ಇಂದು ಯೋಗ, ಪ್ರಕೃತಿ ಚಿಕಿತ್ಸಾ ಶಿಬಿರ
ಬಳ್ಳಾರಿ: ನಗರದ ಕೆ.ಸಿ. ರಸ್ತೆಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಏ. 29ರಂದು ಕೀಲುನೋವು ಮತ್ತು ಸೊಂಟನೋವಿಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಸರ್ಜನ್ ತಿಳಿಸಿದ್ದಾರೆ. ಸಾರ್ವಜನಿಕರು ಈ ಉಚಿತ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಿಇಟಿ: ನಿಷೇಧಾಜ್ಞೆ ಜಾರಿ
ಬಳ್ಳಾರಿ: ಜಿಲ್ಲೆಯಲ್ಲಿ ಮೇ 1, 2013 ಹಾಗೂ ಮೇ 2, 2013ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ಮೇ 1 ಹಾಗೂ 2ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಪರೀಕ್ಷಾ ಕೇಂದ್ರದ ಸುತ್ತಮುತ್ತ ಇರುವ ಎಲ್ಲ ಜೆರಾಕ್ಸ್ ಸೆಂಟರ್ ಮತ್ತು ಸೈಬರ್ ಕೆಫೆಗಳನ್ನು ಮುಚ್ಚಬೇಕು. ಶಸ್ತ್ರ, ಬಂದೂಕು, ಚೂರಿ, ಲಾಠಿ ಮತ್ತಿತರ ಶರೀರಕ್ಕೆ ಗಾಯ ಮಾಡಲು ಬಳಸುವ ಯಾವುದೇ ರೀತಿಯ ವಸ್ತುಗಳನ್ನು ಹಾಗೂ ಸ್ಫೋಟಕ ವಸ್ತುಗಳನ್ನು ನಿಷೇಧಿತ ಪ್ರದೇಶದಲ್ಲಿ ಒಯ್ಯುವಂತಿಲ್ಲ. ಬಹಿರಂಗ ಘೋಷಣೆ, ಪದ ಹಾಡುವುದು, ವಾದ್ಯ ಬಾರಿಸುವುದನ್ನು ಪರೀಕ್ಷೆ ನಡೆಯುವ ದಿನಗಳಂದು ನಿರ್ಬಂಧಿಸಲಾಗಿದೆ. ಪರೀಕ್ಷೆಗಳನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಸೇರಿದ ಹಲವು ಮುಖಂಡರು
ಸಂಡೂರು: ಕಾಂಗ್ರೆಸ್ ಮುಖಂಡ ವಿಶ್ವಾಸ್ ಲಾಡ್ ಅವರ ಸಮ್ಮುಖದಲ್ಲಿ ಗುರುವಾರ ತಾಲೂಕಿನ ಜೆಡಿಎಸ್ ಪಕ್ಷದ ಹಲವು ಮುಖಂಡರು ಕಾಂಗ್ರೆಸ್ಗೆ ಸೇರಿದರು. ಬಿ.ಜಯಣ್ಣ, ನಿಂಗಪ್ಪ ಐಹೊಳೆ, ಎಂ.ನಾಗರಾಜ, ಟಿ.ಬುಳ್ಳಯ್ಯ, ಬಣಕಾರ್ ಈರಣ್ಣ, ನಾರಾಯಣಪ್ಪ, ಉರುಕುಂದಿ ಈರಣ್ಣ, ನಿಡಗುರ್ತಿ ಅಂಜಿನಪ್ಪ, ಅಜ್ಜಪ್ಪ, ನವಲೂಟಿಯ ಕೊಮಾರಪ್ಪ, ಹುಲುಗಪ್ಪ, ಯರಿಸ್ವಾಮಿ, ರಣಜಿತಪುರದ ಎಚ್.ಟಿ.ಈರಣ್ಣ, ರಮೇಶ, ಲೋಕಪ್ಪ, ತಿಪ್ಪಣ್ಣ, ಹುಲುಗಪ್ಪ ಮುಂತಾದವರು ಕಾಂಗ್ರೇಸ್ ಸೇರಿದರು. ಕಾಂಗ್ರೇಸ್ ಮುಖಂಡರಾದ ರೋಷನ್ ಜಮೀರ್, ಎಲ್.ಎಚ್. ಶಿವಕುಮಾರ್, ನಬಿಸಾಬ್, ರಾಘವೇಂದ್ರ, ಮರಿಸ್ವಾಮಿ ಮುಂತಾದವರು ಇದ್ದರು.
ಹೊನ್ನೂರಪ್ಪ ಪ್ರಚಾರ
ಬಳ್ಳಾರಿ: ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಸುಂಡಿ ಹೊನ್ನೂರಪ್ಪ ಪರವಾಗಿ, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಂ. ದಿವಾಕರ ಬಾಬು, ನಗರದ ಕೌಲ್ ಬಜಾರ್ನ 3, 24, 26, 27ನೆಯ ವಾರ್ಡ್ಗಳಿಗೆ ತೆರಳಿ ಪ್ರಚಾರ ನಡೆಸಿದರು. ಈ ಬಾರಿ ಚುನಾವಣೆಯಲ್ಲಿ ಅಸುಂಡಿ ಹೊನ್ನೂರಪ್ಪ ಅವರನ್ನು ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಚೋಟಾ ಕಸಾಯಿಗಲ್ಲಿಯ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಜಾಫರ್, ಫಿರೋಜ್, ಅಬ್ದುಲ್ ಗನಿ, ಕರಿಮುಲ್ಲ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಹಲವಾರು ಕಾರ್ಯಕರ್ತರು ಮಾಜಿ ಸಚಿವ ಎಂ. ದಿವಾಕರ ಬಾಬು, ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷ ಅಲ್ಲಾಬಕ್ಷ್ ಸಮ್ಮುಖ ಕಾಂಗ್ರೆಸ್ ಸೇರ್ಪಡೆಯಾದರು. ಪಾಲಿಕೆ ಸದಸ್ಯರಾದ ರಿಜ್ವಾನ ಬೇಗಂ, ನಸರಿನ್ ಬೇಗಂ, ದಿವ್ಯಕುಮಾರಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

