ಬಂಡಾಯ ತಣ್ಣಗಾದರೂ ಕಾಂಗ್ರೆಸ್ ಗೆಲವು ಸಾಧ್ಯವೆ?
ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 20
ಬಂಡಾಯದ ಭೀತಿ ನಡುವೆ ಕಾಂಗ್ರೆಸ್ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ. 20
ಬಂಡಾಯದ ಭೀತಿ ನಡುವೆ ಕಾಂಗ್ರೆಸ್ಗೆ ಎಲ್ಲಿ ದೊಡ್ಡ ಪೆಟ್ಟಾಗುತ್ತದೋ ಎಂಬ ಭಯದಲ್ಲಿದ್ದ ಕಾಂಗ್ರೆಸ್ನವರಿಗೆ, ನಾಮಪತ್ರ ಹಿಂದಕ್ಕೆ ಪಡೆಯುವ ದಿನವಾದ ಶನಿವಾರ ಬಳ್ಳಾರಿ ನಗರದ ಕ್ಷೇತ್ರದಿಂದ ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೋನಂಕಿ ರಾಮಪ್ಪ ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ ನಗರ ಕ್ಷೇತ್ರದ ಅಭ್ಯರ್ಥಿ ಅನಿಲ್ ಲಾಡ್ಗೆ ಕೊಂಚ ನಿರಾಳವಾದಂತಾಗಿದೆ.
ಆದರೆ ಇದೀಗ ಅನಿಲ್ ಲಾಡ್ ಕಾಂಗ್ರೆಸ್ ಹಿರಿಯ ಮುಖಂಡರ ಭಿನ್ನಮತವನ್ನು ಶಮನ ಮಾಡುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
ತಣ್ಣಗಾದ ಬಂಡಾಯ ಅಭ್ಯರ್ಥಿ: ಬಳ್ಳಾರಿ ನಗರ ಕ್ಷೇತ್ರದ ಮಟ್ಟಿಗೆ ಕಾಂಗ್ರೆಸ್ಗೆ ಕಾಂಗ್ರೆಸ್ ಪಕ್ಷವೇ ಎದುರಾಳಿ ಎನ್ನುವಷ್ಟರ ಮಟ್ಟಿಗೆ ಪಕ್ಷದ ಮುಖಂಡರಲ್ಲಿ ಭಿನ್ನಮತ ಇದೆ. ಈ ನಿಟ್ಟಿನಲ್ಲು ಕಾಂಗ್ರೆಸ್ ಮುಖಂಡ ಕೋನಂಕಿ ರಾಮಪ್ಪ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ಗೆ ಬಂಡಾಯ ಬಾವುಟ ತೋರಿಸಿದ್ದರು. ಇದರಿಂದ ಅನಿಲ್ ಲಾಡ್ಗೆ ರಾಮಪ್ಪ ಅವರ ಬಂಡಾಯ ತಲೆನೋವಾಗಿ ಪರಿಣಮಿಸಿತ್ತು. ಆದರೆ, ಇದೀಗ ಕಾಂಗ್ರೆಸ್ ಮುಖಂಡರು ಹಾಗೂ ಅನಿಲ್ ಲಾಡ್ ಅವರು ಕೋನಂಕಿ ರಾಮಪ್ಪ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿ, ನಾಮಪತ್ರ ಹಿಂಪಡೆಯುವಂತೆ ಮಾಡಿದ್ದು, ಕಾಂಗ್ರೆಸ್ಗೆ ಒಂದು ಸಮಸ್ಯೆ ಬಗೆಹರಿದಂತಾಗಿದೆ.
