ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್ ಪರ ಮತಯಾಚನೆ.
ಹಗರಿಬೊಮ್ಮನಹಳ್ಳಿ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಲ್. ಮಾರೆಣ್ಣ ಪರ ಮಂಗಳವಾರ ಮಧ್ಯಾಹ್ನ ಪಕ್ಷದ ಹಿರಿಯ ಮುಖಂಡ ಹೆಗ್ಡಾಳ್ ರಾಮಣ್ಣ ನೇತೃತ್ವದಲ್ಲಿ ತಾಲೂಕಿನ ತಂಬ್ರಹಳ್ಳಿ, ಮುತ್ಕೂರು, ಕಿತ್ನೂರು, ತೆಲಗೋಳಿ ಸೇರಿದಂತೆ ವಿವಿಧೆಡೆ ಮತಯಾಚಿಸಿದರು.
ಪಕ್ಷದ ಅಭ್ಯರ್ಥಿ ಎಲ್. ಮಾರೆಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ಪಕ್ಷದ ಕಾನೂನು ಘಟಕದ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಜಿಪಂ ಮಾಜಿ ಸದಸ್ಯ ಉಲುವತ್ತಿ ಸೋಮಲಿಂಗಪ್ಪ, ತಾಪಂ ಮಾಜಿ ಅಧ್ಯಕ್ಷ ಟಿ. ಪ್ರಭಾಕರ, ತಾಪಂ ಮಾಜಿ ಸದಸ್ಯರಾದ ರಾಯರಾಳುತಾಂಡ ಕೃಷ್ಣನಾಯ್ಕ, ಎಚ್. ನೇತಾಜಿಗೌಡ, ಎಪಿಎಂಸಿ ಸದಸ್ಯ ಅಂಬಾಡಿ ನಾಗರಾಜ, ಚಿಲಗೋಡು ಚೌಟಗಿ ಕರಿಯಪ್ಪ, ಸಿ.ಬಸವರಾಜ, ಬಲ್ಲಾಹುಣ್ಸಿ ಚನ್ನಬಸಪ್ಪ ಇದ್ದರು.
ರೈತ ವಿರೋಧಿಗಳನ್ನು ದೂರವಿಡಲು ನಿರ್ಣಯ ್ಪ
ಹಗರಿಬೊಮ್ಮನಹಳ್ಳಿ: ಭ್ರಷ್ಟರು, ರೈತ ವಿರೋಧಿಗಳನ್ನು, ಚುನಾವಣೆಯಲ್ಲಿ ರೈತರ ಪರವಾಗಿ ಮೊಸಳೆ ಕಣ್ಣೀರು ಸುರಿಸಿ, ಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ರೈತರ ಮೇಲೆ ಪ್ರಹಾರ ನಡೆಸುವ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಸಂಪೂರ್ಣ ದೂರವಿಡುವ ನಿರ್ಣಯವನ್ನು ರಾಜ್ಯ ರೈತ ಸಂಘದ ತಾಲೂಕು ಘಟಕ ಅಂಗಿಕರಿಸಿದೆ.
ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಜರುಗಿದ ಸಭೆಯಲ್ಲಿ, ರೈತರ ಪರ ದುಡಿಯುವ ಹಾಗೂ ಕೃಷಿ ವಲಯದ ಅಭ್ಯುದಯಕ್ಕಾಗಿ ಶ್ರಮಿಸುವ ಅಭ್ಯರ್ಥಿಗಳನ್ನು ರೈತ ಸಂಘ ಗುರುತಿಸುತ್ತದೆ. ರೈತ ಸಂಘ ಗುರುತಿಸುವ ಅಭ್ಯರ್ಥಿಗೆ ರೈತ ಮತದಾರರು ಮತ ಚಲಾಯಿಸುವ ಮೂಲಕ ರಾಜ್ಯದಲ್ಲಿ ರೈತರ ಪರ ಧ್ವನಿ ಎತ್ತುವ ಜನಪ್ರತಿನಿಧಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಯಿತು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ. ವೀರಸಂಗಯ್ಯ ಮಾತನಾಡಿ, ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕು ಅತ್ಯಂತ ಪವಿತ್ರವಾದುದು. ಮತವನ್ನು ಹಣ, ಮದ್ಯಕ್ಕೆ ಮಾರಾಟ ಮಾಡಿಕೊಳ್ಳದೆ, ಜಾತಿ ವ್ಯಾಮೋಹಕ್ಕೆ ಬಲಿಯಾಗದೆ ರೈತರ ಬಗ್ಗೆ ಕಾಳಜಿ ಇರುವ ಅಭ್ಯರ್ಥಿಗಳನ್ನು ರೈತರು ಬೆಂಬಲಿಸುವುದು ಪ್ರಸಕ್ತ ದಿನಮಾನಗಳಲ್ಲಿ ತೀರಾ ಅಗತ್ಯವಿದೆ ಎಂದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಜೀವನಾಡಿ ಮಾಲ್ವಿ ಡ್ಯಾಂಗೆ ಶಾಶ್ವತ ನೀರೊದಗಿಸುವ ಯೋಜನೆ ಹಲವು ದಶಕಗಳಿಂದಲೂ ನೆನೆಗುದಿಗೆ ಬಿದ್ದಿದೆ. ಚುನಾವಣೆ ಬಂದಾಗ ಮಾತ್ರ ಈ ವಿಚಾರ ಚರ್ಚೆಗೆ ಬಂದು ನಂತರ ಕಣ್ಮರೆಯಾಗುತ್ತಲೆ ಬಂದಿದೆ. ಈ ಬಾರಿ ಮಾಲ್ವಿ ಡ್ಯಾಂಗೆ ಶಾಶ್ವತ ನೀರೋದಗಿಸುವ ಯೋಜನೆಯನ್ನು ಒಂದು ವರ್ಷದೊಳಗೆ ಜಾರಿಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳುವ ಅಭ್ಯರ್ಥಿಗೆ ರೈತರು ಮನ್ನಣೆ ನೀಡಬೇಕು. ಕೇವಲ ಮತಕ್ಕಾಗಿ ಡ್ಯಾಂಗೆ ನೀರು ತರುತ್ತೇನೆಂದು ಹೇಳುವವರನ್ನು ರೈತರು ಬೆಂಬಲಿಸಬಾರದು ಎಂದರು.
ರಾಜ್ಯ ರೈತ ಸಂಘದ ಹಸಿರು ಸೇನೆ ಅಧ್ಯಕ್ಷ ಗೋಣಿಬಸಪ್ಪ, ಮುಖಂಡರಾದ ಸಿದ್ದನಗೌಡ, ಸಿದ್ದರೆಡ್ಡಿ, ಮಾಬುಸಾಬ್, ಸೋಗಿ ಶರಣಪ್ಪ, ಜಿ. ಸೂರ್ಯಬಾಬು, ನೂತನ ತಾಲೂಕು ಸಂಚಾಲಕ ಎಣಿಗಿ ಪೀರಾಸಾಬ್, ಮಾಬುಸಾಹೇಬ್, ಕೊಟ್ರೇಶ್, ಅನಂದಳ್ಳಿ ಕೊಟ್ರದೇವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

