ಬಳ್ಳಾರಿ

ಜೀವನಕ್ಕೆ ಶಿಕ್ಷಣ ಬಹುದೊಡ್ಡ ಆಸ್ತಿ

Published On :

ಬಳ್ಳಾರಿ: ಪ್ರತಿಯೊಬ್ಬರ ಜೀವನಕ್ಕೆ ಶಿಕ್ಷಣ ಬಹುದೊಡ್ಡ ಆಸ್ತಿ, ಅದನ್ನು ಸಂಪಾದಿಸಲು ಎಲ್ಲರೂ ಮುಂದಾಗಬೇಕು  ಎಂದು ಮಹಾದೇವಿ ಚನ್ನನಗೌಡ ಹೇಳಿದರು.
ನಗರದ ರಾಜರಾಜೇಶ್ವರಿ ವೀರಶೈವ ಲಿಂಗವಂತ ಬಡ ವಿದ್ಯಾರ್ಥಿನಿಯರ ಉಚಿತ ವಸತಿ ಮತ್ತು ಪ್ರಸಾದ ನಿಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ 121ನೇ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವನ ಸಮೃದ್ಧಿಗೆ ಹಣಕ್ಕಿಂತ ಶಿಕ್ಷಣ ಬಹುಮುಖ್ಯ, ವಿದ್ಯೆಯ ಕುರಿತು ಪರಿಣಾಮಕಾರಿಯಾಗಿ ಸಾರಿದವರು 12ನೇ ಶತಮಾನದ ಶಿವಶರಣರು. ಏಕಕಾಲದಲ್ಲಿಯೇ 30ಕ್ಕೂ ಹೆಚ್ಚು ಅನಕ್ಷರಸ್ಥ ಮಹಿಳೆಯರು ವಚನಾಕಾರ್ತಿಯರಾಗಿ ವಚನಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಪ್ರಸಾದ ನಿಲಯದ ಅಧ್ಯಕ್ಷೆ ಸುನೀತಾ ಗುರುಲಿಂಗನಗೌಡ ಮಾತನಾಡಿದರು. ಅರಳಿಹಳ್ಳಿಯ ಶ್ರೀರಾಜರಾಜೇಶ್ವರಿ ಬೃಹನ್ಮಠದ ಗವಿಸಿದ್ಧೇಶ್ವರ ತಾತನವರು ಸಾನ್ನಿಧ್ಯತೆ ವಹಿಸಿದ್ದರು. ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಅಕ್ಕ ಪ್ರಶಸ್ತಿ ಪುರಸ್ಕೃತೆ ಅಲ್ಲಂ ಜಯದೇವಿ ದೊಡ್ಡಪ್ಪರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ, ಕೆ.ಎಂ. ಪಾರ್ವತಮ್ಮ, ಅಲ್ಲಂ ಸುನಂದಮ್ಮ, ಸಿದ್ದರಾಮಗೌಡ, ಎರ್ರಿಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.
ನಿಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಕೀಲೆ ಚಂದ್ರಕಲಾ ಚಿಂತಾಮಣಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.