ಭಿನ್ನಮತ ಶಮನದ ತಂತ್ರ: ಬಂಡಾಯ ಅಭ್ಯರ್ಥಿಯ ಬಿಸಿ ತಣ್ಣಗಾದರೂ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ದಿವಾಕರಬಾಬು, ಕೆ.ಸಿ. ಕೊಂಡಯ್ಯ ಹಾಗೂ ಅಲ್ಲಂ ವೀರಭದ್ರಪ್ಪ ಅವರನ್ನು ಮನವೊಲಿಸಲು ಪಕ್ಷ ಮುಂದಾಗಬೇಕಾಗಿದೆ. ಕಾರಣ ನಗರ ಕ್ಷೇತ್ರದಲ್ಲಿ ಈ ಮೂವರ ಪ್ರಾಬಲ್ಯ ಇರುವ ಹಿನ್ನೆಲೆಯಲ್ಲಿ ಅವರ ಮನವೊಲಿಯಿಂದ ಕಾಂಗ್ರೆಸ್ ಗೆಲವಿಗಿರುವ ಆಂತರಿಕ ಅಡ್ಡಿ ತೊಡೆದು ಹಾಕಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಅನಿಲ್ ಲಾಡ್ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಹಲವು ಮುಖಂಡರನ್ನು ಭೇಟಿ ಮಾಡಿರುವ ಅನಿಲ್ ಲಾಡ್, ತಮ್ಮಲ್ಲಿರುವ ಭಿನ್ನಾಭಿಪ್ರಾಯ ತೊಡೆದು ಹಾಕುವ ಮೂಲಕ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಮುಂದುವರಿದ ಹಳೆಯ ಚಾಳಿ: ಕಳೆದ ಹತ್ತು ವರ್ಷಗಳಿಂದ ಜಿಲ್ಲೆ ಸೇರಿದಂತೆ ರಾಜರ್ಯದಲ್ಲಿ ಅಧಿಕಾರದಿಂದ ಕಾಂಗ್ರೆಸ್ ಪಕ್ಷ ದೂರ ಉಳಿಯಲು ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಪ್ರಾಬಲ್ಯ ಒಂದು ಕಡೆಯಾದರೆ. ಕಾಂಗ್ರೆಸ್ನಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಸಹಜವಾಗಿಯೇ ಕಾಂಗ್ರೆಸ್ನ್ನು ಅಧಿಕಾರದಿಂದ ದೂರ ಉಳಿಯುವಂತೆ ಮಾಡಿವೆ. ಇದೀಗ ಬಳ್ಳಾರಿ ನಗರ ಕ್ಷೇತ್ರದಲ್ಲಿ ಪ್ರಬಲ ಪ್ರತಿಸ್ಪರ್ಧಿ ಕೊರತೆ ಇದ್ದರೂ, ಈಗಲೂ ಕಾಂಗ್ರೆಸ್ ಮುಖಂಡರು ಹಳೆಯ ಚಾಳಿ ಮುಂದುವರೆಸಿದ್ದಾರೆ. ಈ ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಕಾಂಗ್ರೆಸ್ಗೆ ದೊಡ್ಡ ಹೊಡೆತ ಬೀಳಲಿದೆ. ಅಲ್ಲದೆ, ಸ್ಥಳೀಯ ಕಾಂಗ್ರೆಸ್ ಮುಖಂಡರಿಗೂ ಭವಿಷ್ಯದಲ್ಲಿ ಪೆಟ್ಟಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕಾಂಗ್ರೆಸ್ ಆಂತರಿಕ ಭಿನ್ನಮತ ಬಿಎಸ್ಸಾರ್ಗೆ ವರವಾದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮಲಗಿದಂತೆಯೇ ಸರಿ ಎಂಬ ಮಾತುಗಳು ಕೇಳಿಬರುತ್ತಿವೆ.
