ಬಳ್ಳಾರಿ

ಕಂಪ್ಲಿ: 7 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆ

Published On :

ಕನ್ನಡಪ್ರಭ ವಾರ್ತೆ, ಕಂಪ್ಲಿ, ಏ. 18
ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಬುಧವಾರ 91-ಕಂಪ್ಲಿ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು ಸೇರಿ ಒಟ್ಟು 10 ನಾಮಪತ್ರ ಸಲ್ಲಿಸಿದರು.
ಸೋಮವಾರ 4 ಮತ್ತು ಬುಧವಾರ 7 ಸೇರಿ ಒಟ್ಟು 11 ಅಭ್ಯರ್ಥಿಗಳು 15 ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ 4-ಬಿಎಸ್‌ಆರ್ ಕಾಂಗ್ರೆಸ್, 2-ಕಾಂಗ್ರೆಸ್, 2-ಕೆಜೆಪಿ, 1-ಜೆಡಿಎಸ್, 1-ಬಿಜೆಪಿ, 1-ಸಿಪಿಐ, 1-ಬಿಎಸ್‌ಪಿ ಹಾಗು 3-ಪಕ್ಷೇತರ ಸೇರಿ ಒಟ್ಟು 15 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಾಂಗ್ರೆಸ್ ಅಭ್ಯರ್ಥಿ ಗುಜ್ಜಲ ನಾಗರಾಜ ತಮ್ಮ ಬೆಂಬಲಿಗರೊಂದಿಗೆ ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಕಾಂಗ್ರೆಸ್ ಜಿಲ್ಲಾ ಒಬಿಸಿ ಸೆಲ್ ಸದಸ್ಯ ಮೇಟಿ ಕರಿಬಸಪ್ಪ, ಡಿಸಿಸಿ ಸದಸ್ಯ ಮಂಜುನಾಥ, ಮುಖಂಡರಾದ ಆರ್.ಸೋಮಶೇಖರಗೌಡ, ಎಚ್.ಮಹೇಶ, ಮಹ್ಮದ್‌ರಫಿ, ಅಬ್ದುಲ್ ಕರೀಮ್, ಜಿ.ಕೆ. ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಬೀಬ್ ರೆಹಮಾನ್, ಎಚ್.ಮಹೇಶ, ಪಿ.ನಾಗೇಶ್ವರರಾವ್, ಎಂ.ಗೋಪಾಲ್, ಡಿಸಿಸಿ ಸದಸ್ಯರಾದ ಕೆ.ಚಂದ್ರಶೇಖರ ಇತರರಿದ್ದರು.
ಪಕ್ಷೇತರ (ಕಾಂಗ್ರೆಸ್ ಬಂಡಾಯ) ಅಭ್ಯರ್ಥಿ ಜೆ.ಎನ್. ಗಣೇಶ ತಮ್ಮ ಎಲ್ಲ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಸಿದರು. ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವು, ಡಿಸಿಸಿ ಗ್ರಾಮೀಣ ವಿಭಾಗ ಉಪಾಧ್ಯಕ್ಷ, ಪುರಸಭೆ ಸದಸ್ಯ ಎಂ. ಸುಧೀರ್, ಡಿಸಿಸಿ ಸದಸ್ಯರಾದ ಪಿ.ಮೂಕಯ್ಯಸ್ವಾಮಿ, ಎಂ.ರಾಜೇಂದ್ರಕುಮಾರಸ್ವಾಮಿ, ಎಚ್.ಗಂಗಾಧರ, ಪುರಸಭೆ ಸದಸ್ಯ ಭಟ್ಟ ಪ್ರಸಾದ್, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜೆ.ಜಿ. ಬಸವರಾಜ, ಪ್ರಧಾನ ಕಾರ್ಯದರ್ಶಿ ಸೈಯದ್ ಉಸ್ಮಾನ್, ಕಾರ್ಯದರ್ಶಿ ಎಸ್.ವೆಂಕಟೇಶ, ಎಸ್‌ಟಿ ಸೆಲ್ ಅಧ್ಯಕ್ಷ ಬಿ.ವೆಂಕಟೇಶ ಮೆರವಣಿಗೆಯಲ್ಲಿ ಇದ್ದರು. ಜೆಡಿಎಸ್ ಅಭ್ಯರ್ಥಿ ಕಗ್ಗಲ್ ಎಸ್.ವೀರೇಶಪ್ಪ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.  ಜೆಡಿಎಸ್ ಯುವ ಮುಖಂಡ ಎನ್.ಭರತರೆಡ್ಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಎಚ್.ಶಿವಶಂಕರಗೌಡ, ಜೆಡಿಎಸ್ ಕಂಪ್ಲಿ ನಗರ ಘಟಕ ಅಧ್ಯಕ್ಷ ತಾಳೂರು ವೆಂಕಟೇಶ ಭಾಗವಹಿಸಿದ್ದರು.
