ಸಾಣೇಹಳ್ಳಿಯಿಂದ ಬಸವ ಸಂಚಾರಕ್ಕೆ ಚಾಲನೆ
ಹೊಸದುರ್ಗ: ಬಸವಜಯಂತಿಯ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶಿವಕುಮಾರ ಕಲಾಸಂಘ ಬಸವಸಂಚಾರ ಕಾರ್ಯಕ್ರಮಕ್ಕೆ ಶನಿವಾರ ಬೆಳಿಗ್ಗೆ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಬಸವ ಸಂಚಾರ ಹೊಸದುರ್ಗ, ಹೊಳಲ್ಕೆರೆ ಮೂಲಕ ದಾವಣೆಗೆರೆಗೆ ತಲುಪಲಿದೆ. ಈ ಯೋಜನೆಯನ್ವಯ ಪ್ರತಿ ಊರಲ್ಲಿ ವಚನಗೀತೆ, ಆಶೀರ್ವಚನ ಹಾಗೂ ನಾಟಕ ಪ್ರದರ್ಶನ ನೀಡಿದರು. ಮಾರಬಗಟ್ಟ ಗೇಟ್, ನೀರಗುಂದ ಗೇಟ್, ಪೀಲಾಪುರ, ಹರಳಹಳ್ಳಿ ಗೇಟ್, ಬೋಕಿಕೆರೆ ಗೇಟ್ ಮೂಲಕ ಹೊಸದುರ್ಗ ತಲುಪಿ ಅಲ್ಲಿಂದ ಮಧುರೆ, ಗುತ್ತಿಕಟ್ಟೆ, ದೇವಿಗೆರೆ, ಹೆರೂರು- ಹೆಬ್ಬಳ್ಳಿ ಗೇಟ್, ಮಾವಿನಕಟ್ಟೆ, ಬೀಸನಳ್ಳಿ- ನಾಗರಕಟ್ಟೆ ಗೇಟ್ ಮೂಲಕ ಹೊಳಲ್ಕೆರೆ ಕಡೆ ಸಾಗಿತು.
ಶನಿವಾರಸಂತೆ: ತೋಟಕ್ಕೆ ನುಗ್ಗಿ ಕಾಡಾನೆ ದಾಂದಲೆ
ಶನಿವಾರಸಂತೆ: ಇಲ್ಲಿಗೆ ಸಮೀಪದ ಗೋಪಾಲಪುರ ಗ್ರಾಮದ ಕಾಫಿ ಬೆಳೆಗಾರ ಜಿ.ಪಿ. ಪುಟ್ಟಪ್ಪ ಎಂಬುವರ ಕಾಫಿ ತೋಟ, ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಗಳು ದಾಂಧಲೆ ನಡೆಸಿವೆ. ಕೆಲವು ದಿನಗಳಿಂದ ಮರಿಯಾನೆ ಹಾಗೂ ದೊಡ್ಡಾನೆಗಳು ಸೇರಿದಂತೆ 3 ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಿವೆ. ಕಾಫಿಗಿಡಗಳು, ಬಾಳೆ ಗಿಡಗಳನ್ನು ಧ್ವಂಸಗೊಳಿಸಿದ್ದು ತಮಗೆ ಸುಮಾರು 1 ಲಕ್ಷ ಫಸಲು ನಷ್ಟ ಉಂಟಾಗಿದೆ ಎಂದು ಪುಟ್ಟಪ್ಪ ಅವರು ಅರಣ್ಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸ್ಫೋಟಕ ವಸ್ತುಗಳ ವಶ
ಶಿವಮೊಗ್ಗ: ಮನೆಯೊಂದರ ಹಿಂಭಾಗದಲ್ಲಿನ ಕೊಟ್ಟಿಗೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿ ಕಲ್ಲು ಕೋರೆ ಮಾಲೀಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಘಟನೆ ತಾಲೂಕಿನ ದೊಡ್ಡಿಬೀಳು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಕೃಷ್ಣಪ್ಪ ಎಂಬುವವರ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಸ್ಫೋಟಕಗಳನ್ನು ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 50 ಕೆ.ಜಿ. ತೂಕದ 2 ಚೀಲ ಅಮೋನಿಯಂ ನೈಟ್ರೇಟ್, 30 ಜಿಲೆಟಿನ್ ನೋಟಗಳು, ಕನೆಕ್ಟ್ ನೀಡಲಾಗಿದ್ದ 30 ಕೇಪುಗಳು, ಕನೆಕ್ ಮಾಡದ 10 ಕೇಪುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

