದೆ. ಒಳಗೆ ಬರುವಂತೆ ಆಹ್ವಾನಿಸಿದರೂ ಮಾರೆಣ್ಣ ಹೊರಗಡೆ ನಿಂತುಕೊಂಡೇ ಸ್ವಾಮಿಗೆ ನಮಿಸಿದರು. ಅಲ್ಲೇ ಧರ್ಮಕರ್ತ ಬಳಗದವರನ್ನೂ ಕರೆಯಿಸಿಕೊಂಡು ದರ್ಶನಾಶೀರ್ವಾದ ಪಡೆದರು.
ಕೊಟ್ಟೂರೇಶ್ವರ ಸ್ವಾಮಿ ಪವಾಡ ಪುರುಷ. ಆತನ ಮಹಿಮೆ ಅಪಾರ. ಶ್ರೀ ಸ್ವಾಮಿಯ ದರ್ಶನಕ್ಕೆ ತಮ್ಮ ರಾಜಕೀಯ ಗುರು ಅಲ್ಲಂ ವೀರಭದ್ರಪ್ಪ ಅವರೊಂದಿಗೆ ಹಲವಾರು ಸಲ ಬಂದಿರುವೆ. ಆಗಲೂ ಮಠ ಪ್ರವೇಶಿಸದೆ ಹೊರಗಡೆ ನಿಂತೇ ಆಶೀರ್ವಾದ ಪಡೆದಿದ್ದೆ. ಈಗಲೂ ಅದನ್ನೇ ಮಾಡಿರುವೆ ಎಂದು ವಿನೀತ ಭಾವ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