ಬಿಜೆಪಿ ಅಭ್ಯರ್ಥಿ ಬಿ.ಶಿವಕುಮಾರ್ ತಮ್ಮ ಬೆಂಬಲಿಗರೊಂದಿಗೆ ಉದ್ಭವ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆಯೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ 1ನಾಮಪತ್ರ ಸಲ್ಲಿಸಿದರು.
ಕಂಪ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜಿ.ಲಿಂಗನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಪೂಜಪ್ಪ, ಅಗಳಿ ಪಂಪಾಪತಿ, ಮುಖಂಡರಾದ ಜಿ.ರಾಜಾರಾವು, ಕೆ.ಆತ್ಮಾರಾಂ, ಯುವ ಘಟಕ ಅಧ್ಯಕ್ಷ ಡಿ.ಎಚ್.ಎಂ. ರವೀಂದ್ರ, ಸಿ.ಶರಣಗೌಡ, ವಿ.ಟಿ.ರಾಜು, ಶಿಲ್ಪ ನಾಗರಾಜ ಮತ್ತಿತರರು ಇದ್ದರು.
ಪಕ್ಷೇತರ (ಬಿಜೆಪಿ ಬಂಡಾಯ) ಅಭ್ಯರ್ಥಿ ಸುಗ್ಗೇನಹಳ್ಳಿ ಬಿ.ಕರಿಯಪ್ಪ ತಮ್ಮ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಬಿ.ತಿರುಕಪ್ಪ, ವಿ.ಗೋವಿಂದಪ್ಪ, ವಿ.ಹನುಮಂತಪ್ಪ, ಸಜ್ಜೇದ ಸಿದ್ದಲಿಂಗಪ್ಪ ಇದ್ದರು.
ಬಿಎಸ್‌ಪಿ ಅಭ್ಯರ್ಥಿ ವಿ.ಸೋಮಶೇಖರ ತಮ್ಮ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಉಮಾಪತಿ, ಚಿದಾನಂದ, ರಮೇಶ, ಮರಿಲಿಂಗಣ್ಣ ಇದ್ದರು.
ಇನ್ನೊಬ್ಬ ಕಾಂಗ್ರೆಸ್ ಅಭ್ಯರ್ಥಿ ಡಿ.ನಾರಾಯಣಪ್ಪ ತಮ್ಮ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ವೆಂಕಟೇಶ ನಾಯಕ, ಸೈಯದ್ ಉಸ್ಮಾನ್, ರಾಜು , ಸಿ.ಆನಂದ ಇದ್ದರು.
ಮತ್ತೊಮ್ಮೆ ನಾಮಪತ್ರ ಸಲ್ಲಿಕೆ: ಸೋಮವಾರ ನಾಮಪತ್ರ ಸಲ್ಲಿಸಿದ್ದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಟಿ.ಎಚ್.ಸುರೇಶಬಾಬು 2 ನಾಮಪತ್ರ ಮತ್ತು ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ಎಚ್.ಡಿ. ಬಸವರಾಜು 1 ನಾಮಪತ್ರ ಬುಧವಾರ ಸಲ್ಲಿಸಿದರು.
ಚುನಾವಣಾಧಿಕಾರಿ ಟಿ.ವೆಂಕಟೇಶ ನಾಮಪತ್ರ ಸ್ವೀಕರಿಸಿದರು. ಸಹಾಯಕ ಚುನಾವಣಾದಿಕಾರಿ ಜಿ.ನಂಜಪ್ಪ, ಕುರುಗೋಡು ವಿಶೇಷ ತಹಸೀಲ್ದಾರ್ ಎಚ್.ವಿಶ್ವನಾಥ, ಕಂಪ್ಲಿ ನಾಡ ತಹಸೀಲ್ದಾರ್ ಕೆ.ಬಾಲಪ್ಪ, ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ಬಿ.ಬೀರಣಗಿ ಹಾಗು ಚುನಾವಣಾ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.