ವೀಕ್ಷಕರಿಂದ ಮನವೊಲಿಕೆ: ದಿವಾಕರಬಾಬುಗೆ ಟಿಕೆಟ್ ನೀಡಿಲ್ಲ ಎಂದು ಮುನಿಸಿಕೊಂಡಿರುವ ಮಹಾನಗರ ಪಾಲಿಕೆಯ 26 ಕಾಂಗ್ರೆಸ್ ಸದಸ್ಯರ ಮನವೊಲಿಸುವ ಪ್ರಯತ್ನಕ್ಕೆ ನ್ನು ಅನಿಲ್ ಲಾಡ್ ಮುಂದಾಗಿದ್ದಾರೆ. ಕಳೆದ ಎರಡು ದಿನಗಳಿಂದಲೂ ಅವರು ಈ ಕಾರ್ಯವನ್ನು ಮುಂದುವರೆಸಿದ್ದಾರೆ. ಈಗಾಗಲೇ ಕೋನಂಕಿ ರಾಮಪ್ಪ ಅವರನ್ನು ಇದೇ ದಾಳದಿಂದ ಉರುಳಿಸುವಲ್ಲಿ ಯಶಸ್ವಿಯಾಗುವ ಮೂಲಕ ದೊಡ್ಡ ತಲೆನೋವನ್ನು ನಿವಾರಿಸಿಕೊಂಡಿದ್ದಾರೆ. ಎಐಸಿಸಿ ವೀಕ್ಷಕರಾದ ಆಂಧ್ರಪ್ರದೇಶ ಸಂಸದ ಎಸ್.ಟಿ.ವೈ. ರೆಡ್ಡಿ ಅವರು ಬಳ್ಳಾರಿಗೆ ಆಗಮಿಸಿ, ಎಲ್ಲರೂ ಒಟ್ಟಾಗಿ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ ತಾಗಿತ್ತು. ಆದರೆ ವಿ.ಕೆ. ಬಸಪ್ಪ ಅವರನ್ನು ಪಕ್ಷದ ಹಿರಿಯ ಮುಖಂಡರು ಮನವೊಲಿಸಿದ್ದರಿಂದ ಬಸಪ್ಪ ಅವರು ಕೊನೆ ಗಳಿಗೆಯಲ್ಲಿ ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿದ್ದ ಬಂಡಾಯ ತಣ್ಣಗಾಗಿದೆ. ಇಷ್ಟಾದರೂ ನಗರ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಕಾಂಗ್ರೆಸ್ಸಿಗರಿಗಿಲ್ಲ ಎಂದೇ ಹೇಳಲಾಗುತ್ತಿದೆ. ಎಲ್ಲದಕ್ಕೂ ಮೇ 8ರಂದು ಖಚಿತ ಉತ್ತರ ಸಿಗಲಿದೆ.
ಕೂಡ್ಲಿಗಿ ಕ್ಷೇತ್ರ: ಮೂವರು ಯುವಕರು ಕಣಕ್ಕೆ
ಬಿಎಸ್ಪಿ, ಪಕ್ಷೇತರರಾಗಿ ಸ್ಪರ್ಧಿಸಿದ ಯುವಕರು
ಕೂಡ್ಲಿಗಿ: ಇದುವರೆಗೂ ಕೂಡ್ಲಿಗಿ ವಿಧಾನಸಭೆ ಕ್ಷೇತ್ರ ಎಂದರೆ ರಾಜಕೀಯದಲ್ಲಿ ಹತ್ತಾರು ವರ್ಷ ಸೇವೆ ಸಲ್ಲಿಸಿದವರು, 40 ವರ್ಷ ದಾಟಿದವರು ನಾಮಪತ್ರ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ಏನೂ ಅರಿಯದ ಮುಗ್ಧರಂತಿರುವ 30ರ ಆಸುಪಾಸಿನ ಮೂವರು ಯುವಕರು ಚುನಾವಣೆಗೆ ಸ್ಪರ್ಧಿಸಿ, ಅದೃಷ್ಟ ಪರೀಕ್ಷೆಗೆ ಮುಂದಾಗಿರುವುದು ಮತದಾರರಲ್ಲಿ ಕುತೂಹಲ ಮೂಡಿಸಿದೆ.
ಕೂಡ್ಲಿಗಿ ತಾಲೂಕು ರಾಮಸಾಗರಹಟ್ಟಿ ಗ್ರಾಮದ ಅಪ್ಪಯ್ಯ ಎನ್ನುವ 29 ವಯಸ್ಸಿನ ಯುವಕ ಪಕ್ಷೇತರನಾಗಿ ಕಣಕ್ಕಿಳಿದಿದ್ದು, ಹಗರಿಬೊಮ್ಮನಹಳ್ಳಿ ತಾಲೂಕು ಪಿಂಜಾರ್ ಹೆಗ್ಡಾಳ್ ಗ್ರಾಮದ 30ರ ಹರೆಯದ ಎಂ. ಕರಿಬಸಪ್ಪ ಬಿಎಸ್ಪಿಯಿಂದ ಕಣಕ್ಕಿಳಿದಿದ್ದಾನೆ. ಅಲ್ಲದೆ ಕೂಡ್ಲಿಗಿ ತಾಲೂಕು ಉಜ್ಜಿನಿ ಗ್ರಾಮದ ಕಜ್ಜೇರ್ ಅಂಜಿನಪ್ಪ ಎನ್ನುವ 39 ವಯಸ್ಸಿನ ಯುವಕ ಪಕ್ಷೇತರನಾಗಿ ಕಣಕ್ಕಿಳಿದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಮೂವರು ಅಭ್ಯರ್ಥಿಗಳಲ್ಲಿ ಯಾರೂ ಉನ್ನತ ವ್ಯಾಸಾಂಗ ಮಾಡಿಲ್ಲ. ಆದರೂ ಚುನಾವಣೆಗೆ ಸ್ಪರ್ಧಿಸಿ ಪ್ರಜಾಪ್ರಭುತ್ವದಲ್ಲಿ ಇರುವ ತಮ್ಮ ಹಕ್ಕುಗಳನ್ನು ಚಲಾಯಿಸಲು, ಜನಸೇವೆ ಮಾಡಲು ಕಣಕ್ಕೆ ಉತ್ಸಾಹದಿಂದಲೇ ಧುಮುಕಿದ್ದಾರೆ. ಇದೇ ಮೊದಲ ಬಾರಿಗೆ ಕೂಡ್ಲಿಗಿ ಕ್ಷೇತ್ರದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದೆ ಬಂದಿದ್ದು, ಚುನಾವಣೆಗೆ ರಂಗು ತಂದಿದ್ದಾರೆ.
'ನಮ್ಗೆ ಸೋಲು, ಗೆಲವು ಮುಖ್ಯ ಅಲ್ಲ. ಜನಸೇವೆ ಮಾಡ್ಬೇಕು, ನಾನು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಕನಾಗಿದ್ದು, ನಮ್ಮದು ಹಗರಿಬೊಮ್ಮನಹಳ್ಳಿ ತಾಲೂಕಾಗಿದ್ದರಿಂದ ಅಲ್ಲಿ ಎಸ್ಸಿ ಮೀಸಲು ಇದೆ. ಹೀಗಾಗಿ ಕೂಡ್ಲಿಗಿ ಕ್ಷೇತ್ರಕ್ಕೆ ಬಂದು ಇಲ್ಲಿ ಎಸ್ಟಿ ಮೀಸಲು ಇದ್ದಿದ್ರಿಂದ ಇಲ್ಲೇ ಕಣಕ್ಕಿಳಿದಿದ್ದೇನೆ ಎನ್ನುತ್ತಾರೆ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಎಂ. ಕರಿಬಸಪ್ಪ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಕೂಡ್ಲಿಗಿ ವಿಧಾನಸಭೆ ಕ್ಷೇತ್ರ ಹೊಸ ತಿರುವನ್ನು ಪಡೆದುಕೊಂಡಿದೆ.
ಗೆ ಎಲ್ಲಿ ದೊಡ್ಡ ಪೆಟ್ಟಾಗುತ್ತದೋ ಎಂಬ ಭಯದಲ್ಲಿದ್ದ ಕಾಂಗ್ರೆಸ್ನವರಿಗೆ, ನಾಮಪತ್ರ ಹಿಂದಕ್ಕೆ ಪಡೆಯುವ ದಿನವಾದ ಶನಿವಾರ ಬಳ್ಳಾರಿ ನಗರದ ಕ್ಷೇತ್ರದಿಂದ ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೋನಂಕಿ ರಾಮಪ್ಪ ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ ನಗರ ಕ್ಷೇತ್ರದ ಅಭ್ಯರ್ಥಿ ಅನಿಲ್ ಲಾಡ್ಗೆ ಕೊಂಚ ನಿರಾಳವಾದಂತಾಗಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.